/newsfirstlive-kannada/media/media_files/2026/02/10/ev-ready-1-2026-02-10-16-33-56.jpg)
ಇದು ನ್ಯೂಸ್​ಫಸ್ಟ್​ ಆಯೋಜಿಸುತ್ತಿರುವ ಕರ್ನಾಟಕದ ಅತಿದೊಡ್ಡ ಇವಿ ವಾಹನಗಳ ಎಕ್ಸ್​​​ಪೋ. ಫೆಬ್ರವರಿ 21ರಿಂದ 23ರವರೆಗೆ ಮೂರು ದಿನ ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಈ ಎಕ್ಸ್​ಪೋ ನಡೆಯಲಿದೆ. ಈ ಎಕ್ಸ್​ಪೋ ವಿಶೇಷ ಏನು? ಯಾವೆಲ್ಲಾ ಕಂಪನಿಗಳು ಇದರಲ್ಲಿ ಪಾಲ್ಗೊಳ್ತಾವೆ. ಇಲ್ಲಿ ಬರೋ ಜನರಿಗೆ ಏನು ಲಾಭ ಈ ಎಲ್ಲಾ ಡೀಟೇಲ್ಸ್​​ ಈ ರಿಪೋರ್ಟ್​ನಲ್ಲಿ ಇದೆ.
ನ್ಯೂಸ್‌ಫಸ್ಟ್ ಕನ್ನಡ ತನ್ನ ಪರಿಸರ ಸ್ನೇಹಿ ಅಭಿಯಾನದ ಅಂಗವಾಗಿ ಕರ್ನಾಟಕದ ಅತಿದೊಡ್ಡ ಎಲೆಕ್ಟ್ರಿಕ್​ ವೆಹಿಕಲ್ಸ್​​ ಎಕ್ಸ್‌ಪೋವನ್ನ ಆಯೋಜನೆ ಮಾಡುತ್ತಿದೆ. ಈ ಎಕ್ಸ್​ಪೋನಲ್ಲಿ, ಸ್ಕೂಟರ್​​, ಬೈಕ್​​, ಆಟೋ ​​ಕಾರುಗಳಿಂದ ಹಿಡಿದು ಬಸ್, ಟ್ರಕ್, ಟ್ರಾಕ್ಟರ್‌ಗಳವರೆಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿವೆ.
/filters:format(webp)/newsfirstlive-kannada/media/media_files/2026/02/10/ev-ready-2-2026-02-10-16-35-14.jpg)
ಇವಿ ವಾಹನಗಳನ್ನು ಹತ್ತಿರದಿಂದ ನೋಡೋದು, ಸ್ಪರ್ಶಿಸೋದು ಮತ್ತು ಅದರ ಅನುಭವ ಪಡೆದುಕೊಳ್ಳುವ ಅಪೂರ್ವ ಅವಕಾಶವನ್ನು ನಾವು ಸೃಷ್ಟಿಸಿಕೊಡ್ತಿದ್ದೀವಿ. ಮಧ್ಯಮವರ್ಗದವರಿಗೆ ಸರಿ ಹೊಂದುವ ಬೈಕ್, ​ ಕಾರುಗಳು ಹಾಗೆನೇ ಲಕ್ಸುರಿ ಮತ್ತು ಅಲ್ಟ್ರಾ ಲಕ್ಸುರಿ ಕಾರುಗಳು ಸಹ ಈ ಎಕ್ಸ್​ಪೋನಲ್ಲಿ ಭಾಗವಹಿಸ್ತಿವೆ.
ಎಲೆಕ್ಟ್ರಿಕ್​ ವೆಹಿಕಲ್​​ಗಳು ಅಂದಾಕ್ಷಣ ಚಾರ್ಚಿಂಗ್​ ಇರಬಹುದು, ಬ್ಯಾಟರಿ ಲೈಫ್​ ಇರಬಹುದು, ಸೇಫ್ಟಿ ಇರಬಹುದು ಜೊತೆಗೆ ರೀಸೇಲ್​​ ಆಗುತ್ತೋ ಇಲ್ವೋ ಅನ್ನೋ ಗೊಂದಲಗಳು ಸಾಕಷ್ಟು ಜನರಲ್ಲಿ ಇನ್ನೂ ಇದೆ. ಹಾಗಾಗಿ ಜನರು ನೇರವಾಗಿ ವಾಹನಗಳನ್ನು ನೋಡಿ, ತಮ್ಮಲ್ಲಿರೋ ಪ್ರಶ್ನೆಗಳಿಗೆ ತಜ್ಞರ ಜೊತೆ ಮಾತನಾಡಿ ಉತ್ತರವನ್ನ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ:
/filters:format(webp)/newsfirstlive-kannada/media/media_files/2026/02/10/ev-ready-2026-02-10-16-35-34.jpg)
ಇದೇ ಮೊದಲ ಬಾರಿಗೆ, ಇವಿ ಬಸ್‌ಗಳು, ಟ್ರಕ್‌ಗಳು ಮತ್ತು ಟ್ರಾಕ್ಟರ್‌ಗಳಂತಹ ಭಾರೀ ವಾಹನಗಳೂ ಕೂಡ ಈ ಎಕ್ಸ್​ಪೋನಲ್ಲಿ ಭಾಗಿಯಾಗುತ್ತಿವೆ. ಸಾರಿಗೆ ಕ್ಷೇತ್ರದಿಂದ ಕೃಷಿವರೆಗೂ ಎಲೆಕ್ಟ್ರಿಕ್​ ವೆಹಿಕಲ್​ಗಳ ಕ್ರಾಂತಿ ಹೇಗೆ ವ್ಯಾಪಿಸುತ್ತಿದೆ ಅನ್ನೋದನ್ನು ಈ ಎಕ್ಸ್‌ಪೋನಲ್ಲಿ ನೋಡಬಹುದಾಗಿದೆ. ಒಟ್ಟಾರೆ ಒಂದೇ ಜಾಗದಲ್ಲಿ ಇಷ್ಟು ಬ್ರ್ಯಾಂಡ್‌ಗಳನ್ನು ನೋಡೋ ದೊಡ್ಡ ಅವಕಾಶ ಈ ಎಕ್ಸ್​ಪೋ ನಲ್ಲಿ ಇದೆ.
ಎಕ್ಸ್​ಪೋದಲ್ಲಿ ಟೆಸ್ಟ್ ರೈಡ್‌ಗಳು, ತಾಂತ್ರಿಕ ಮಾಹಿತಿ, ಫೈನಾನ್ಸ್ ಹಾಗೂ ಸಬ್ಸಿಡಿ ವಿವರಗಳೂ ಲಭ್ಯವಿದೆ. ಇವಿ ವೆಹಿಕಲ್ಸ್​ ಖರೀದಿ ಮಾಡುಬೇಕು ಅನ್ನೋ ಯೋಚನೆಯಲ್ಲಿರುವವರಿಗೆ ಇದು ಖಂಡಿತಾ ಒನ್-ಸ್ಟಾಪ್ ಡೆಸ್ಟಿನೇಷನ್. ಹಾಗಾಗಿ ತಪ್ಪದೇ ಎಕ್ಸ್​ಪೋಗೆ ಭೇಟಿ ನೀಡಿ. ಇದರ ಲಾಭ ಪಡೆಯಿರಿ.ನ್ಯೂಸ್​ಫಸ್ಟ್​ನ ಈ ಎಕ್ಸ್​ಪೋ ಇದು ಕೇವಲ ವಾಹನ ಮೇಳವಲ್ಲ…ಇದು ಭವಿಷ್ಯದ ಸಾರಿಗೆ ಕ್ರಾಂತಿ.
ಇದನ್ನೂ ಓದಿ: ಅಂಗಡಿ ಮಾಲೀಕರೇ ಹುಷಾರ್! ಪೋನ್ ಪೇ ಮೂಲಕ ಹಣ ವರ್ಗಾವಣೆ ಅಂತ ಯಾಮಾರಿಸ್ತಾರೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us