ಬೆಂಗಳೂರಿಗರ ದಶಕದ ಕನಸು ನನಸು.. ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಕೇಂದ್ರ ಸರ್ಕಾರ..!

ಪ್ರಸ್ತುತ ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್‌ಗೆ ಹೋಗಲು ರಸ್ತೆ ಮಾರ್ಗದಲ್ಲಿ ಕನಿಷ್ಠ 1.5 ರಿಂದ 2 ಗಂಟೆ ಬೇಕಾಗುತ್ತದೆ. ಆದರೆ ಸಬ್‌ಅರ್ಬನ್ ರೈಲು ಜಾರಿಯಾದರೆ ಕೇವಲ 45 ರಿಂದ 50 ನಿಮಿಷಗಳಲ್ಲಿ ಏರ್‌ಪೋರ್ಟ್ ತಲುಪಬಹುದು.

author-image
Ganesh Kerekuli
PM Modi (1)
Advertisment
  • ಮೆಜೆಸ್ಟಿಕ್ ಟು ಏರ್‌ಪೋರ್ಟ್ ಸಬ್‌ಅರ್ಬನ್ ರೈಲಿಗೆ ‘ಗ್ರೀನ್ ಸಿಗ್ನಲ್!
  • 4,100 ಕೋಟಿ ವೆಚ್ಚದ ಬೃಹತ್ ಯೋಜನೆ, ರೈಲು ಸಾಗುವ ಮಾರ್ಗ ಯಾವ್ದು?
  • ಕೇಂದ್ರ ಸಚಿವ ವಿ.ಸೋಮಣ್ಣ ಹಂಚಿಕೊಂಡ ಮಾಹಿತಿ ಏನು..?

ಬೆಂಗಳೂರು: ಟ್ರಾಫಿಕ್‌ನಿಂದ ಹೈರಾಣಾಗಿರುವ ಸಿಲಿಕಾನ್ ಸಿಟಿ ಜನರಿಗೆ ಕೊನೆಗೂ ಕೇಂದ್ರ ಸರ್ಕಾರ ಬಂಪರ್ ಉಡುಗೊರೆ ನೀಡಿದೆ. ನಗರದ ಹೃದಯಭಾಗ ಮೆಜೆಸ್ಟಿಕ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಉಪನಗರ ರೈಲು (Suburban Rail) ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ.

4,100 ಕೋಟಿ ವೆಚ್ಚದ ಬೃಹತ್ ಯೋಜನೆ!

ಬೆಂಗಳೂರು ಉಪನಗರ ರೈಲು ಯೋಜನೆಯ ಈ ನಿರ್ಣಾಯಕ ಹಂತಕ್ಕೆ ಸುಮಾರು 4,100 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಲಕ್ಷಾಂತರ ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿ ಇಲ್ಲದೆ ಅತ್ಯಂತ ಕಡಿಮೆ ಅವಧಿಯಲ್ಲಿ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ.

ಇದನ್ನೂ ಓದಿ: ಅನುಬಂಧ ವೇದಿಕೆಯಲ್ಲಿ ಸಪ್ತಪದಿ ತುಳಿದು.. ಸಂಧ್ಯಾಗೆ 7 ಪ್ರಾಮೀಸ್ ಕೊಟ್ಟ ಉಗ್ರಂ ಮಂಜು..!

PM Modi

ರೈಲು ಸಾಗುವ ಮಾರ್ಗ ಯಾವುದು?

  • ಈ ರೈಲು ಮಾರ್ಗವು ಒಟ್ಟು 8.5 ಕಿ.ಮೀ ಉದ್ದದ ಹೊಸ ಜೋಡಣೆಯನ್ನು ಒಳಗೊಂಡಿರಲಿದ್ದು, ಈ ಕೆಳಗಿನ ಪ್ರಮುಖ ನಿಲ್ದಾಣಗಳ ಮೂಲಕ ಸಾಗಲಿದೆ. 
  • KSR ಬೆಂಗಳೂರು ಸಿಟಿ (ಮೆಜೆಸ್ಟಿಕ್) ಇಂದ ಆರಂಭ
  • ಯಶವಂತಪುರ ಮತ್ತು ಯಲಹಂಕ ಮೂಲಕ ಸಂಚಾರ
  • ಟ್ರಂಪೆಟ್ ಇಂಟರ್‌ ಚೇಂಜ್ ಬಳಿ ತಿರುವು ಪಡೆದು ರೈಲು ಮಾರ್ಗ ಬದಲಾವಣೆ
  • ಬಿಕೆ ಹಳ್ಳಿ ಹಾಗೂ ಏರೋಸ್ಪೇಸ್ ಪಾರ್ಕ್ ಮೂಲಕ ಸಾಗಿ ದೇವನಹಳ್ಳಿ ಏರ್‌ಪೋರ್ಟ್ ಟರ್ಮಿನಲ್ ತಲುಪಲಿದೆ.

ವಿ. ಸೋಮಣ್ಣ ಹೇಳಿದ್ದೇನು?

ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಈ ಬಗ್ಗೆ ಪ್ರತಿಕ್ರಿಯಿಸಿ, "ಹಿಂದೆ ನಾನು ರಾಜ್ಯ ಮೂಲಸೌಕರ್ಯ ಸಚಿವನಾಗಿದ್ದಾಗ ಮತ್ತು ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೇ ಪ್ರಧಾನಮಂತ್ರಿಗಳ ಬಳಿ ಈ ಬಗ್ಗೆ ಮನವಿ ಮಾಡಿದ್ದೆವು. ಈಗ ಈ ಯೋಜನೆಗೆ ಒಂದು 'ಲಾಜಿಕಲ್ ಎಂಡ್' ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತುಕತೆ ನಡೆಸಿವೆ. ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಹೆಜ್ಜೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಇಂದೇ T20 ಸರಣಿ ಗೆಲ್ಲುತ್ತಾ ಟೀಮ್ ಇಂಡಿಯಾ..?

Modi and Somanna

ಡೆಡ್‌ಲೈನ್ ಯಾವಾಗ?

ಸದ್ಯದ ಮಾಹಿತಿ ಪ್ರಕಾರ, ಈ ಬೃಹತ್ ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕಾಮಗಾರಿಯ ಡೆಡ್‌ಲೈನ್ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ‘ಈಗಲೇ ನಿಖರವಾದ ಸಮಯ ಹೇಳಲು ಸಾಧ್ಯವಿಲ್ಲ. ಆದರೆ ಹೊಸ ಎಂಡಿ ನೇಮಕವಾಗಿದ್ದಾರೆ, ಅವರೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಯಾಣಿಕರಿಗೇನು ಲಾಭ?

ಪ್ರಸ್ತುತ ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್‌ಗೆ ಹೋಗಲು ರಸ್ತೆ ಮಾರ್ಗದಲ್ಲಿ ಕನಿಷ್ಠ 1.5 ರಿಂದ 2 ಗಂಟೆ ಬೇಕಾಗುತ್ತದೆ. ಆದರೆ ಸಬ್‌ಅರ್ಬನ್ ರೈಲು ಜಾರಿಯಾದರೆ ಕೇವಲ 45 ರಿಂದ 50 ನಿಮಿಷಗಳಲ್ಲಿ ಏರ್‌ಪೋರ್ಟ್ ತಲುಪಬಹುದು. ಇದು ಟ್ಯಾಕ್ಸಿ ವೆಚ್ಚವನ್ನೂ ಗಣನೀಯವಾಗಿ ಕಡಿಮೆ ಮಾಡಲಿದ್ದು, ಮಧ್ಯಮ ವರ್ಗದ ಜನರಿಗೆ ವರದಾನವಾಗಲಿದೆ.

ಇದನ್ನೂ ಓದಿ: ನಾಸಿಕ್ ಪೊಲೀಸರ ಪತ್ರದಿಂದ 400 ಕೋಟಿ ರಾಬರಿ ರಹಸ್ಯ ರಿವೀಲ್.. 4 ಪ್ರಮುಖ ಅಪ್​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru Suburban Rail V Somanna
Advertisment