ಇಂದಿನಿಂದ ಕರ್ನಾಟಕದ ಅತಿದೊಡ್ಡ ಇವಿ ವಾಹನಗಳ ಎಕ್ಸ್​​​ಪೋ.. ಮಿಸ್​ ಮಾಡ್ಕೋಬೇಡಿ..!

ನ್ಯೂಸ್‌ಫಸ್ಟ್ ಕನ್ನಡ ತನ್ನ ಪರಿಸರ ಸ್ನೇಹಿ ಅಭಿಯಾನದ ಅಂಗವಾಗಿ ಎಲೆಕ್ಟ್ರಿಕ್​ ವೆಹಿಕಲ್ಸ್​​ ಎಕ್ಸ್‌ಪೋವನ್ನ ಆಯೋಜನೆ ಮಾಡುತ್ತಿದೆ. ಈ ಎಕ್ಸ್​ಪೋನಲ್ಲಿ, ಸ್ಕೂಟರ್​​, ಬೈಕ್​​, ಆಟೋ ​​ಕಾರುಗಳಿಂದ ಹಿಡಿದು ಬಸ್, ಟ್ರಕ್, ಟ್ರಾಕ್ಟರ್‌ಗಳವರೆಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿವೆ.

author-image
Ganesh Kerekuli
EV_01.jpg
Advertisment

ಇದು ನ್ಯೂಸ್​ಫಸ್ಟ್​ ಆಯೋಜಿಸುತ್ತಿರುವ ಕರ್ನಾಟಕದ ಅತಿದೊಡ್ಡ ಇವಿ ವಾಹನಗಳ ಎಕ್ಸ್​​​ಪೋ. ಇಂದಿನಿಂದ (ಫೆಬ್ರವರಿ 21) ಫೆಬ್ರವರಿ 23ರವರೆಗೆ ಮೂರು ದಿನ ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಈ ಎಕ್ಸ್​ಪೋ ನಡೆಯುತ್ತಿದೆ. ಈ ಎಕ್ಸ್​ಪೋ ವಿಶೇಷ ಏನು? ಯಾವೆಲ್ಲಾ ಕಂಪನಿಗಳು ಇದರಲ್ಲಿ ಪಾಲ್ಗೊಳ್ತಿವೆ. ಇಲ್ಲಿಗೆ ಬರೋ ಜನರಿಗೆ ಏನು ಲಾಭ ಈ ಎಲ್ಲಾ ಡೀಟೇಲ್ಸ್​​ ಈ ರಿಪೋರ್ಟ್​ನಲ್ಲಿ ಇದೆ. 

ನ್ಯೂಸ್‌ಫಸ್ಟ್ ಕನ್ನಡ ತನ್ನ ಪರಿಸರ ಸ್ನೇಹಿ ಅಭಿಯಾನದ ಅಂಗವಾಗಿ ಕರ್ನಾಟಕದ ಅತಿದೊಡ್ಡ ಎಲೆಕ್ಟ್ರಿಕ್​ ವೆಹಿಕಲ್ಸ್​​ ಎಕ್ಸ್‌ಪೋವನ್ನ ಆಯೋಜನೆ ಮಾಡುತ್ತಿದೆ. ಈ ಎಕ್ಸ್​ಪೋನಲ್ಲಿ, ಸ್ಕೂಟರ್​​, ಬೈಕ್​​, ಆಟೋ ​​ಕಾರುಗಳಿಂದ ಹಿಡಿದು ಬಸ್, ಟ್ರಕ್, ಟ್ರಾಕ್ಟರ್‌ಗಳವರೆಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿವೆ. 

ಇದನ್ನೂ ಓದಿ: ಆರ್​​ಸಿಬಿ ಖರೀದಿಗೆ ಮುಗಿಬಿದ್ದ ಮಿಲಿಯನೇರ್.. ಸಾವಿರ ಸಾವಿರ ಕೋಟಿ ಕೋಟ್​ ಮಾಡಿದ ಕಂಪನಿಗಳು..!

EV ready (2)

ಇವಿ ವಾಹನಗಳನ್ನು ಹತ್ತಿರದಿಂದ ನೋಡೋದು, ಸ್ಪರ್ಶಿಸೋದು ಮತ್ತು ಅದರ ಅನುಭವ ಪಡೆದುಕೊಳ್ಳುವ ಅಪೂರ್ವ ಅವಕಾಶವನ್ನು ನಾವು ಸೃಷ್ಟಿಸಿಕೊಡ್ತಿದ್ದೀವಿ. ಮಧ್ಯಮವರ್ಗದವರಿಗೆ ಸರಿ ಹೊಂದುವ ಬೈಕ್, ​ ಕಾರುಗಳು ಹಾಗೆನೇ ಲಕ್ಸುರಿ ಮತ್ತು ಅಲ್ಟ್ರಾ ಲಕ್ಸುರಿ ಕಾರುಗಳು ಸಹ ಈ ಎಕ್ಸ್​ಪೋನಲ್ಲಿ ಭಾಗವಹಿಸ್ತಿವೆ.

ಎಲೆಕ್ಟ್ರಿಕ್​ ವೆಹಿಕಲ್​​ಗಳು ಅಂದಾಕ್ಷಣ ಚಾರ್ಚಿಂಗ್​ ಇರಬಹುದು, ಬ್ಯಾಟರಿ ಲೈಫ್​ ಇರಬಹುದು, ಸೇಫ್ಟಿ ಇರಬಹುದು ಜೊತೆಗೆ ರೀಸೇಲ್​​ ಆಗುತ್ತೋ ಇಲ್ವೋ ಅನ್ನೋ ಗೊಂದಲಗಳು ಸಾಕಷ್ಟು ಜನರಲ್ಲಿ ಇನ್ನೂ ಇದೆ.  ಹಾಗಾಗಿ ಜನರು ನೇರವಾಗಿ ವಾಹನಗಳನ್ನು ನೋಡಿ, ತಮ್ಮಲ್ಲಿರೋ ಪ್ರಶ್ನೆಗಳಿಗೆ ತಜ್ಞರ ಜೊತೆ ಮಾತನಾಡಿ ಉತ್ತರವನ್ನ ಪಡೆದುಕೊಳ್ಳಬಹುದಾಗಿದೆ. 

EV ready

ಇದೇ ಮೊದಲ ಬಾರಿಗೆ, ಇವಿ ಬಸ್‌ಗಳು, ಟ್ರಕ್‌ಗಳು ಮತ್ತು ಟ್ರಾಕ್ಟರ್‌ಗಳಂತಹ ಭಾರೀ ವಾಹನಗಳೂ ಕೂಡ ಈ ಎಕ್ಸ್​ಪೋನಲ್ಲಿ ಭಾಗಿಯಾಗುತ್ತಿವೆ. ಸಾರಿಗೆ ಕ್ಷೇತ್ರದಿಂದ ಕೃಷಿವರೆಗೂ ಎಲೆಕ್ಟ್ರಿಕ್​ ವೆಹಿಕಲ್​ಗಳ ಕ್ರಾಂತಿ ಹೇಗೆ ವ್ಯಾಪಿಸುತ್ತಿದೆ  ಅನ್ನೋದನ್ನು ಈ ಎಕ್ಸ್‌ಪೋನಲ್ಲಿ ನೋಡಬಹುದಾಗಿದೆ. ಒಟ್ಟಾರೆ ಒಂದೇ ಜಾಗದಲ್ಲಿ ಇಷ್ಟು ಬ್ರ್ಯಾಂಡ್‌ಗಳನ್ನು ನೋಡೋ ದೊಡ್ಡ ಅವಕಾಶ ಈ ಎಕ್ಸ್​ಪೋ ನಲ್ಲಿ ಇದೆ.

ಎಕ್ಸ್​ಪೋದಲ್ಲಿ ಟೆಸ್ಟ್ ರೈಡ್‌ಗಳು, ತಾಂತ್ರಿಕ ಮಾಹಿತಿ, ಫೈನಾನ್ಸ್ ಹಾಗೂ ಸಬ್ಸಿಡಿ ವಿವರಗಳೂ ಲಭ್ಯವಿದೆ. ಇವಿ ವೆಹಿಕಲ್ಸ್​ ಖರೀದಿ ಮಾಡುಬೇಕು ಅನ್ನೋ ಯೋಚನೆಯಲ್ಲಿರುವವರಿಗೆ ಇದು ಖಂಡಿತಾ ಒನ್-ಸ್ಟಾಪ್ ಡೆಸ್ಟಿನೇಷನ್. ಹಾಗಾಗಿ ತಪ್ಪದೇ ಎಕ್ಸ್​ಪೋಗೆ ಭೇಟಿ ನೀಡಿ. ಇದರ ಲಾಭ ಪಡೆಯಿರಿ. ನ್ಯೂಸ್​ಫಸ್ಟ್​ನ ಈ ಎಕ್ಸ್​ಪೋ ಇದು ಕೇವಲ ವಾಹನ ಮೇಳವಲ್ಲ.. ಇದು ಭವಿಷ್ಯದ ಸಾರಿಗೆ ಕ್ರಾಂತಿ..

ಇದನ್ನೂ ಓದಿ: ಅಂಗಡಿ ಮಾಲೀಕರೇ ಹುಷಾರ್! ಪೋನ್ ಪೇ ಮೂಲಕ ಹಣ ವರ್ಗಾವಣೆ ಅಂತ ಯಾಮಾರಿಸ್ತಾರೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Electric Vehicle Expo Newsfirst ev expo
Advertisment