/newsfirstlive-kannada/media/media_files/2026/02/21/hd-kumaraswamy-5-2026-02-21-12-09-20.jpg)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭವಿಷ್ಯದ ಸಾರಿಗೆ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ನ್ಯೂಸ್‌ಫಸ್ಟ್ ಕನ್ನಡ ವಾಹಿನಿ ಆಯೋಜಿಸಿರುವ ಕರ್ನಾಟಕದ ಅತಿದೊಡ್ಡ ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನ ಮೇಳ ‘ಇವಿ ರೆಡಿ’ (EV Ready) ಎಕ್ಸ್‌ಪೋಗೆ ಇಂದು (ಶನಿವಾರ) ಅದ್ದೂರಿ ಚಾಲನೆ ದೊರೆತಿದೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುವ ಈ ಬೃಹತ್ ಮೇಳವನ್ನು ಕೇಂದ್ರದ ಭಾರಿ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಇದನ್ನೂ ಒದಿ:ಕರ್ನಾಟಕ ಬಿಜೆಪಿಗೆ ಮತ್ತೆ ‘ರಾಜಾಹುಲಿ’ ಕಳೆ.. ಒಂದೇ ಕಲ್ಲಲ್ಲಿ ಎರಡು ಗುರಿ..!
/filters:format(webp)/newsfirstlive-kannada/media/media_files/2026/02/21/hd-kumaraswamy-6-2026-02-21-12-09-32.jpg)
ಗಣ್ಯರ ಉಪಸ್ಥಿತಿ
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರದ ಭಾರಿ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ. ಹನೀಫ್ ಖುರೇಷಿ, ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಎಂಡಿ ಮತ್ತು ಸಿಇಒ ಸುಮನ್ ಮಿಶ್ರಾ, ಟಿವಿಎಸ್ ಮೋಟರ್ ಕಂಪನಿಯ ನಿರ್ದೇಶಕ ಮತ್ತು ಸಿಇಒ ಕೆ.ಎನ್. ರಾಧಾಕೃಷ್ಣನ್, ಕೈನೆಟಿಕ್ ಗ್ರೀನ್ ಸಂಸ್ಥಾಪಕರು ಹಾಗೂ ಸಿಇಒ ಡಾ. ಸುಲಜಾ ಫೈರೋಡಿಯಾ ಮೋಟ್ವಾನಿ ಮತ್ತು ನ್ಯೂಸ್‌ಫಸ್ಟ್ ಸಂಸ್ಥೆಯ ಎಂಡಿ ಹಾಗೂ ಸಿಇಒ ಎಸ್. ರವಿಕುಮಾರ್, ನ್ಯೂಸ್​ಫಸ್ಟ್​​ನ ಎಡಿಟರ್​ ಇನ್ ಚೀಫ್ ಮಾರುತಿ ಎಸ್​.ಹೆಚ್​​ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೂರು ದಿನಗಳ ಇವಿ ಜಾತ್ರೆ
ನ್ಯೂಸ್‌ಫಸ್ಟ್ ಕನ್ನಡದ ಪರಿಸರ ಸ್ನೇಹಿ ಅಭಿಯಾನದ ಭಾಗವಾಗಿ ಆಯೋಜಿಸಲಾಗಿರುವ ಈ ಎಕ್ಸ್‌ಪೋ, ಇಂದಿನಿಂದ (ಫೆಬ್ರವರಿ 21) ಫೆಬ್ರವರಿ 23ರ ಸೋಮವಾರದವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಭೀಕರ ದುರಂತ: ಕಂದಕಕ್ಕೆ ಉರುಳಿದ ಟ್ರ್ಯಾಕ್ಟರ್; ಮಗು ಸೇರಿ ನಾಲ್ವರ ಅಂತ್ಯ..
/filters:format(webp)/newsfirstlive-kannada/media/media_files/2026/02/21/hd-kumaraswamy-7-2026-02-21-12-09-42.jpg)
ಎಕ್ಸ್‌ಪೋ ವಿಶೇಷತೆಗಳೇನು?
ಇದು ಕೇವಲ ಕಾರು ಅಥವಾ ಬೈಕ್ ಮೇಳವಲ್ಲ. ಬದಲಾಗಿ ಸಮಗ್ರ ಎಲೆಕ್ಟ್ರಿಕ್ ವಾಹನಗಳ ಪ್ರಪಂಚ.
- ವೈವಿಧ್ಯಮಯ ವಾಹನಗಳು: ಸ್ಕೂಟರ್, ಬೈಕ್, ಆಟೋ, ಕಾರುಗಳಿಂದ ಹಿಡಿದು ಬೃಹತ್ ವಾಹನಗಳಾದ ಬಸ್, ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳು ಸಹ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕೃಷಿ ಕ್ಷೇತ್ರದಿಂದ ಸಾರಿಗೆ ಕ್ಷೇತ್ರದವರೆಗೆ ಇವಿ ಕ್ರಾಂತಿ ಹೇಗೆ ವ್ಯಾಪಿಸಿದೆ ಎಂಬುದನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.
- ಲಕ್ಸುರಿ ಮತ್ತು ಬಜೆಟ್: ಮಧ್ಯಮ ವರ್ಗಕ್ಕೆ ಹೊಂದುವ ಕೈಗೆಟುಕುವ ದರದ ವಾಹನಗಳಿಂದ ಹಿಡಿದು, ಅತ್ಯಂತ ಐಷಾರಾಮಿ (Ultra Luxury) ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ.
ಗ್ರಾಹಕರಿಗೆ ಏನೆಲ್ಲಾ ಲಾಭ?
ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನಸಾಮಾನ್ಯರಲ್ಲಿರುವ ಗೊಂದಲಗಳಿಗೆ ಇಲ್ಲಿ ಪರಿಹಾರ ಸಿಗಲಿದೆ.
- ನೇರ ಸಂವಾದ: ಚಾರ್ಜಿಂಗ್ ವ್ಯವಸ್ಥೆ, ಬ್ಯಾಟರಿ ಬಾಳಿಕೆ (Battery Life), ಸುರಕ್ಷತೆ ಮತ್ತು ರೀಸೇಲ್ (Resale) ಮೌಲ್ಯದ ಬಗ್ಗೆ ತಜ್ಞರೊಂದಿಗೆ ನೇರವಾಗಿ ಮಾತನಾಡಿ ಮಾಹಿತಿ ಪಡೆಯಬಹುದು.
- ಟೆಸ್ಟ್ ರೈಡ್: ವಾಹನಗಳನ್ನು ಕೇವಲ ನೋಡುವುದಷ್ಟೇ ಅಲ್ಲ, ಅವುಗಳನ್ನು ಓಡಿಸಿ ಅನುಭವ ಪಡೆಯಲು (Test Ride) ಅವಕಾಶವಿದೆ.
- ಸಬ್ಸಿಡಿ ಮತ್ತು ಫೈನಾನ್ಸ್: ಸ್ಥಳದಲ್ಲೇ ವಾಹನಗಳ ಸಾಲ ಸೌಲಭ್ಯ (Finance) ಮತ್ತು ಸರ್ಕಾರದಿಂದ ಸಿಗುವ ಸಬ್ಸಿಡಿಗಳ ಸಂಪೂರ್ಣ ಮಾಹಿತಿ ಲಭ್ಯವಿದೆ.
ಹೊಸ ವಾಹನ ಖರೀದಿಸುವ ಆಲೋಚನೆಯಲ್ಲಿರುವವರಿಗೆ ಇದೊಂದು 'ಒನ್-ಸ್ಟಾಪ್ ಡೆಸ್ಟಿನೇಷನ್' ಆಗಿದೆ. ಭವಿಷ್ಯದ ತಂತ್ರಜ್ಞಾನವನ್ನು ಹತ್ತಿರದಿಂದ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಭೇಟಿ ನೀಡಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us