/newsfirstlive-kannada/media/media_files/2025/10/10/bengalore-mother-2025-10-10-11-26-14.jpg)
ಬೆಂಗಳೂರು: ಕಳೆದ ರಾತ್ರಿ ಭುವನೇಶ್ವರಿ ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಹಾಗೂ ತಾಯಿ ದಾರುಣ ಅಂತ್ಯ ಕಂಡಿದ್ದಾರೆ.
ಭುವನ್ (1.5), ವೃಂದಾ (4) ಹಾಗೂ ತಾಯಿ ವಿಜಲಕ್ಷ್ಮೀ ಮೃತ ದುರ್ದೈವಿಗಳು. ಇಬ್ಬರು ಮಕ್ಕಳನ್ನ ಸಾಯಿಸಿ, ತಾಯಿ ಆತ್ಮ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ವೀರೇಂದ್ರ ಪಪ್ಪಿ ಆಸ್ತಿ ಕಂಡು ಬೆಚ್ಚಿದ ED; 40 ಕೆಜಿ ಚಿನ್ನ ಸೀಜ್..!
ವಿಜಯಲಕ್ಷ್ಮಿ ಗಂಡ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಿನ್ನೆ ವಿಜಯಲಕ್ಷ್ಮಿ ತಂಗಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇವರು ಮೂಲತಃ ರಾಯಚೂರು ಜಿಲ್ಲೆಯವರು. ಸಾವಿನ ಬಗ್ಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಮಯದಲ್ಲಿ ಪತಿ ಎಲ್ಲಿದ್ದ ಅನ್ನೋದ್ರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಸಮಸ್ಯೆ ಹಿನ್ನೆಲೆ ಈ ರೀತಿ ಮಾಡಿಕೊಂಡ್ರಾ ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಘಟಾನುಘಟಿ ಸ್ಟಾರ್​ಗಳಿಗೆ RCB ಗೇಟ್​ಪಾಸ್.. ಯಾರನ್ನೆಲ್ಲ ರಿಲೀಸ್ ಮಾಡುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ