/newsfirstlive-kannada/media/media_files/2025/11/15/saalumarada-timmakka-1-2025-11-15-13-30-07.jpg)
ಸಾಲುಮರದ ತಿಮ್ಮಕ್ಕ.. ಹಸಿರೇ ಉಸಿರು.. ಸಸಿಗಳೇ ಸರ್ವಸ್ವ.. ವೃಕ್ಷಮಾತೆ.. 8,000ಕ್ಕೂ ಹೆಚ್ಚು ಮರಗಳನ್ನ ಬೆಳೆಸಿದ ತಾಯಿ ಬೆಳದಿಂಗಳಿನಲ್ಲಿ ನಕ್ಷತ್ರವಾಗಿದ್ದಾರೆ. ನೆಟ್ಟ ಮರಗಳಿಗೆ ತೊಟ್ಟಿಲು ತೂಗಿದ ತಾಯಿ ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಿನ್ನೆ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: ರವಿಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ.. ತಿಮ್ಮಕ್ಕನ ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ..?
/filters:format(webp)/newsfirstlive-kannada/media/media_files/2025/11/14/salumarda-timmakka-2-2025-11-14-12-30-12.jpg)
ವೃಕ್ಷಮಾತೆಯ ಅಗಲಿಕೆಗೆ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಸದ್ಯ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪಾರ್ಥೀವ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಗಣ್ಯರು ಆಗಮಿಸಿ ತಿಮ್ಮಕ್ಕನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಿದ್ದಾರೆ.
ಕವಿತೆ ಮೂಲಕ ನಮನ
ಸಾಲು ಮರದ ತಿಮ್ಮಕ್ಕ ಅವರಿಗೆ ಖ್ಯಾತ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಕವಿತೆ ಮೂಲಕ ನಮನ ಸಲ್ಲಿಸಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದ ಹಾಡಿನ ಸಾಲುಗಳು ಹೀಗಿವೆ..
ತಾಯಿ ತಿಮ್ಮಕ್ಕ
ನೆಟ್ಟ ಮರಗಳ ಲೆಕ್ಕ ಇಟ್ಟವಳಲ್ಲ
ಕೊಟ್ಟ ಉಸಿರಿನ ಲೆಕ್ಕ ಹೇಳಿಲ್ಲಹೆಜ್ಜೆ ಹೆಜ್ಜೆಯ ಬಸಿರಿಂದ
ಹಸಿರ ಹೆತ್ತವಳು
ಅಂಗೈ ಮೊಲೆಯುಣಿಸಿ
ನೀರ ಹನಿಸಿದವಳುಅಕ್ಕಾ ಅನಿಸಿಕೊಂಡ ಅವ್ವ
ಬಿತ್ತಿದ ವೃಕ್ಷದಕ್ಷರ-ಮಿಗಿಲು
ಸಾಕ್ಷಿಗಿವೆ ಈಗಲೂ
ಬೇರಿಳಿದ ನೆಲ
ರೆಂಬೆ ಚಾಚಿದ ಮುಗಿಲುಈ ಅಕ್ಕ
ಕಲಿಸಿದ ಪಾಠ ದೊಡ್ಡದು
ಸಹಜೀವನ ಅಂದರೆ
ನೆರೆಯಾಗಿ ಬದುಕಿ ಬಿಡುವುದಲ್ಲ
ಗೆರೆ ಹಾಕಿ
ನಂಜು ಕಾರುವುದಲ್ಲ!ಮರೆಯಾದರೂ
ಧರೆಗೂ ನೆನಪಿರುವಂತೆ
ಮರವಾಗಿ; ನೆರಳಾಗಿ
ಇದ್ದು ಹೋಗುವುದುಹೋಗಿ ಬಾರಕ್ಕ...
ನೀ ಮುಟ್ಟಿದ ಸಹಸ್ರ ಸಹಸ್ರ
ಬೇರುಗಳ ಕಣ್ಣೀರು
ನಮಗೆ ಕಾಣುವುದಿಲ್ಲ !
ಸೂರು ಸಿಕ್ಕ
ಆ ಕೃತಜ್ಞ ಹಕ್ಕಿಗಳು
ಅತ್ತರೂ ಗೊತ್ತಾಗುವುದಿಲ್ಲ !ನಾವು ಮನುಷ್ಯ ಮಾತ್ರರು
ನಿನ್ನಂತಾಗದ ಕೇವಲ
ಮನುಷ್ಯರು.ವೃಕ್ಷಗಳ ತಾಯಿ
ನಾವು ಮರೆತರೂ
ಕಾಲದ ಕಾವ್ಯದಲ್ಲಿ ನೀನು
ಚಿರಸ್ಥಾಯಿ.ಡಾ.ವಿ.ನಾಗೇಂದ್ರ ಪ್ರಸಾದ್
ತಿಮ್ಮಕ್ಕನವರು ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಅಪ್ರತಿಮ ಪರಿಸರವಾದಿ. ಒಟ್ಟಾರೆ, ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಅನಾಥವಾಗಿದೆ. ಸಾಲು ಮರದ ತಿಮ್ಮಕ್ಕರಿಗೆ ಯಾವುದೇ ನಿರೀಕ್ಷೆ ಇಲ್ಲದಿದ್ರೂ ಸಿಕ್ಕ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಮರಗಳನ್ನ ಮಕ್ಕಳಂತೆ ಸಾಕಿದ ಈ ಮಾಹಾತಾಯಿಗೆ ಕೋಟಿ ನಮನ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us