/newsfirstlive-kannada/media/media_files/2025/12/10/bengaluru-1-2025-12-10-15-36-23.jpg)
ಟ್ರಾಫಿಕ್​.. ಟ್ರಾಫಿಕ್​ ಟ್ರಾಫಿಕ್​​​.. ಅಂತ ಗೂಗಲ್​ನಲ್ಲಿ ಸರ್ಚ್​​ ಮಾಡಿದ್ರೆ ಮೊದ್ಲು ಕಾಣ್ಸೋದೇ ಸಿಲ್ಕ್​​​ಬೋರ್ಡ್​​​ ಜಂಕ್ಷನ್​​. ಕೆಆರ್​​ಪುರಂ.. ಹೇಳಿ ಕೇಳಿ ಈ ಏರಿಯಾ ಐಟಿ ಕಾರಿಡಾರ್​​. ಬಹಳಷ್ಟು ಐಟಿ ಕಂಪನಿಗಳಿರೋದು ಇಲ್ಲೇ. ಆದ್ರೆ ಇಲ್ಲಾಗ್ತಿರೋ ಟ್ರಾಫಿಕ್​ ಸಮಸ್ಯೆಗೆ ಮುಕ್ತಿನೇ ಇಲ್ವಾ ಅಂತ ಪ್ರಶ್ನೆ ಮಾಡಿ ಮಾಡಿ ಸುಸ್ತಾದ ಐಟಿ ಕಂಪನಿಗಳು ಅಸಮಾಧಾನಗೊಂಡು ನಗರ ಬಿಟ್ಟು ಹೋಗೋ ಮಾತುಗಳನ್ನೂ ಆಡಿದ್ರು. ಗುಂಡಿ.. ಟ್ರಾಫಿಕ್​ನಿಂದ ಕಿರಿಕಿರಿ ಹೆಚ್ಚಾಗ್ತಿದೆ ಅಂತ ಕಿಡಿಕಾರಿದ್ರು.. ಈ ಬೆನ್ನಲ್ಲೇ ಇದೀಗ ಬೆಂಗಳೂರು ಐಟಿ ವಲಯಕ್ಕೆ ಡಿಸಿಎಂ ಡಿಕೆಶಿ​ ಗುಡ್​​ನ್ಯೂಸ್​​ ಕೊಟ್ಟಿದ್ದಾರೆ.
ಬೆಂಗಳೂರು ಐಟಿ ವಲಯಕ್ಕೆ ಡಿಸಿಎಂ ಡಿಕೆಶಿ​ ಗುಡ್​​ನ್ಯೂಸ್​​!
ಬೆಂಗಳೂರಿನ ಐಟಿ-ಬಿಟಿ ಉದ್ಯೋಗಿಗಳಿಗೆ ಡಿಸಿಎಂ ಡಿಕೆಶಿ ಅತೀ ದೊಡ್ಡ ಸಿಹಿ ಸುದ್ದಿ ಕೊಟ್ಟಿದ್ದಾರೆ.. ಬೆಂಗಳೂರೂ ಐಟಿ ಕಾರಿಡಾರ್ ಅಭಿವೃದ್ಧಿಗೆ ಸರ್ಕಾರ ಬರೋಬ್ಬರಿ 400 ಕೋಟಿ ರೂ. ಘೋಷಣೆ ಮಾಡಿದೆ..
/filters:format(webp)/newsfirstlive-kannada/media/media_files/2025/12/10/bengaluru-2-2025-12-10-15-38-43.jpg)
ಐಟಿ ಕಾರಿಡಾರ್ ಅಭಿವೃದ್ಧಿಗೆ ₹400 ಕೋಟಿ
- ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ KR ಪುರಂ ರಸ್ತೆ ಅಭಿವೃದ್ಧಿಗೆ ನಿರ್ಧಾರ
- ಐಟಿ ಕಾರಿಡಾರ್‌ನ ರಸ್ತೆ ವಿಶ್ವದರ್ಜೆ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಮುಂದು
- ₹400 ಕೋಟಿ ಘೋಷಿಸಿ, ಯೋಜನೆಗೆ ಚಾಲನೆ ನೀಡಿದ ಡಿಸಿಎಂ ಡಿಕೆಶಿ
- ಐಟಿ ಕಂಪನಿಗಳು ಇರುವ ಭಾಗದ ರಸ್ತೆಗಳ ಅಭಿವೃದ್ಧಿಗೆ ಡಿಸಿಎಂ ಮುಂದು
- 20km ಉದ್ದದ ರಸ್ತೆಯನ್ನ 400 ಕೋಟಿ ಮೊತ್ತದಲ್ಲಿ ಅಭಿವೃದ್ಧಿಗೆ ನಿರ್ಧಾರ
- ಕಾಮಗಾರಿಗೆ 18-24 ತಿಂಗಳು, 2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ
ಇದನ್ನೂ ಓದಿ: ತುಮಕೂರು ಜಿಲ್ಲೆಗೆ ಐದಾರು ತಿಂಗಳಲ್ಲಿ ಎತ್ತಿನಹೊಳೆ ಯೋಜನೆ ನೀರು : ಡಿಸಿಎಂ ಡಿಕೆಶಿ ಭರವಸೆ
/filters:format(webp)/newsfirstlive-kannada/media/media_files/2025/12/10/bengaluru-3-2025-12-10-15-39-21.jpg)
ಈಗಾಗಲೇ ಔಟರ್ ರಿಂಗ್ ರೋಡ್‌ನಲ್ಲಿ ಬೆಳಗ್ಗೆ 8ರಿಂದ 11 ಮತ್ತು ಸಂಜೆ 5ರಿಂದ 10ರವರೆಗೆ ಹೆವೀ ಟ್ರಾಫಿಕ್ ಜಾಮ್ ಆಗುತ್ತಿದೆ. ಇಲೆಕ್ಟ್ರಾನಿಕ್​ ಸಿಟಿ, ಮನ್ಯಾತಾ ಟೆಕ್​​ ಪಾರ್ಕ್​, ಬಾಗ್ಮನೆ ಟೆಕ್ ಪಾರ್ಕ್‌ಗಳಿಗೆ ತೆರಳುವ ಲಕ್ಷಾಂತರ ಐಟಿ ಉದ್ಯೋಗಿಗಳು ದಿನನಿತ್ಯ 2-3 ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾಯಬೇಕಿದೆ. ಈ ಹೊಸ ಹೊರವರ್ತುಲ ರಸ್ತೆ ಜಾರಿಗೆ ಬಂದರೆ ಸಿಲ್ಕ್‌ಬೋರ್ಡ್-ಕೆಆರ್ ಪುರಂ ನಡುವಿನ ಪ್ರಯಾಣ ಸಮಯ 90 ನಿಮಿಷದಿಂದ 30-35 ನಿಮಿಷಕ್ಕೆ ಇಳಿಕೆ ಆಗಲಿದೆ, ಔಟರ್ ರಿಂಗ್ ರೋಡ್‌ನ ಒತ್ತಡ 30-40% ಕಡಿಮೆ ಆಗೋದಂತು ಪಕ್ಕಾ!
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us