/newsfirstlive-kannada/media/media_files/2025/11/21/lal-bagh-2025-11-21-08-39-47.jpg)
ವೀಕೆಂಡ್​ ಬಂತು ಲಾಲ್​ಬಾಗ್ ಹೋಗಿ ಒಂದು ರೌಂಡ್ಸ್​ ಹಾಕಿ ಫೋಟೋ, ರೀಲ್ಸ್​ ವಿಡಿಯೋ ಮಾಡೋ ಪ್ಲ್ಯಾನ್​ನಲ್ಲಿದ್ದೀರಾ? ಅಥವಾ ನೀವು ದಿನನಿತ್ಯ ಬೆಳಗ್ಗೆ ಲಾಲ್​ಬಾಗ್​ಗೆ ಬಂದು ಯೋಗ ಮಾಡ್ತೀರಾ? ಹಾಗಿದ್ರೆ ಡೋಂಟ್​ ಮಿಸ್​ ಥಿಸ್​​ ಸ್ಟೋರಿ.. ಇನ್ಮುಂದೆ ನೀವು ಲಾಲ್​ಬಾಗ್​ನಲ್ಲಿ ವಾಕಿಂಗ್ ಮಾಡೋಕೂ ರೂಲ್ಸ್!
ನಗರದ ಸಸ್ಯಕಾಶಿ ಎಂದೇ ಹೆಸರು ಪಡೆದಿರುವ ಲಾಲ್​ಬಾಗ್​ನಲ್ಲಿ ಇತ್ತಿಚಿನ ದಿನಗಳಲ್ಲಿ ರೀಲ್ಸ್ ಪ್ರೀ ವೆಡ್ಡಿಂಗ್ ಶೂಟ್ ಹಾವಳಿ ಜೋರಾಗಿದೆ ಇದಕ್ಕೆ ಬ್ರೇಕ್ ಹಾಕಲು ಲಾಲ್ ಬಾಗ್ ಅಡಳಿತ ಸಿದ್ಧತೆ ನಡೆಸಿದೆ ಹಾಗಿದ್ರೆ ಯಾಕಿ ರೂಲ್ಸ್ ಈ ರೂಲ್ಸ್ ಗೆ ಜನ ಹೇಗೆ ರಿಯಾಕ್ಟ್ ಮಾಡ್ತಾರೆ.
ಇದನ್ನೂ ಓದಿ:‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಗ್ರ್ಯಾಂಡ್ ರಿಲೀಸ್.. ಸಿನಿ ವೀಕ್ಷಕರಿಂದ ಸೂಪರ್ ರೆಸ್ಪಾನ್ಸ್..!
/filters:format(webp)/newsfirstlive-kannada/media/media_files/2025/11/21/lal-bagh-1-2025-11-21-08-41-07.jpg)
ಸಸ್ಯಕಾಶಿ ಎಂದೆ ಹೆಸರು ಪಡೆದುಕೊಂಡಿರುವ ಲಾಲ್ ಬಾಗ್​ನಲ್ಲಿ ರೀಲ್ಸ್ ಹಾಗೂ ಫ್ರೀ ವೆಡ್ಡಿಂಗ್ ಶೂಟ್ ಹಾವಳಿ ಜೋರಾಗಿದ್ದು ಇದಕ್ಕೆ ಬ್ರೇಕ್ ಹಾಕಲು ಲಾಲ್ ಬಾಗ್ ಆಡಳಿತ ಮಂಡಳಿ ಸಿದ್ದತೆ ನಡೆಸಿಕೊಂಡಿದೆ. ಪೋಸ್ಟ್ ವೆಡ್ಡಿಂಗ್ ಶೂಟ್ಸ್ ಮಾಡೆಲಿಂಗ್ ರೀಲ್ಸ್, ಸಿನಿಮಾ ಚಿತ್ರೀಕರಣಕ್ಕೆ ಕಡಿವಾಣ ಹಾಕಲು ಪ್ಲಾನ್ ಮಾಡಿಕೊಂಡಿದೆ.ಕೆಲವು ದಿನಗಳ ಹಿಂದೆ ಕಬ್ಬನ್ ಪಾರ್ಕಿನಲ್ಲಿ ಸಿನಿಮಾ, ಕಿರುತೆರೆ, ಪ್ರೀ ವೆಡ್ಡಿಂಗ್ ಶೂಟ್ ನಿಷೇಧ ಏರಲಾಗಿದೆ ಈ ಬೆನ್ನಲ್ಲೇ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಚಿತ್ರೀಕರಣ ನಿಷೇಧಕ್ಕೆ ಪ್ರಸ್ತಾವನೆ ತಯಾರಿ ನಡೆಯುತಿದೆ ಈ ನಡೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತಿದೆ.
ಚಿತ್ರೀಕರಣ ನಿಷೇಧಕ್ಕೆ ಕಾರಣಗಳೇನು?
- ಲಾಲ್ ಬಾಗ್ ನಲ್ಲಿ ಹೆಜ್ಜೇನು ಗೂಡು ಕಟ್ಟಿ ಕೊಂಡಿವೆ
- ಸಿನಿಮಾ ಚಿತ್ರೀಕರಣ ವೇಳೆ ಫ್ಲ್ಯಾಶ್ ಲೈಟ್ ಹಾಕಿದ್ರೆ ದಾಳಿ ಸಾಧ್ಯತೆ
- ಪ್ರೀ & ಪೋಸ್ಟ್ ವೆಡ್ಡಿಂಗ್ ಶೂಟ್ ವೇಳೆ ಸಾರ್ವಜನಿಕ ಸ್ಥಳ ಎಂಬ ಪ್ರಜ್ಞೆ ಇಲ್ಲದೇ ನಡವಳಿಕೆ
- ಹಿರಿಯ ನಾಗರಿಕರು ಪ್ರವಾಸಿಗರು ಮಕ್ಕಳು ಮಹಿಳೆಯರು ಪ್ರವಾಸಕ್ಕೆ ಬರುವವರಿಗೆ ಮುಜುಗರ
- ಗಿಡ ಮರಗಳ ಮೇಲೆ ಕುಳಿತು ಫೋಟೋ ವಿಡಿಯೋ ಚಿತ್ರೀಕರಣ ಮಾಡಿ ಅವುಗಳಿಗೆ ಹಾನಿ ಸಾಧ್ಯತೆ
ಈ ಎಲ್ಲಾ ಅಂಶಗಳ ಪರಿಗಣನೆಗೆ ತೆಗೆದು ಕೊಂಡು ವಾರದೊಳಗೆ ಸಭೆ ನಡೆಸಿ ಪ್ರಸ್ತಾವನೆ ಸಲ್ಲಿಕೆಗೆ ತಯಾರಿ ನಡೆಸಿದೆ.
ಜೀವ ವೈವಿಧ್ಯತೆಯ ತಾಣವಾಗಿರೋ ಲಾಲ್ ಬಾಗ್
ಪ್ರಾಣಿ ಪಕ್ಷಿಗಳಿಗೆ ವಾಸಿಸಲು ಧಕ್ಕೆಯಾಗದಂತೆ ಕ್ರಮವಹಿಸಲಾಗಿದ್ದು ಇಲಾಖೆಯ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಸಂತಸ ವ್ಯಕ್ತವಾಗುತಿದೆ. ರೀಲ್ಸ್ ಹಾಗೂ ಫ್ರೀ ವೆಡ್ಡಿಂಗ್ ಶೂಟ್ ನಿಂದಾಗಿ ನೆಮ್ಮದಿಯಾಗಿ ಪ್ರಕೃತಿ ಸೌಂದರ್ಯ ನೋಡಲು ಬಂದ ಪ್ರವಾಸಿಗರಿಗೆ ತೊಂದರೆಯಾಗುತಿದ್ದು ಇಲಾಖೆಯ ಈ ನಿರ್ಧಾರವನ್ನು ಜನ ಖುಷಿಯಿಂದ ಸ್ವಾಗತಿಸುತಿದ್ದಾರೆ.
ನಗರದ ಪಾರ್ಕ್​ಗಳು ಶಿಸ್ತು ಕ್ರಮವಹಿಸಲು ಸಿದ್ಧತೆ ನಡೆಸುತ್ತಿದ್ದು ರೀಲ್ಸ್ ಮಾಡಿ ಮರಗಳ ಮೇಲೆ ಕೋತಿಗಳಂತೆ ಹತ್ತಿ ಮುಜುಗರ ಉಂಟುಮಾಡುವ ರೀತಿ ವರ್ತಿಸುವ ಕಲವರು ಇನ್ನಾದರೂ ಎಚ್ಚರ ವಹಿಸಬೇಕಾಗಿದೆ.
ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್.. ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ.. ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us