ಬೆಂಗಳೂರಿಗರಿಗೆ ಗುಡ್‌ನ್ಯೂಸ್: ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ..!

ನಮ್ಮ ಮೆಟ್ರೋ (BMRCL) ಟಿಕೆಟ್ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದರ ಪಟ್ಟಿ ಸೋಮವಾರದಿಂದಲೇ ಜಾರಿಗೆ ಬರಬೇಕಿತ್ತು. ಈ ಆದೇಶಕ್ಕೆ ಇದೀಗ ತಡೆ ಬಿದ್ದಿರುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

author-image
Ganesh Kerekuli
ನಮ್ಮ ಮೆಟ್ರೋದಲ್ಲಿ ಮಹಿಳೆಯರನ್ನು ಚುಡಾಯಿಸಿದ್ರೆ ಬರೋಬ್ಬರಿ ₹10 ಸಾವಿರ ದಂಡ; ಇದು ಓದಲೇಬೇಕಾದ ಸ್ಟೋರಿ
Advertisment
  • ನಿರ್ಧಾರ: ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ
  • ಯಾರ ಸೂಚನೆ?: ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್
  • ಯಾರ ಮನವಿ?: ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ್
  • ಹಿಂದಿನ ಆದೇಶ: ಸೋಮವಾರದಿಂದ 5% ದರ ಏರಿಕೆ ಮಾಡಲಾಗಿತ್ತು.
  • ಮುಂದೇನು?: ಸದ್ಯಕ್ಕೆ ಹಳೆ ದರವೇ ಮುಂದುವರಿಯಲಿದೆ

ಬೆಂಗಳೂರು: ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರದಿಂದ ಜಾರಿಯಾಗಬೇಕಿದ್ದ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಕೇಂದ್ರ ಸಚಿವರ ಸೂಚನೆಯ ಮೇರೆಗೆ ದರ ಏರಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ (BMRCL) ಟಿಕೆಟ್ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದರ ಪಟ್ಟಿ ಸೋಮವಾರದಿಂದಲೇ ಜಾರಿಗೆ ಬರಬೇಕಿತ್ತು. ಈ ಆದೇಶಕ್ಕೆ ಇದೀಗ ತಡೆ ಬಿದ್ದಿರುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಈ ಸ್ಟಾರ್​ನ ವಿಚಾರದಲ್ಲಿ ಗಂಭೀರ್ ಟೆನ್ಶನ್ ಹೆಚ್ಚಾಗಿದೆ.. ಹಳೆಯ ಖದರ್ ಇಲ್ಲವೇ ಇಲ್ಲ..!

ಕೇಂದ್ರ ಸಚಿವರ ಮಧ್ಯಪ್ರವೇಶ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಈ ವಿಚಾರವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಭೇಟಿಯಾಗಿದ್ದ ತೇಜಸ್ವಿ ಸೂರ್ಯ, ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ಕಟ್ಟರ್ ಅವರು, ದರ ಏರಿಕೆ ಆದೇಶವನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸೋಮವಾರದಿಂದ ಯಾವುದೇ ದರ ಏರಿಕೆ ಇರುವುದಿಲ್ಲ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.

ಸಮಿತಿ ಬದಲಾವಣೆಗೂ ಸಮ್ಮತಿ?

ಮೆಟ್ರೋ ದರ ನಿಗದಿ ಸಮಿತಿಯ (Fare Fixation Committee) ಬದಲಾವಣೆ ಕುರಿತೂ ಮಹತ್ವದ ಚರ್ಚೆ ನಡೆದಿದೆ. ಒಂದು ವೇಳೆ ರಾಜ್ಯ ಸರ್ಕಾರವು ಸಮಿತಿ ಬದಲಾವಣೆಗೆ ಕೋರಿ ಮನವಿ ಸಲ್ಲಿಸಿದರೆ, ಈ ಕುರಿತು ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಆರ್ಥಿಕ ಹೊರೆಯ ಭಯದಲ್ಲಿದ್ದ ಮೆಟ್ರೋ ಪ್ರಯಾಣಿಕರಿಗೆ ಸಂಸದರ ಮಧ್ಯಪ್ರವೇಶದಿಂದ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಐದು ಪವರ್ ಹಿಟ್ಟರ್ಸ್​.. ಇವರಿಂದ ತಂಡಕ್ಕೆ ಆಗುವ ಲಾಭ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Namma metro
Advertisment