ಲವ್.. ಸೆಕ್ಸ್.. ದೋಖಾ.. 75 ಲಕ್ಷ ಹಣ ಪೀಕಿ, ಈಗ ಲಾಕ್​..!

ಹಾಯ್​ ಹಲೋ ಅಂತ ಚಿಕ್ಕಮಕ್ಕಳಿಗೆ ಚಾಕ್​ಲೇಟ್​, ಐಸ್​ಕ್ರಿಸ್​​ ಕೊಟ್ಟು ಅಪರಿಚಿತರು ಫ್ರೆಂಡ್​ ಶಿಪ್​ ಮಾಡಿಕೊಳ್ತಿದ್ದಾರಾ? ಹಾಗಿದ್ರೆ ಬೀ ಕೇರ್​ಫುಲ್​​! ಇಲ್ಲೊಂದು ಸ್ಟೋರಿ ಈ ಲೈನ್​ನಿಂದ ಸ್ಟಾರ್ಟ್​​ ಆದ್ರೆ ಎಂಡ್​ ಆಗಿದ್ದು, ಲವ್.. ಸೆಕ್ಸ್.. ದೋಖಾ ಅನ್ನೋ ಕೇಸ್​ನಲ್ಲಿ.. ಅಷ್ಟಕ್ಕೂ ಏನಾಯ್ತು?

author-image
Ganesh Kerekuli
Love Sex Fraud
Advertisment

ಹಾಯ್​ ಹಲೋ ಅಂತ ಚಿಕ್ಕಮಕ್ಕಳಿಗೆ ಚಾಕ್​ಲೇಟ್​, ಐಸ್​ಕ್ರಿಸ್​​ ಕೊಟ್ಟು ಅಪರಿಚಿತರು ಫ್ರೆಂಡ್​ ಶಿಪ್​ ಮಾಡಿಕೊಳ್ತಿದ್ದಾರಾ? ಹಾಗಿದ್ರೆ ಬೀ ಕೇರ್​ಫುಲ್​​! ಇಲ್ಲೊಂದು ಸ್ಟೋರಿ ಈ ಲೈನ್​ನಿಂದ ಸ್ಟಾರ್ಟ್​​ ಆದ್ರೆ ಎಂಡ್​ ಆಗಿದ್ದು, ಲವ್.. ಸೆಕ್ಸ್.. ದೋಖಾ ಅನ್ನೋ ಕೇಸ್​ನಲ್ಲಿ.. ಅಷ್ಟಕ್ಕೂ ಏನಾಯ್ತು? 

ಹೆಸ್ರು ಶುಭಾಂಶು ಶುಕ್ಲ.. ವಯಸ್ಸು 27.. ನೋಡೋಕೆ ಯಾವ ಹೀರೋಗೂ ಕಮ್ಮಿ ಇಲ್ಲ.. ಆದ್ರೆ ಮಾಡಿರೋ ಕೆಲ್ಸ ಕೇಳಿದ್ರೆ, ನೀವೇ ಛೀಮಾರಿ ಹಾಕ್ತೀರಾ? ಅಪ್ರಾಪ್ತೆ ಮೂಲಕ ಆಕೆಯ ಅಕ್ಕನಿಗೆ ಪ್ರೀತಿಯ ಬಲೆ ಬೀಸಿ, ಸೆಕ್ಯುವಲ್​​ ಹರಾಸ್​​ಮೆಂಟ್​​ ಮಾಡಿ, ಯುವತಿಯಿಂದ ಬರೋಬ್ಬರಿ 75 ಲಕ್ಷ ಹಣ ಪೀಕಿ, ಈಗ ಲಾಕ್​ ಆಗ್ಬಿಟ್ಟಿದ್ದಾನೆ.

ಇದನ್ನೂ ಓದಿ:ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!

ಲವ್.. ಸೆಕ್ಸ್.. ದೋಖಾ ಆರೋಪ!

ಆರೋಪಿ ಬೆಂಗಳೂರಿನ ದಾಸರಹಳ್ಳಿಯಲ್ಲಿ ವಾಸವಿರೋ ಸಂತ್ರಸ್ತ ಯುವತಿ ಹಿಂದೆ ಬಿದ್ದಿದ್ದ.. ಅಪ್ರಾಪ್ತೆ ಮೂಲಕ ಮನೆಯವರಿಗೂ ಪರಿಚಯವೂ ಆಗಿದ್ದ. ಇದೇ ಸಲುಗೆಯಿಂದಾಗಿ ಅಪ್ರಾಪ್ತೆಯ ಅಕ್ಕನನ್ನು ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದ. ನೀನೆ ನನಗೆಲ್ಲಾ ಅಂತ ಕಲರ್ ಕಲರ್​ ಕಾಗೆ ಹಾರಿಸಿದ್ದ.. ಆದ್ರೆ ಅದುವೇ ಪರಿಶುದ್ಧ ಪ್ರೀತಿ ಅಂದ್ಕೊಂಡಿದ್ದ ಯುವತಿಗೆ ಇವನ ಗಿಮಿಕ್​ ಮಾತ್ರ ಗೊತ್ತೇ ಇರ್ಲಿಲ್ಲ. 

ಇದನ್ನೂ ಓದಿ:ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!

ಅವನನ್ನ ಕಂಪ್ಲೀಟ್​ ಆಗಿ ನಂಬಿದ್ದ ಸಂತ್ರಸ್ತೆ ಆತನ ತಾಳಕ್ಕೆ ತಕ್ಕ ಕುಣಿದಿದ್ಲು. ಖಾಸಗಿ ಫ್ಲಾಟ್​​ಗೆ ಕರೆದೊಯ್ದು ಯುವತಿಯ ಜೊತೆಗೆ ಲಿವ್ ಇನ್​ನಲ್ಲಿದ್ದ. ಯುವತಿಯ ನಂಬಿಕೆ ಗಳಿಸಿದ್ದ ಈ ಕಿಲಾಡಿ ಯುವತಿ ಬಳಿಯಿಂದ್ಲೇ 75 ಲಕ್ಷ ರೂಪಾಯಿ ಹಣ ಪಡೆದಿದ್ದ. ಆದ್ರೆ ಒಂದು ದಿನ ಇವನ ಮೊಬೈಲ್​ ಚೆಕ್​ ಮಾಡ್ದಾಗ ಈ ಕೇಡಿಗೆ ಈಗಾಗಲೇ ಮದುವೆ ಆಗಿದೆ ಅನ್ನೋ ಮಾಹಿತಿ ಗೊತ್ತಾಗಿದೆ. ಇದನ್ನ ಪ್ರಶ್ನೆ ಮಾಡಿದ್ದಾಗ ನಾನು ಅವಳಿಗೆ ಡಿವೋರ್ಸ್​​ ಕೊಡ್ತೀನಿ ಅಂತ ಅಲ್ಲೂ ಕಥೆ ಕಟ್ಟಿದ್ದ. ಯುವತಿ ಬಳಿ ಹಣ ಪಡೆದು ಪ್ರತಿನಿತ್ಯವೂ ಚಿತ್ರಹಿಂಸೆ ನೀಡ್ತಿದ್ದ.

ಶುಭಾಂಶು ಸಂತ್ರಸ್ತೆಗೆ ಚಿತ್ರಹಿಂಸೆ ಕೊಟಿದ್ನಂತೆ. ಜೊತೆಗೆ ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಕದ್ದಿರುವ ಆರೋಪ ಕೇಳಿಬಂದಿದೆ. 
ಕೇಳಿಸಿಕೊಂಡ್ರಲ್ಲಾ ಇದೇ ರೀತಿ ಹಲವು ಯುವತಿಯರ ಜೊತೆಯೂ ಈ ಕೇಡಿ ಮೋಸದಾಟ ಆಡಿದ್ದಾನಂತೆ. ಸದ್ಯ ನೊಂದ ಸಂತ್ರಸ್ತೆ ನ್ಯಾಯಕ್ಕಾಗಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು,  ಆರೋಪಿ ಶುಭಾಂಶು ಶುಕ್ಲನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸೋ ಯುವತಿಯರೇ ಪ್ರೀತಿಯ ಬಲೆಗೆ ಬೀಳೋ ಮುನ್ನ ಹುಷಾರಾಗಿರಿ.

ಇದನ್ನೂ ಓದಿ: 35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News
Advertisment