/newsfirstlive-kannada/media/media_files/2025/08/16/leopard-safari-attack-2025-08-16-08-20-41.jpg)
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿರತೆ ಸಫಾರಿಯಲ್ಲಿ ಚಿರತೆ ಕಂಡು ಖುಷ್ ಆಗಿದ್ದ ಈ ಬಾಲಕನಿಗೆ ಅದೇ ಚಿರತೆ ಕೊನೆಗೆ ಕಣ್ಣೀರಿಡುವಂತೆ ಮಾಡಿದೆ. ಜೀಪ್ ಮೇಲೆ ಎಗರಿದ್ದ ಚಿರತೆ ಪೋಷಕರ ಜೊತೆ ಜೀಪ್ನಲ್ಲಿ ಕುಳಿತಿದ್ದ 13 ವರ್ಷದ ಬಾಲಕನ ಕೈ ಪರಚಿ ರಕ್ತ ಸುರಿಯುವಂತೆ ಮಾಡಿದೆ. ತಕ್ಷಣ ಬಾಲಕನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಸಫಾರಿ ಸಿಬ್ಬಂದಿ ಚಿಕಿತ್ಸೆ ಕೊಡಿಸಲಾಗಿದೆ.
3 ದಿನಗಳ ಹಿಂದಷ್ಟೆ ಬಂಡೀಪುರದಲ್ಲಿ ಆನೆ ಡೆಡ್ಲಿ ಅಟ್ಯಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಅಟ್ಯಾಕ್ ಒಂದು ಕಡೆಯಾದ್ರೆ ಕಳೆದ 3 ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರನ ಮೇಲೆ ಕಾಡಾನೆಯೊಂದು ಡೆಡ್ಲಿ ಅಟ್ಯಾಕ್ ಮಾಡಿದ ಘಟನೆ ನಡೆದಿತ್ತು. ಕಿರುಚಾಡಿ ಹುಚ್ಚಾಟವಾಡಿದವನ ಬೆನ್ನುಹತ್ತಿದ್ದ ಹಾನೆ ಅಟ್ಟಾಡಿಸಿ ರಸ್ತೆಯಲ್ಲೇ ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು.
ಇದನ್ನೂ ಓದಿ: ಧರ್ಮಸ್ಥಳ ಅನಾಮಿಕ ಯೂಟರ್ನ್; ಶ*ವ ಹೂತಿದ್ದು ನಾನೊಬ್ಬನೇ ಅಲ್ಲ.. ಸಂಚಲನ ಸೃಷ್ಟಿಸಿದ ಹೇಳಿಕೆ..!
ಒಟ್ನಲ್ಲಿ ಇತ್ತೀಚೆಗೆ ವನ್ಯ ಮೃಗಗಳು ಹಾಗೂ ಮಾನವನ ಮಧ್ಯೆ ಸಂಘರ್ಷ ನಡೆಯೋದು ಸಾಮಾನ್ಯ ಆಗ್ಬಿಟ್ಟಿದೆ.. ವನ್ಯ ಮೃಗಗಳ ಮುಂದೆ ನಾವೂ ಮೃಗಗಳಂತೆ ವರ್ತಿಸಿ ಅವುಗಳನ್ನ ಸಿಟ್ಟಿಗೆಬ್ಬಿಸದೇ ಸುಮ್ಮನಿದ್ರೆ ಕೊಂಚ ಇಂತಹ ಘಟನೆಗಳಗೆ ಬ್ರೇಕ್ ಬೀಳಲಿದೆ.
ಇದನ್ನೂ ಓದಿ: ದರ್ಶನ್ ಸ್ಥಿತಿ ಕಂಡು ರಮ್ಯಾ ಬೇಸರ.. ಹಳೆಯ ದಿನ ಮೆಲುಕು ಹಾಕಿ ಅಚ್ಚರಿಯ ಹೇಳಿಕೆ
Leopard attacks 13-year-old at Bannerghatta National Park in Bengaluru during a safari ride.
— Vani Mehrotra (@vani_mehrotra) August 15, 2025
The incident happened this afternoon and the minor was immediately attended to by the park staff and was then taken to a hospital. He was discharged after treatment. pic.twitter.com/Oc7rEubsNH
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ