ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್..!

ಹಲಸೂರು ಸಂಚಾರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಟ ಮಯೂರ್ ಪಟೇಲ್ ವಿರುದ್ಧ ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. BNS 285: ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಇತರರ ಜೀವಕ್ಕೆ ಅಪಾಯ ತಂದೊಡ್ಡುವುದು.

author-image
Ganesh Kerekuli
Mayur Patel (2)
Advertisment

ಬೆಂಗಳೂರು: ಮದ್ಯದ ಅಮಲಿನಲ್ಲಿ ಸರಣಿ ಅಪಘಾತ ಎಸಗಿದ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ ಈಗ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದೆ. ಕಳೆದ ರಾತ್ರಿ ಬೆಂಗಳೂರಿನ ಹಲಸೂರಿನಲ್ಲಿ ನಡೆದ ಈ ಭೀಕರ ಅಪಘಾತ ಪ್ರಕರಣ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ನಟನ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟನಿಂದ ಡ್ರಿಂಕ್ & ಡ್ರೈವ್ ಅಪಘಾತ.. ಇನ್ಸೂರೆನ್ಸ್ ಕೂಡ ಲ್ಯಾಪ್ಸ್..!

Mayur Patel (1)

ನಟನ ವಿರುದ್ಧ ದಾಖಲಾದ ಸೆಕ್ಷನ್‌ಗಳು ಯಾವುವು?

ಹಲಸೂರು ಸಂಚಾರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಟ ಮಯೂರ್ ಪಟೇಲ್ ವಿರುದ್ಧ ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • BNS 285: ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಇತರರ ಜೀವಕ್ಕೆ ಅಪಾಯ ತಂದೊಡ್ಡುವುದು.
  • IMV 185: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು (Drink and Drive).

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರ ಮಾಸ್ಟರ್ ಪ್ಲಾನ್: ಪಾಲಿಕೆಗೆ ಸಲ್ಲಿಕೆಯಾಯ್ತು ಬೃಹತ್ ಪಟ್ಟಿ!

Mayur Patel (1)

ಏನಿದು ಘಟನೆ?

ಬುಧವಾರ ರಾತ್ರಿ ಸುಮಾರು 10 ಗಂಟೆಗೆ ನಟ ಮಯೂರ್ ಪಟೇಲ್ ತಮ್ಮ ಫಾರ್ಚೂನರ್ ಕಾರನ್ನು ತಾವೇ ಚಲಾಯಿಸಿಕೊಂಡು ಅತೀ ವೇಗವಾಗಿ ಬರುತ್ತಿದ್ದರು. ಹಲಸೂರು ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿದ್ದ ಎರಡು ಸ್ವಿಫ್ಟ್ ಡಿಜೈರ್ ಮತ್ತು ಒಂದು ಸರ್ಕಾರಿ ವಾಹನ ಸೇರಿದಂತೆ ಒಟ್ಟು ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಯೂರ್ ಪಟೇಲ್‌ಗೆ ಡಿಡಿ (DD) ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಪಾಸಿಟಿವ್ ಬಂದಿದೆ. ಜೊತೆಗೆ ಅವರು ಚಲಾಯಿಸುತ್ತಿದ್ದ ಕಾರಿನ ಇನ್ಸೂರೆನ್ಸ್ ಕೂಡ ಲ್ಯಾಪ್ಸ್ ಆಗಿರುವುದು ಪತ್ತೆಯಾಗಿದೆ.

ಕಾರು ಸೀಜ್, ಕಾನೂನು ಕ್ರಮ

ಅಪಘಾತದ ತೀವ್ರತೆಗೆ ವಾಹನಗಳು ಪೂರ್ಣ ಜಖಂಗೊಂಡಿದ್ದು, ಪೊಲೀಸರು ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರನ್ನು ಸೀಜ್ ಮಾಡಿದ್ದಾರೆ. ಸದ್ಯ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. 

ಇದನ್ನೂ ಓದಿ:ಹೆಂಡತಿಯ ಒಡವೆ ಅಡ ಇಟ್ಟಿದ್ದೆ, ಕಾರು ಖರೀದಿಸಿ ವಾರವೂ ಆಗಿರಲಿಲ್ಲ -ಮಯೂರ್ ಪಾಟೀಲ್ ಅಪಘಾತದಲ್ಲಿ ಸಂತ್ರಸ್ತ ಕಣ್ಣೀರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Car Accident Mayur Patel drunk driving
Advertisment