ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್​.. ಇಂಜಿನಿಯರ್ ಸೇರಿ ಇಬ್ಬರು ಅರೆಸ್ಟ್..!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್(45), ನಿತಿನ್(31) ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.

author-image
Ganesh Kerekuli
Vijayalakshami
Advertisment

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್(45), ನಿತಿನ್(31) ಬಂಧಿತ ಆರೋಪಿಗಳು. 

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ಓರ್ವ ಆಟೋ ಚಾಲಕ ಮತ್ತು ಮತ್ತೋರ್ವ ಸಾಫ್ಟ್​ವೇರ್ ಇಂಜಿನಿಯರ್. ಚಿಕ್ಕಬಾಣಾವರದ ನಿವಾಸಿ ಚಂದ್ರಶೇಖರ್ ಆಟೋ ಡ್ರೈವರ್ ಆಗಿದ್ದರೆ, ದಾವಣಗೆರೆ ಮೂಲದ ನಿತಿನ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. 

ಇದನ್ನೂ ಓದಿ:ಜನಾರ್ದನ್ ರೆಡ್ಡಿಯನ್ನ ಟಾರ್ಗೆಟ್ ಮಾಡಿ ದಾಳಿ, ಪೆಟ್ರೋಲ್ ಬಾಂಬ್ ತಂದಿದ್ದರು -ಶ್ರೀರಾಮುಲು ಆಕ್ರೋಶ

ಇಬ್ಬರು ಆರೋಪಿಗಳು ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಮ್​​ನಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಅಶ್ಲೀಲ ಮೆಸೇಜ್ ಹಾಗೂ ಪೋಸ್ಟ್ ವಿರುದ್ಧ ದರ್ಶನ್ ಪತ್ನಿ ಇತ್ತೀಚೆಗೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. 

ದೂರು ನೀಡಿ ದಿನಗಳು ಉರುಳಿದ್ದರೂ, ಪೊಲೀಸರು ಕ್ರಮ ತೆಗೆದುಕೊಳ್ತಿಲ್ಲ ಎಂದು ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಪ್ರಕರಣದ ತನಿಖೆಯನ್ನು ತುರ್ತಾಗಿ ನಡೆಸುವಂತೆ, ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದ್ದರು. 

ಇದನ್ನೂ ಓದಿ: ರೋಹಿತ್​ -ಕೊಹ್ಲಿ ಕರಿಯನ್​ನ ಕಠಿಣ ವರ್ಷ.. ಏಳು, ಬೀಳಿನ ಮಧ್ಯೆ ಸಾಧಿಸಬೇಕಾಗಿದ್ದು ಏನೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Vijayalakshmi ACTOR DARSHAN WIFE VIJAYLAXMI
Advertisment