/newsfirstlive-kannada/media/media_files/2025/11/15/aravinda-reddy-2025-11-15-15-28-10.jpg)
ಬೆಂಗಳೂರು: ಚಲನಚಿತ್ರ ನಟಿಗೆ ಲೈಂ*ಕ ಕಿರುಕುಳ ಆರೋಪದ ಹಿನ್ನೆಲೆ ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿಯನ್ನು ಬಂಧಿಸಲಾಗಿದೆ. AVR ಗ್ರೂಪ್ ಸಂಸ್ಥಾಪಕನಾಗಿರೋ ಅರವಿಂದ್ ರೆಡ್ಡಿ, ಸಿನಿಮಾ ಇಂಡಸ್ಟ್ರಿ ಜೊತೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು.
2021ರಲ್ಲಿ ನಟಿಗೆ ಪರಿಚಯವಾಗಿದ್ದು, ಲೈಂಗಿಕ ಕಿರುಕುಳ ಕೊಟ್ಟ ಹಿನ್ನಲೇ RR ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗ ವಿಮಾನ ನಿಲ್ದಾಣದಲ್ಲಿ ಎಸಿಪಿ ಚಂದನ್ ಮತ್ತು ತಂಡ ಅರವಿಂದ ವೆಂಕಟೇಶ್ ರೆಡ್ಡಿಯನ್ನ ಬಂಧಿಸಿದೆ.
ಉದ್ಯಮಿ ಅರವಿಂದ್​ ಕಿರುಕುಳ ತಾಳಲಾರದೆ ನಟಿ ಆತ್ಮ*ತ್ಯೆಗೂ ಯತ್ನಿಸಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಅರವಿಂದ್ ನಟಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಲ್ಲದೇ, ಮನೆಗೆ ಬರ್ತೀನಿ ಅಂತ ಕರೆ ಮಾಡಿ ಬೆದರಿಕೆ ಹಾಕಿದ್ದ.
ಹೀಗಾಗಿ ಮಾನಸಿಕ, ದೈಹಿಕ ಕಿರುಕುಳ ತಾಳದೇ ನಟಿ ಆತ್ಮ*ತ್ಯೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ನಟಿಯ ಉಳಿಸಿದ್ದೂ ಇದೇ ಅರವಿಂದ್ ರೆಡ್ಡಿ. ತನ್ನ ಸ್ನೇಹಿತನ ಜೊತೆ ಸೇರಿಕೊಂಡು ನಟಿಯನ್ನ ಆಸ್ಪತ್ರೆಗೆ ದಾಖಲಿಸಿದ್ದ. ಆಸ್ಪತ್ರೆಯಲ್ಲಿದ್ದಾಗಲೇ ನಿನ್ನ ಸಹವಾಸ ಬೇಡ ಅಂತ ನಟಿ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ಅರವಿಂದ್​ ನಟಿಯನ್ನ ಅರೆಬೆತ್ತಲೆಗೊಳಿಸಿ ರಂಪಾಟ ಮಾಡಿದ್ದ. ಈತನ ಟಾರ್ಚರ್ ಬಗ್ಗೆ ಮಹಿಳಾ ಆಯೋಗಕ್ಕೆ ನಟಿ ದೂರು ನೀಡಿದ್ದಳು. ಆರ್‌ಆರ್ ನಗರ ಠಾಣೆಯಲ್ಲಿ NCR ದಾಖಲಿಸಿದ ಬಳಿಕ ಇನ್ಮೇಲೆ ತಂಟೆಗೆ ಬರಲ್ಲ ಅಂತ ಆರೋಪಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಎನ್ನಲಾಗಿದೆ.
ಇದನ್ನೂ ಓದಿ: ‘ತಾಯಿ ತಿಮ್ಮಕ್ಕ..’ ಕವಿತೆ ಮೂಲಕ ನಮನ ಸಲ್ಲಿಸಿದ ಸಾಹಿತಿ ವಿ.ನಾಗೇಂದ್ರ ಪ್ರಸಾದ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us