ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್.. ಓದಲೇಬೇಕಾದ ಸ್ಟೋರಿ..!

ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ನಗರದಲ್ಲಿ ಸೈಕ್ಲಿಂಗ್‌ಗೆ ಉತ್ತೇಜನ ನೀಡಲು ಹಾಗೂ ಪರಿಸರ ಸ್ನೇಹಿ ಸಂಚಾರವನ್ನು ಉತ್ತೇಜಿಸಲು ಆಯ್ದ 9 ಮೆಟ್ರೋ ನಿಲ್ದಾಣಗಳಲ್ಲಿ 'ಉಚಿತ ಸೈಕಲ್ ಪಾರ್ಕಿಂಗ್' ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಿದೆ.

author-image
Ganesh Kerekuli
Namma metro (1)

ನಮ್ಮ ಮೆಟ್ರೋ

Advertisment

ಬೆಂಗಳೂರು: ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ನಗರದಲ್ಲಿ ಸೈಕ್ಲಿಂಗ್‌ಗೆ ಉತ್ತೇಜನ ನೀಡಲು ಹಾಗೂ ಪರಿಸರ ಸ್ನೇಹಿ ಸಂಚಾರವನ್ನು ಉತ್ತೇಜಿಸಲು ಆಯ್ದ 9 ಮೆಟ್ರೋ ನಿಲ್ದಾಣಗಳಲ್ಲಿ 'ಉಚಿತ ಸೈಕಲ್ ಪಾರ್ಕಿಂಗ್' ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಿದೆ.

ಏನಿದು ಯೋಜನೆ?

ಮೆಟ್ರೋ ನಿಲ್ದಾಣದಿಂದ ಕಚೇರಿ ಅಥವಾ ಮನೆಗಳಿಗೆ ತಲುಪಲು (Last-mile connectivity) ಪ್ರಯಾಣಿಕರು ಸೈಕಲ್ ಬಳಸುವುದನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸದ್ಯ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್ ಮಾಡಲು ಗಂಟೆಗೆ 1 ರೂಪಾಯಿ ಹಾಗೂ ದಿನಕ್ಕೆ ಗರಿಷ್ಠ 10 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಈ ಹೊಸ ಯೋಜನೆಯಡಿ ಆಯ್ದ 9 ನಿಲ್ದಾಣಗಳಲ್ಲಿ ಪ್ರಯಾಣಿಕರು ಯಾವುದೇ ಶುಲ್ಕವಿಲ್ಲದೆ ತಮ್ಮ ಸೈಕಲ್‌ಗಳನ್ನು ನಿಲ್ಲಿಸಬಹುದಾಗಿದೆ.

ಇದನ್ನೂ ಓದಿ: ಜಾಬ್‌ ಆಫರ್‌ ಬಂದಾಗ ಮೊದಲು ನೀವು ಮಾಡಬೇಕಾಗಿದ್ದು ಏನು..?

ಟೆಂಡರ್ ಪ್ರಕ್ರಿಯೆ ಆರಂಭ

ಈ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ಈಗಾಗಲೇ ಟೆಂಡರ್ ಕರೆದಿದೆ. ಸೈಕಲ್ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ನಿಲ್ದಾಣಗಳನ್ನು ಗುರುತಿಸಿ ಮೊದಲ ಹಂತದಲ್ಲಿ ಈ ಸೌಲಭ್ಯ ನೀಡಲಾಗುತ್ತಿದೆ. ಈ 9 ನಿಲ್ದಾಣಗಳನ್ನು ಹೊರತುಪಡಿಸಿ, ಉಳಿದ ಮೆಟ್ರೋ ನಿಲ್ದಾಣಗಳಲ್ಲಿ ಸದ್ಯ ಜಾರಿಯಲ್ಲಿರುವ ಪಾರ್ಕಿಂಗ್ ಶುಲ್ಕವೇ ಮುಂದುವರಿಯಲಿದೆ.

ಯಾವೆಲ್ಲಾ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಲಭ್ಯ?

  • ಬಿಎಂಆರ್‌ಸಿಎಲ್ ಗುರುತಿಸಿರುವ 9 ನಿಲ್ದಾಣಗಳ ಪಟ್ಟಿ ಇಲ್ಲಿದೆ:
  • ಪರ್ಪಲ್ ಲೈನ್ (ನೇರಳೆ ಮಾರ್ಗ): ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿ.
  • ಗ್ರೀನ್ ಲೈನ್ (ಹಸಿರು ಮಾರ್ಗ): ಮಡವಾರ, ಪೀಣ್ಯ ಇಂಡಸ್ಟ್ರಿ ಮತ್ತು ಜೆಪಿ ನಗರ.
  • ಯೆಲ್ಲೋ ಲೈನ್ (ಹಳದಿ ಮಾರ್ಗ): ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ, ರಾಗಿಗುಡ್ಡ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣಗಳು.

ಪ್ರಯಾಣಿಕರಿಗೆ ಅನುಕೂಲ:

ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ಮಾಲಿನ್ಯ ತಡೆಗಟ್ಟಲು ಸೈಕಲ್ ಬಳಕೆ ಉತ್ತಮ ಪರಿಹಾರವಾಗಿದೆ. ಬಿಎಂಆರ್‌ಸಿಎಲ್‌ನ ಈ ನಿರ್ಧಾರದಿಂದ ಸೈಕಲ್ ಸವಾರರ ಹಣ ಉಳಿತಾಯವಾಗುವುದಲ್ಲದೆ, ಹೆಚ್ಚಿನ ಜನರು ಮೆಟ್ರೋ ನಿಲ್ದಾಣಕ್ಕೆ ಬರಲು ಸೈಕಲ್ ಬಳಸಲು ಆಸಕ್ತಿ ತೋರಲಿದ್ದಾರೆ.

ಇದನ್ನೂ ಓದಿ: ನಟಿ ಕಾವ್ಯ ಗೌಡ ಪ್ರಕರಣ.. ನಿನ್ನೆ ಪೊಲೀಸ್‌ ಠಾಣೆಯಲ್ಲಿ ಅಸಲಿಗೆ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Namma metro Metro Yellow Line
Advertisment