/newsfirstlive-kannada/media/media_files/2025/12/11/new-year-2025-12-11-09-49-48.jpg)
ಹೊಸವರ್ಷಕ್ಕೆ ದಿನಗಣನೆ ಶುರುವಾಗಿದೆ.. ಸಿಲಿಕಾನ್ ಸಿಟಿಯಲ್ಲಿ ಗ್ರ್ಯಾಂಡ್ ಆಗಿ ನ್ಯೂ ಇಯರ್ ವೆಲ್ ಕಮ್ ಮಾಡೋಕೆ ಯುವ ಸಮೂಹ ಸಜ್ಜಾಗಿದೆ. ನಗರದ ಪಬ್... ಬಾರ್ ಅಂಡ್ ರೆಸ್ಟೋರೆಂಟ್‌ಗಳು ಆಲ್ ರೆಡಿ ನ್ಯೂ ಇಯರ್‌ಗೆ ಸಿದ್ಧತೆಗಳಾಗ್ತಿದೆ. ಇನ್ನೂ.. ಹೊಸ ವರ್ಷಕ್ಕೆ ಕಾಲಿಡೋಕೆ 20 ದಿನ ಇರೋವಾಗ್ಲೆೇ ಅದಕ್ಕೂ ಮುಂಚೆಯೇ ಪೊಲೀಸರು ಗೈಡ್‌ಲೈನ್ಸ್ ಬಿಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/12/11/new-year-2-2025-12-11-10-00-37.jpg)
ನ್ಯೂ ಇಯರ್ ಗೈಡ್‌ಲೈನ್ಸ್
- ಗೋವಾ ಪಬ್‌ನಲ್ಲಿ ಅಗ್ನಿ ದುರಂತ.. ಪೊಲೀಸರು ಫುಲ್ ಅಲರ್ಟ್
- ಪಾರ್ಟಿ ಮಾಡೋಕೆ ಫೈರ್ ಡಿಪಾರ್ಟ್‌ಮೆಂಟ್ ಅನುಮತಿ ಬೇಕು
- ಪರ್ಮಿಷನ್ ಇಲ್ಲದಿದ್ರೆ ಪಬ್, ಬಾರ್-ರೆಸ್ಟೋರೆಂಟ್ ಕ್ಲೋಸ್
- ಪರ್ಮಿಷನ್ ಇಲ್ಲದೆ ಸರ್ವೀಸ್ ನೀಡಿದ್ರೆ ಕಾನೂನು ಕ್ರಮ
- ಪಬ್ ಬಾರ್‌ನಲ್ಲಿ ಅಗತ್ಯಕ್ಕಿಂತ ಗ್ರಾಹಕರನ್ನ ಸೇರಿಸುವಂತಿಲ್ಲ
- ಹೆಚ್ಚು ಗ್ರಾಹಕರು ಸೇರಿ ಅನಾಹುತ ಆದ್ರೆ ಮಾಲೀಕರೇ ಹೊಣೆ
- ಪಾರ್ಟಿಗೆ ನಿಗದಿ ಮಾಡಿದ ಸಮಯ ಮೀರಿ ಸೇವೆ ನೀಡುವಂತಿಲ್ಲ
- ಸೆಲೆಬ್ರೆಷನ್‌ನಲ್ಲಿ CCTV ಕಡ್ಡಾಯ, ಮಹಿಳೆಯರ ಸುರಕ್ಷತೆ ಅಗತ್ಯ
ಇದನ್ನೂ ಓದಿ:ಜೈಲಲ್ಲಿರೋ ದರ್ಶನ್‌ಗೆ ಡೆವಿಲ್ ಸಕ್ಸಸ್ ಅದೆಷ್ಟು ಅಗತ್ಯ?
/filters:format(webp)/newsfirstlive-kannada/media/media_files/2025/12/11/new-year-1-2025-12-11-10-00-24.jpg)
ನ್ಯೂಇಯರ್ ಬಂತಂದ್ರೆ ಸಾಕು.. ಸಿಲಿಕಾನ್ ಸಿಟಿಯಲ್ಲಿ ಮಾದಕದ ಘಮ ಜಾಸ್ತಿನೇ ಇರುತ್ತೆ.. ಇದನ್ನ ತಡೆಗಟ್ಟೋಕೂ ಪೊಲೀಸರು ಪ್ಲಾನ್ ರೆಡಿ ಮಾಡ್ಕೊಂಡಿದ್ದಾರೆ. ಡ್ರಗ್ ಪೆಡ್ಲರ್‌ಗಳನ್ನ ಪತ್ತೆ ಹಚ್ಚಲು ಪೊಲೀಸರು ಕನ್ಸೂಮರ್ ಟು ಪೆಡ್ಲರ್‌ನ ಟಾರ್ಗೆಟ್ ಮಾಡಿದ್ದಾರೆ. ಇದಕ್ಕಾಗಿ ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ಡ್ರಗ್ ಸೇವನೆ ಪರೀಕ್ಷೆ ಇರುತ್ತೆ. ಅನುಮಾನ ಬಂದ್ರೆ ರಕ್ತದ ಮಾದರಿಯನ್ನ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗುತ್ತೆ. ಎಸಿಪಿ ಹಂತದ ಅಧಿಕಾರಿಗಳ ನೇಮಿಸಿ ಪರೀಕ್ಷೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ Foreigners Regional Registration Officeನಿಂದ ಮಾಹಿತಿ ಪಡೆದು ಅಕ್ರಮ ವಿದೇಶಿ ವಲಸಿಗರನ್ನ ಗಡಿಪಾರು ಮಾಡ್ಲಾಗಿದೆ. ಒಟ್ಟು 302 ಮಂದಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರನ್ನ ಪೊಲೀಸರು ಗಡಿಪಾರು ಮಾಡಿದ್ದಾರೆ. ಇನ್ನು, ಒಂದು ತಿಂಗಳ ಮುಂಚೆಯೇ ಬಾಂಬ್ ನಿಷ್ಕ್ರಿಯ ದಳಕ್ಕೆ ತರಬೇತಿಯನ್ನೂ ನೀಡ್ಲಾಗ್ತಿದೆ.
ಇದನ್ನೂ ಓದಿ: ಬೆಳಗಾವಿಯಲ್ಲೂ ಸಿದ್ದು ‘ಡಿನ್ನರ್ ಪಾಲಿಟಿಕ್ಸ್; ಕುತೂಹಲ ಮೂಡಿಸಿದ ಜಾರಕಿಹೊಳಿ ಪ್ರತ್ಯೇಕ ಸಭೆ..!
ಒಟ್ನಲ್ಲಿ.. ನ್ಯೂ ಇಯರ್‌ಗೆ ಯಾವುದೇ ಅಹಿತಕರ ಘಟನೆ ನಡೆಯಬಾರ್ದು ಅಂತಾ ಪೊಲೀಸರು ಸಿದ್ಧತೆ ಮಾಡಿಕೊಳ್ತಿದ್ದಾರೆ. ಇನ್ನೂ 20 ದಿನಗಳಿರುವಂತೆಯೇ ಪೊಲೀಸರು ಸಿದ್ಧತೆಯ ಅಖಾಡಕ್ಕಿಳಿದಿರೋದು ನಿಜಕ್ಕೂ ಮೆಚ್ಚೋ ವಿಚಾರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us