/newsfirstlive-kannada/media/media_files/2025/09/11/bengalore-rain-2025-09-11-06-54-48.jpg)
ಬೆಂಗಳೂರಲ್ಲಿ ಕಳೆದ ರಾತ್ರಿ ಭರ್ಜರಿ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಇಡೀ ನಗರ ಅಸ್ತವ್ಯಸ್ತಗೊಂಡಿದ್ದು, ಬೆಳ್ಳಂಬೆಳಗ್ಗೆ ಕೆಲಸಕ್ಕೆ ಅಂತಾ ಹೊರಟವರಿಗೆ ಶಾಕ್ ಆಗಿದೆ.
ಶಾಂತಿನಗರ, ಲಾಲ್ ಬಾಗ್, ವಿಲ್ಸನ್ ಗಾರ್ಡನ್, ಜಯನಗರ, ಎಂ.ಜಿ ರೋಡ್, ಟ್ರಿನಿಟಿ ಸರ್ಕಲ್, ಆಶ್ರಮ, ಶ್ರೀನಿವಾಸನಗರ, ಹನುಮಂತನಗರ, ಕತ್ರಿಗುಪ್ಪೆ, ವಿದ್ಯಾಪೀಠ, ಮೆಜೆಸ್ಟಿಕ್, ಯಶವಂತಪುರ ಸೇರಿ ಹಲವೆಡೆ ಮಳೆಯಾಗಿದೆ.
ಮಳೆಗೆ ಧರೆಗುರುಳಿದ ಬೃಹತ್ ಮರ
ಇನ್ನು ರಾಜಾಜಿನಗರ 4ನೇ ಬ್ಲಾಕ್ನಲ್ಲಿ ಬಹೃತ್ ಮರವೊಂದು ನೆಲಕ್ಕೆ ಬಿದ್ದಿದೆ. ಪರಿಣಾಮ ಐದು ಕಾರು, ಟಾಟಾ ಏಸ್, ಮೂರ್ನಾಲ್ಕು ಬೈಕ್ ಹಾಗೂ ಎರಡು ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಎರಡು ಕುಟುಂಬಳಿಗೆ ದಿಗ್ಬಂಧನ ಹಾಕಿಂದಂತೆ ಆಗಿದೆ.
ಇದನ್ನೂ ಓದಿ:ವೀರಶೈವ ಲಿಂಗಾಯತ ಎಂದು ಬರೆಸಿ ಎಂದಿದ್ದ ಈಶ್ವರ ಖಂಡ್ರೆ.. ವಿಡಿಯೋ ತಿರುಚಿದ ಕಿಡಿಗೇಡಿಗಳು, ದೂರು ದಾಖಲು
ಮನೆಯ ಕಾಂಪೌಂಡ್ ಮೇಲೆ ಮರಬಿದ್ದ ಪರಿಣಾಮ ಎಲ್ಲಿಯೂ ಬರಲು ಅವಕಾಶ ಇರಲಿಲ್ಲ. ಚಂದ್ರಮ್ಮ ಹಾಗೂ ಪೀಟರ್ ಎಂಬುವವರ ಮನೆ ಮೇಲೆ ಮರ ಬಿದ್ದಿದೆ. ಹಾಗೆಯೇ ಪೀಟರ್ ಮನೆಗೆ ಚೆನ್ನೈನಿಂದ ನೆಂಟರು ಬಂದಿದ್ದರು.
ಮನೆ ಮುಂದೆ ನಿಲ್ಲಿಸಿದ್ದ ನೆಂಟರ ಕಾರು ಫುಲ್ ಜಖಂಗೊಂಡಿದೆ. ಮರ ಬಿದ್ದು ಹೊರಬರಲಾಗದೇ ಹೌಸ್ ಅರೆಸ್ಟ್ ಆಗಿದ್ದೀವಿ ಎಂದು ಕುಟುಂಬ ಗೋಳಾಡಿದೆ. ಮತ್ತೊಂದು ಕಡೆ ಆತಂಕದ ವಿಚಾರ ಅಂದ್ರೆ, ವಿದ್ಯುತ್ ಕಂಬಗಳು ವಾಲಿದೆ. ಯಾವುದೇ ಕ್ಷಣದಲ್ಲಾದರೂ ಅದು ಕೂಡ ಅಪಾಯ ತರುವ ಸೂಚನೆ ನೀಡ್ತಿದೆ.
ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ.. ವರುಣ್ ತೇಜ್-ಲಾವಣ್ಯಗೆ ಗಂಡು ಮಗು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ