/newsfirstlive-kannada/media/media_files/2026/03/05/mysore-silk-saree-3-2026-03-05-10-49-15.jpg)
ಬೆಂಗಳೂರು: ಮಹಿಳಾ ದಿನಾಚರಣೆ (Women's Day) ಸಮೀಪಿಸುತ್ತಿದ್ದಂತೆ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ 'ಮೈಸೂರು ಸಿಲ್ಕ್ ಸೀರೆ'ಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಸೀರೆ ಖರೀದಿಸಲು ಮಹಿಳೆಯರು ನಿದ್ದೆ ಬಿಟ್ಟು ಮುಂಜಾನೆ 4 ಗಂಟೆಯಿಂದಲೇ ಮಳಿಗೆಯ ಮುಂದೆ ಸಾಲುಗಟ್ಟಿ ನಿಂತಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
4 ಗಂಟೆಗೇ ಕ್ಯೂ!
ಜಯನಗರದಲ್ಲಿರುವ ಪ್ರತಿಷ್ಠಿತ KSIC (ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ) ಮಳಿಗೆಯು ಬೆಳಗ್ಗೆ 10:30ಕ್ಕೆ ಬಾಗಿಲು ತೆರೆಯುತ್ತದೆ. ಆದರೆ, ಸೀರೆಗಳ ಸ್ಟಾಕ್ ಎಲ್ಲೋ ಖಾಲಿಯಾಗಿಬಿಡುತ್ತದೆಯೋ ಎಂಬ ಭಯದಲ್ಲಿ ಮಹಿಳೆಯರು ಬೆಳಗಿನ ಜಾವ 4 ಗಂಟೆಗೇ ಬಂದು ಸರತಿಯ ಸಾಲಿನಲ್ಲಿ (Queue) ನಿಂತಿದ್ದಾರೆ. ಕೇವಲ ಬೆಂಗಳೂರಿನವರಷ್ಟೇ ಅಲ್ಲದೆ, ಶಿರಸಿ, ಶಿರಾ, ಚಳ್ಳಕೆರೆ ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರದಿಂದಲೂ ಮಹಿಳಾಮಣಿಗಳು ಸೀರೆ ಖರೀದಿಗೆ ದೌಡಾಯಿಸಿದ್ದಾರೆ.
ಟೋಕನ್‌ಗಾಗಿ ನೂಕಾಟ, ಜಗಳ:
ಅಪಾರ ಸಂಖ್ಯೆಯಲ್ಲಿ ಸೇರಿರುವ ಮಹಿಳೆಯರನ್ನು ನಿಯಂತ್ರಿಸಲು ಮಳಿಗೆಯ ಸಿಬ್ಬಂದಿ ಟೋಕನ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ಸೀರೆ ಸಿಗುವುದಿಲ್ಲವೋ ಎಂಬ ಆತಂಕದಲ್ಲಿ ಟೋಕನ್ ಪಡೆಯಲು ಮಹಿಳೆಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪರಸ್ಪರ ಜಗಳ, ನೂಕಾಟಗಳೂ ನಡೆಯುತ್ತಿವೆ.
ಇದನ್ನೂ ಓದಿ: T20 world cup: ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ನ್ಯೂಜಿಲೆಂಡ್..!
/filters:format(webp)/newsfirstlive-kannada/media/media_files/2026/03/05/mysore-silk-saree-2-2026-03-05-10-48-07.jpg)
ಲಭ್ಯವಿರುವುದು 45 ಸೀರೆ, ಕ್ಯೂನಲ್ಲಿ 100ಕ್ಕೂ ಹೆಚ್ಚು ಮಂದಿ!
ಮಳಿಗೆಯಲ್ಲಿ ಸದ್ಯ ಕೇವಲ 45 ಮೈಸೂರು ಸಿಲ್ಕ್ ಸೀರೆಗಳು ಮಾತ್ರ ಲಭ್ಯವಿವೆ. ಹೊರಗಡೆ 100ಕ್ಕೂ ಹೆಚ್ಚು ಮಹಿಳೆಯರು ಟೋಕನ್‌ಗಾಗಿ ಕಾದು ಕುಳಿತಿದ್ದಾರೆ. ಈ ಕಾರಣಕ್ಕಾಗಿಯೇ ನಿಯಮಗಳನ್ನು ಕಟ್ಟುನಿಟ್ಟು ಮಾಡಲಾಗಿದ್ದು, 'ಒಂದು ಟೋಕನ್‌ಗೆ ಕೇವಲ ಒಂದು ಸೀರೆ'ಯನ್ನು ಮಾತ್ರ ನೀಡಲಾಗುತ್ತಿದೆ.
KSIC ಮಳಿಗೆಯಲ್ಲಿ ವಾರದ ಎಲ್ಲಾ ದಿನಗಳಲ್ಲೂ ಈ ಸೀರೆಗಳು ಸಿಗುವುದಿಲ್ಲ. ಕೇವಲ ಪ್ರತಿ ಗುರುವಾರ ಹಾಗೂ ಶನಿವಾರ ಮಾತ್ರ ಮೈಸೂರು ಸಿಲ್ಕ್ ಸೀರೆಗಳ ವಿತರಣೆ ಮಾಡಲಾಗುತ್ತದೆ. ಇಲ್ಲಿ ಲಭ್ಯವಿರುವ ಸೀರೆಗಳ ಬೆಲೆ 26,000 ರೂಪಾಯಿಯಿಂದ ಆರಂಭವಾಗಿ ಬರೋಬ್ಬರಿ 3 ಲಕ್ಷ ರೂಪಾಯಿವರೆಗೂ ಇದೆ!
/filters:format(webp)/newsfirstlive-kannada/media/media_files/2026/03/05/mysore-silk-saree-1-2026-03-05-10-48-31.jpg)
ಮುಂಬರುವ ವುಮೆನ್ಸ್ ಡೇ ಹಿನ್ನೆಲೆಯಲ್ಲಿ ತಮಗೆ ತಾವೇ ಉಡುಗೊರೆ ನೀಡಿಕೊಳ್ಳಲು ಹಾಗೂ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಮಹಿಳೆಯರು ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆ ಖರೀದಿಗೆ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ದಿಢೀರ್ ಏರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us