ಪ್ರವಾಸಿಗರೇ ಜಾಗೃತೆ ಇರಲಿ! ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ಅಟ್ಯಾಕ್..!

ಪ್ರವಾಸಿಗರ ನೆಚ್ಚಿನ ತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಆತಂಕಕಾರಿ ಘಟನೆ ನಡೆದಿದೆ. ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ದಿಢೀರ್ ದಾಳಿ ನಡೆಸಿದೆ.

author-image
Ganesh Kerekuli
cheetah attack (1)
Advertisment

ಬೆಂಗಳೂರು: ಪ್ರವಾಸಿಗರ ನೆಚ್ಚಿನ ತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಆತಂಕಕಾರಿ ಘಟನೆ ನಡೆದಿದೆ. ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ದಿಢೀರ್ ದಾಳಿ ನಡೆಸಿದೆ.

ಘಟನೆಯ ವಿವರ

ಉದ್ಯಾನವನದ ಪ್ರಾಣಿ ಪಾಲಕ (Animal Keeper) ಶಾಂತಪ್ಪ (48) ಎಂಬುವವರೇ ಚಿರತೆ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿ. ಎಂದಿನಂತೆ ಪ್ರಾಣಿಗಳ ಬೋನ್ (Cage) ಸ್ವಚ್ಛಗೊಳಿಸುವ ಕಾಯಕದಲ್ಲಿ ಶಾಂತಪ್ಪ ತೊಡಗಿದ್ದರು. ನಿಯಮದಂತೆ ಸ್ವಚ್ಛತೆಗೂ ಮುನ್ನ ಚಿರತೆಯನ್ನು ಪಕ್ಕದ ಕೇಜ್‌ಗೆ ರವಾನಿಸಲಾಗಿತ್ತು.

ಇದನ್ನೂ ಓದಿ: ಶಿವರಾತ್ರಿಗೆ ಬೆಲೆ ಏರಿಕೆ ಶಾಕ್! ಬೆಂಗಳೂರಿನಲ್ಲಿ ಗಗನಕ್ಕೇರಿದ ಹೂ-ಹಣ್ಣಿನ ಬೆಲೆ..!

cheetah attack

ಆದರೆ, ಶಾಂತಪ್ಪ ಅವರು ಕೇಜ್ ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ, ಪಕ್ಕದ ಕೇಜ್‌ನಲ್ಲಿದ್ದ ಚಿರತೆ ಏಕಾಏಕಿ ರೊಚ್ಚಿಗೆದ್ದಿದೆ. ಎರಡು ಕೇಜ್‌ಗಳ ನಡುವಿನ ಕಬ್ಬಿಣದ ಮೆಷ್ (Iron Mesh) ಸಂದುಗಳಲ್ಲಿ ತನ್ನ ಉಗುರುಗಳನ್ನು ತೂರಿಸಿ ಶಾಂತಪ್ಪ ಅವರ ಮೇಲೆ ಎರಗಿದೆ.

ಕೆನ್ನೆ, ಕುತ್ತಿಗೆಗೆ ಗಾಯ

ಚಿರತೆಯು ಮೆಷ್ ಮೂಲಕವೇ ಶಾಂತಪ್ಪ ಅವರನ್ನು ಉಗುರಿನಿಂದ ಪರಚಿದೆ. ಪರಿಣಾಮ ಶಾಂತಪ್ಪ ಅವರ ಕೆನ್ನೆ ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗಳಾಗಿವೆ. ಅದೃಷ್ಟವಶಾತ್ ಕಬ್ಬಿಣದ ಮೆಷ್ ಅಡ್ಡವಿದ್ದರಿಂದ ಪಕ್ಕದ ಬೋನಿನಲ್ಲಿದ್ದರೂ, ದೊಡ್ಡ ಪ್ರಾಣಾಪಾಯ ತಪ್ಪಿದೆ. ತಕ್ಷಣವೇ ಎಚ್ಚೆತ್ತ ಇತರೆ ಸಿಬ್ಬಂದಿ ಶಾಂತಪ್ಪ ಅವರನ್ನು ರಕ್ಷಿಸಿ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

ಇದನ್ನೂ ಓದಿ:ಮ್ಯೂಸಿಕ್ ಕಂಪೋಸರ್‌ ಪಲಾಶ್ ಮುಚ್ಚಲ್ ವಿರುದ್ಧ ಮಾನ ಹಾನಿ ಹೇಳಿಕೆ ನೀಡದಂತೆ ನಿರ್ಬಂಧ- ಬಾಂಬೆ ಹೈಕೋರ್ಟ್ ನಿಂದ ನಿರ್ಬಂಧ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bannerghatta national park cheetah
Advertisment