/newsfirstlive-kannada/media/post_attachments/wp-content/uploads/2024/01/NEW-YEAR.jpg)
ಬೆಂಗಳೂರು: ಇವತ್ತು ಡಿಸೆಂಬರ್ 31. ಅಂದರೆ 2025 ಕೊನೆಯ ದಿನ. ಇಂದು ರಾತ್ರಿ ಹೊಸ ವರ್ಷ ಸಂಭ್ರಮಾಚರಣೆ ಭರ್ಜರಿಯಾಗಿ ನಡೆಯಲಿದೆ. ಅದಕ್ಕಾಗಿ ಬೆಂಗಳೂರು ಸಿಟಿ ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದೆ.
ಹಾಗಿದ್ದರೆ ಹೊಸ ವರ್ಷ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಹೇಗೆ ಸಜ್ಜಾಗಿದೆ? ಮೊಟ್ಟ ಮೊದಲ ಬಾರಿಗೆ ಹೀಟ್ ಮ್ಯಾಪ್ ಟೆಕ್ನಾಲಜಿ ಜಾರಿ.. ಏನದು? ಎಷ್ಟು ಪೊಲೀಸರ ನಿಯೋಜನೆ? ಕುಡಿದು ರಸ್ತೆಯಲ್ಲಿ ಬಿದ್ರೆ ಗತಿ ಏನು? ಕಳೆದ ವರ್ಷ 8 ಲಕ್ಷ ಜನ ಹೊಸ ವರ್ಷ ಆಚರಣೆಯಲ್ಲಿ ಭಾಗಿಯಾಗಿದ್ದರು.. ಈ ವರ್ಷ 10 ಲಕ್ಷ ಮೀರುವ ಅಂದಾಜು ಇದೆ. ಆಂಬ್ಯುಲೆನ್ಸ್, ವಾಹನಗಳು, ಟ್ರಾಫಿಕ್ ಸಮಸ್ಯೆ ಸೇರಿದಂತೆ ಜನರಿಗೆ ಮಾಹಿತಿ ಸಿಗಲು ಕ್ಯೂಆರ್ ಕೋಡ್ ಮೂಲಕ ಮಾಹಿತಿ ರವಾನೆ ಮಾಡಲಾಗುತ್ತದೆ.
ಇದನ್ನೂ ಓದಿ:2025ರಲ್ಲೂ ಭಾರತೀಯರೇ ಕಿಂಗ್; ಕೊಹ್ಲಿ, ರೋಹಿತ್, ಪಂತ್ ಗಳಿಸಿದ ಹಣವೆಷ್ಟು..?
ಏನಿದು ಹೀಟ್ ಮ್ಯಾಪ್ ಟೆಕ್ನಾಲಿಜಿ?
- ಇದೇ ಮೊದಲ ಬಾರಿಗೆ ಹೀಟ್ ಮ್ಯಾಪ್ ಮಾಡಲಾಗಿದೆ
- ಅತೀ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ
- ಹಳದಿ ಬಣ್ಣದಿಂದ ಗುರುತಿಸುವ ಸ್ಥಳಗಳನ್ನು ಹೆಚ್ಚಿನ ಜನ ಸೇರುತ್ತಿರುವುದನ್ನು ಸೂಚಿಸುತ್ತದೆ
- ಹಸಿರು ಬಣ್ಣ ಇರುವುದು ಕಡಿಮೆ ಜನ ಇರುವುದನ್ನು ಗುರುತಿಸಬಹುದು
- ಇದನ್ನು ಕಮಾಂಡ್ ಸೆಂಟರ್‌ನಿಂದ ನಿಗಾ ವಹಿಸಲಾಗುತ್ತದೆ
- ಇದನ್ನು ಆಧರಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ
ಪೊಲೀಸರ ಭದ್ರತೆ ಹೇಗೆ?
- 14 ಸಾವಿರ ಪೊಲೀಸರು
- 2500 ಟ್ರಾಫಿಕ್ ಪೊಲೀಸರು,
- ⁠88 ಕೆಎಸ್ಆರ್‌ಪಿ ತುಕಡಿ
- ⁠21 ಸಿಎಆರ್
- ⁠266 ಹೊಯ್ಸಳ ವಾಹನ
- 250 ಕೋಬ್ರಾ ವಾಹನ
- ⁠400 ಟ್ರಾಫಿಕ್ ವಾರ್ಡನ್
- ಜನ ದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್
- ಸಿವಿಲ್ ಡಿಫೆನ್ಸ್
- ಹೋಮ್ ಗಾರ್ಡ್ಸ್ ಸೇರಿದಂತೆ ಒಟ್ಟು 20 ಸಾವಿರ ಪೊಲೀಸರ ನಿಯೋಜನೆ
8 ಕಡೆ ಸಾರಿಗೆ ವ್ಯವಸ್ಥೆ
- ಜನರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ಅನುವು
- ಹೆಚ್ಚು ಯುವಜನರು ಸೇರುವ ಬಾರ್ ಆ್ಯಂಡ್ ರೆಸ್ಟೋರೆಂಟ್, ಮೆಟ್ರೋ ಕಾರಿಡಾರ್, ಮನೋರಂಜನಾ ಸ್ಥಳಗಳಲ್ಲಿ ಅಗತ್ಯ ಕ್ರಮ
- ಅವಶ್ಯಕತೆ ಇರುವ ಸ್ಥಳಗಳಲ್ಲಿ ವಾಚ್ ಟವರ್
- ⁠180 ಕಡೆ ಫೋಕಸ್ ಲೈಟ್‌ಗಳ ಅಳವಡಿಕೆ
- ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ
- ಟ್ಯಾಕ್ಸಿಗಳು ಸಿಗಲಿಲ್ಲ ಅಂದ್ರೆ ಅಂತವರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ಎಂಟು ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ
ಇದನ್ನೂ ಓದಿ:ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಕಾನೂನು -ಸಿದ್ದರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us