/newsfirstlive-kannada/media/post_attachments/wp-content/uploads/2024/02/HEAT-WAVES.jpg)
ಈಗಂತೂ ಸಿಲಿಕಾನ್​ ಸಿಟಿಯಲ್ಲಿ ಎಲ್ಲಿ ನೋಡಿದ್ರೂ ಧೂಳು, ಹೊಗೆ. ಇದಕ್ಕೆ ಪ್ರಮುಖ ಕಾರಣವೇ ವಾಯು ಮಾಲಿನ್ಯ. ದಿನ ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ವಾಹನಗಳು ಹೋಗುತ್ತವೆ. ಆ ವಾಹನಗಳಿಂದ ಬರುವ ಧೂಳು ನಮ್ಮ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:ಶಾಲೆಯ ಹೋಮ್ ವರ್ಕ್​ ಒತ್ತಡ.. ಜೀವ ಕಳೆದುಕೊಂಡ SSLC ವಿದ್ಯಾರ್ಥಿನಿ, ಅನುಮಾನ
/filters:format(webp)/newsfirstlive-kannada/media/post_attachments/wp-content/uploads/2023/08/trafic.jpg)
ಅದರಲ್ಲೂ ದೀಪಾವಳಿ ಬಂತಂದ್ರೆ ಸಾಕು, ಎಲ್ಲಿ ನೋಡಿದ್ರೂ ಪಟಾಕಿ ಹೊಗೆ ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಸಾರ್ವಜನಿಕರು ಉಸಿರಾಡೋದಕ್ಕೆ ಕಷ್ಟವಾಗಿತ್ತೆ. ಇದೇ ಹಲವಾರು ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ವಾಹನಗಳ ಸಂಚಾರ ಅಧಿಕ. ದಿನನಿತ್ಯ ಲಕ್ಷಾಂತರ ಜನರು ಬಸ್​, ಬೈಕ್​, ಆಟೋ ಹೀಗೆ ನಾನಾ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ಹೀಗೆ ಒಂದು ದಿನ ಹೊರಗಡೆ ಹೋಗಿ ಬಂದ್ರೆ ಸಾಕು, ಮುಖ ಮಾಸಿ ಹೋಗುತ್ತೆ. ಇದರಿಂದ ಮುಖದಲ್ಲಿ ಕಿರಿಕಿರಿ ಉಂಟು ಆಗುತ್ತದೆ. ಮೊಡವೆಗಳು ಹುಟ್ಟಿಕೊಳ್ಳೋದಕ್ಕೆ ಶುರುವಾಗಿ ಬಿಡುತ್ತೆ.
/filters:format(webp)/newsfirstlive-kannada/media/post_attachments/wp-content/uploads/2024/11/SKIN.jpg)
ಇಂತಹ ಧೂಳು, ಹೊಗೆಯಲ್ಲಿ ನಮ್ಮ ಚರ್ಮವನ್ನು ರಕ್ಷಿಸಲು ಸುಲಭವಾದ ಮಾರ್ಗವೇ ತ್ವಚೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು. ನೀವು ಮನೆಗೆ ಮರಳಿದ ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಬೇಕು. ಒಳ್ಳೆಯ ಮಾಯಿಶ್ಚರೈಸರ್ ಅಪ್ಲೈ ಮಾಡುವುದನ್ನು ಮಾತ್ರ ಮರೆಯಬೇಡಿ. ಇನ್ನೊಂದು ಬಹು ಮುಖ್ಯವಾಗಿ ಸಿಲಿಕಾನ್​ ಸಿಟಿಯಲ್ಲಿ ಇರುವವರು ಮನೆಯಿಂದ ಆಚೆ ಬರುವ ಮುನ್ನ ಮುಖಕ್ಕೆ ಮಾಸ್ಕ್​ ಹಾಕಿಕೊಂಡರೇ ಉತ್ತಮ. ಏಕೆಂದರೆ ಮಾಸ್ಕ್​ ಹಾಕಿಕೊಳ್ಳುವುದರಿಂದ ಒಂದು ಹಂತದಲ್ಲಿ ಮಾಲಿನ್ಯದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮತ್ತೊಂದು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2023/06/SKIN_CARE.jpg)
ನೀವೇನಾದ್ರೂ ರಸ್ತೆ ಮೂಲಕ ನಡೆದುಕೊಂಡು ಹೋಗುವಂತೆ ಇದ್ದರೆ ಸ್ಕಾರ್ಫ್​ ಅಥವಾ ದುಪ್ಪಟ್ಟದಿಂದ ನಿಮ್ಮ ದೇಹವನ್ನು ಕವರ್​ ಮಾಡಿಕೊಳ್ಳಿ. ಬಹಳ ಮುಖ್ಯವಾಗಿ ಯುವತಿಯರು ಸ್ಲೀವ್​ಲೆಸ್ ಬಟ್ಟೆಗಳನ್ನು ಧರಿಸಿಕೊಂಡರೇ ಅಂತವರು ಸ್ಕಾರ್ಫ್​ ಅಥವಾ ದುಪ್ಪಟ್ಟವನ್ನು ಬ್ಯಾಗ್​ನಲ್ಲಿ ಇಟ್ಟಕೊಂಡರೇ ಉತ್ತಮ.
ಇದನ್ನೂ ಓದಿ: ಮಹಿಳೆಯರೇ ಗಮನಿಸಿ.. ಕಪಾಟಿನಲ್ಲಿಟ್ಟ ಸೀರೆಗಳು ಹಾಳಾಗಬಾರದಾ? ಸೇಫ್​ ಆಗಿರಿಸಲು ಹೀಗೆ ಮಾಡಿ..
/filters:format(webp)/newsfirstlive-kannada/media/post_attachments/wp-content/uploads/2024/12/5-Vegetables-2.jpg)
ಇನ್ನೂ, ಈ ಮಾಲಿನ್ಯವು ಕೇವಲ ತ್ವಚೆಯ ಮೇಲೆ ಅಲ್ಲದೇ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು. ಇದರಿಂದ ತ್ವಚೆಗೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ. ಹಾಗೇ ಒತ್ತಡವನ್ನು ನಿವಾರಿಸಿ ನೀವು ಲವಲವಿಕೆಯಿಂದ ಸಹಾಯ ಮಾಡುತ್ತದೆ. ಬಹುಮುಖ್ಯವಾಗಿ ಪ್ರತಿದಿನ 8 ಗಂಟೆಗಳ ಕಾಲ ನಿದ್ರೆ ಮಾಡಿ. ಇದರಿಂದ ಇಡೀ ನಿಮ್ಮ ಆರೋಗ ಚೆನ್ನಾಗಿರಿಸುವಂತೆ ಮಾಡುತ್ತದೆ. ಇದರಿಂದ ಮರುದಿನ ಮನಸ್ಸು ಹಾಗೂ ತ್ವಚೆ ಎರಡು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುತ್ತದೆ.
/filters:format(webp)/newsfirstlive-kannada/media/post_attachments/wp-content/uploads/2024/04/heat-wave3.jpg)
ಈ ಮೇಲಿನ ಎಲ್ಲಾ ಸಲಹೆಗಳನ್ನು ನೀವು ಪ್ರತಿದಿನ ಪಾಲಿಸುವುದರ ಮೂಲಕ ನಿಮ್ಮ ಆರೋಗ್ಯ, ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಇದರಿಂದ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us