Advertisment

ಮರಳಿ ಬಾ ಬೊಂಗೋ.. ಬೆಂಗಳೂರಲ್ಲಿ ಮನಕಲುಕಿದ JUSTICE FOR BONGO

ಸಿಲಿಕಾನ್ ಸಿಟಿಯ ರಸ್ತೆ ರಸ್ತೆಗಳಲ್ಲಿ ಅದೊಂದು ಪೋಸ್ಟರ್ ರಾರಾಜಿಸುತ್ತಿದೆ. ಅವನಿಗಾಗಿ ಮಾಡದ ಕ್ಯಾಂಪೇನ್ ಇಲ್ಲ.. ಅವನಿಗಾಗಿ ನಡೆದ ಪೋಸ್ಟರ್ ಅಭಿಯಾನ ಇಲ್ಲ. ಸಾಕುತ್ತೇವೆ ಸಾಕಿ ಸಲುಹುತ್ತೇವೆ ಅಂತ ಬಂದವರು ಅವನನ್ನ ಸಾಯಿಸಿಯೇ ಬಿಟ್ರಾ? ಹೀಗೊಂದು ಅನುಮಾನ ಹುಟ್ಟಿಕೊಂಡಿದೆ.

author-image
Ganesh Kerekuli
Dog accused (1)
Advertisment

ಸಿಲಿಕಾನ್ ಸಿಟಿಯ ರಸ್ತೆ ರಸ್ತೆಗಳಲ್ಲಿ ಅದೊಂದು ಪೋಸ್ಟರ್ ರಾರಾಜಿಸುತ್ತಿದೆ. ಅವನಿಗಾಗಿ ಮಾಡದ ಕ್ಯಾಂಪೇನ್ ಇಲ್ಲ.. ಅವನಿಗಾಗಿ ನಡೆದ ಪೋಸ್ಟರ್ ಅಭಿಯಾನ ಇಲ್ಲ. ಸಾಕುತ್ತೇವೆ ಸಾಕಿ ಸಲುಹುತ್ತೇವೆ ಅಂತ ಬಂದವರು ಅವನನ್ನ ಸಾಯಿಸಿಯೇ ಬಿಟ್ರಾ? ಹೀಗೊಂದು ಅನುಮಾನ ಹುಟ್ಟಿಕೊಂಡಿದೆ. 

Advertisment

ಇದನ್ನೂ ಓದಿ: ಕಿಚ್ಚನ ಎದುರಲ್ಲೇ ಗಿಲ್ಲಿಗೆ ಬಿಗ್ ಶಾಕ್ ಕೊಟ್ಟ ಕಾವ್ಯ ಶೈವ - VIDEO

Dog missing

JUSTICE FOR BONGO, ಬೀದಿ ಬೀದಿಗಳಲ್ಲಿ ಸದ್ಯ ಈ  ಪೋಸ್ಟರ್ ರಾರಾಜಿಸುತ್ತಿದೆ. ಯಾರಿದು ಬೊಂಗೋ ಅಂದ್ರಾ ಇವನೇ ನೋಡಿ. ಮುದ್ದು ನಾಯಿ. ಪ್ರಾಣಿ ಪ್ರಿಯೆ ಸ್ವರ್ಣಿಮಾ ಬಳಿ ಇದ್ದ ಕ್ಯೂಟ್​​ ನಾಯಿ ಇದು. 4 ವರ್ಷಗಳ ಹಿಂದೆ ಜೆಪಿನಗರದಲ್ಲಿ ಕಾರಿನಲ್ಲಿ ಹೋಗ್ತಿದ್ದ ಸ್ವರ್ಣಿಮಾ, ಯಾರೋ ಮಾಡಿದ ಆ್ಯಕ್ಸಿಡೆಂಟ್ ನಿಂದ ಗಾಯಗೊಂಡು ರಸ್ತೆಯಲ್ಲಿ ವಿಲ ವಿಲ ಒದ್ದಾಡ್ತಿದ್ದ ಶ್ವಾನವನ್ನು ಉಳಿಸಿರುತ್ತಾರೆ. ಅದೇ ಶ್ವಾನ BONGO. ಆದ್ರೆ, ಈ ಬೊಂಗೋ ಈಗ ಇಲ್ಲ. 

ಇದನ್ನೂ ಓದಿ: ಶಾಸಕ ದಿನೇಶ್ ಗೂಳಿಗೌಡ ಅವರ ಕಳಕಳಿಗೆ ಡಿಸಿಎಂ ತಕ್ಷಣ ಸ್ಪಂದನೆ -ಬೆಂಗಳೂರು ಮಾಲಿನ್ಯ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ

Dog accused

ಅದಕ್ಕೆ ಕಾರಣ ಅನುಭವ್ ಕಬರ ಅನ್ನೋರು. ನಮಗೆ ಮಗುವಿಲ್ಲ, ಶ್ವಾನವನ್ನೇ ಮಗು ತರ ನೋಡ್ತೀವೆಂದು ಸ್ವರ್ಣಿಮಾ ಬಳಿ ಕಥೆ ಹೇಳಿ ದತ್ತು ಪಡೆದಿದ್ರು. ಆದ್ರೆ ಯಾವಾಗ ತಮಗೆ ಮಗುವಾಯ್ತೋ ಆಗ ಈ ಶ್ವಾನವನ್ನ ಬೀದಿಗೆ ಬಿಟ್ಟಿದ್ದಾರಂತೆ. ಆ ನಾಯಿಯನ್ನ ಸಾಯಿಸಿದ್ದಾರೆ ಅನ್ನೋ ಶಂಕೆ ಸ್ವರ್ಣಿಮಾರದ್ದು. ಹೀಗಾಗಿ ಪುಟ್ಟೇನಹಳ್ಳಿ ಠಾಣೆಯಲ್ಲಿ FIR ಕೂಡ ದಾಖಲಿಸಿದ್ದಾರೆ. 

Advertisment

ಇದನ್ನೂ ಓದಿ: ಕನ್ನಡಿಗರ ಹೃದಯ ಗೆದ್ದ ದೆಹಲಿ ಹುಡುಗಿ.. ಬೆಂಗಳೂರಿಗೆ ಬಂದು 2 ತಿಂಗಳಲ್ಲಿ ಅದೆಂಥ ಬದಲಾವಣೆ..!

Dog missing (2)

ಸ್ವರ್ಣಿಮಾ ಬೋಂಗೋ ಮಿಸ್ ಆಗಿದೆ, ಹುಡುಕಿ ಕೊಟ್ಟರೆ ನಗದು ಬಹುಮಾನವಾಗಿ  ₹5 ಸಾವಿರದಿಂದ ₹25 ಸಾವಿರದವರೆಗೆ ಕೊಡೋದಾಗಿ ಪೋಸ್ಟರ್ ಹಾಕಿದ್ದಾರೆ.  JUSTICE FOR BONGO ಅಂತ ಆಗ್ರಹಿಸಿದ್ದಾರೆ. ಆದ್ರೆ ಇದುವರೆಗೂ bongo ಸತ್ತಿದ್ದಾನೋ ಬದುಕಿದ್ದಾನೋ ಅನ್ನೋ ಸುಳಿವೇ ಇಲ್ಲ.. ಏನೇ ಆಗಲಿ ಮೂಕ ಪ್ರಾಣಿಯ ಸಾಕುವ ನೆಪದಲ್ಲಿ ತಗೊಂಡು ನಂತ್ರ ಬೀದಿಗೆ ಬಿಟ್ಟಿದ್ದು ಎಷ್ಟು ಸರಿ ಹೇಳಿ? ಸಾಕಾಕೆ ಆಗಲ್ಲ ಅಂದ್ರೆ ಎಲ್ಲಿಂದ ತಂದ್ರೋ ಅಲ್ಲೇ ಕೊಡ್ಬೇಕಿತ್ತು.. ಹೀಗ್ಮಾಡಿದ್ದು ಸರೀನಾ?

ವಿಶೇಷ ವರದಿ: ಚಂದನ ಶೆಟ್ಟಿ, ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dog
Advertisment
Advertisment
Advertisment