/newsfirstlive-kannada/media/media_files/2026/02/13/hoskote-accident-4-2026-02-13-08-47-41.jpg)
ನನ್ನ ಮಗನಿಗೆ ಬೈಕ್ ಓಡಿಸಲು ಬರುತ್ತೆ ಎಂದು ಹೆಮ್ಮೆಯಿಂದ ಬೀಗುವ ಪೋಷಕರೇ, ಸ್ವಲ್ಪ ನಿಲ್ಲಿ. ಇತ್ತೀಚೆಗೆ ಹೊಸಕೋಟೆಯಲ್ಲಿ ನಡೆದ ಭೀಕರ ಅಪಘಾತವನ್ನೊಮ್ಮೆ ನೆನಪಿಸಿಕೊಳ್ಳಿ. ಬೆಂಗಳೂರಿನಲ್ಲಿ ಅಪ್ರಾಪ್ತ ವಯಸ್ಕರ (Underage Driving) ವಾಹನ ಚಾಲನೆ ಮತ್ತು ಪುಂಡಾಟಿಕೆ ಮಿತಿಮೀರಿದ್ದು, ಸಂಚಾರಿ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಪೋಷಕರ ನಿದ್ದೆಗೆಡಿಸುವಂತಿವೆ.
ಮೂರು ವರ್ಷಗಳಲ್ಲಿ ದಾಖಲೆ ಬರೆದ ಕೇಸ್‌ಗಳು
ಕಳೆದ ಮೂರು ವರ್ಷಗಳಲ್ಲಿ (2023-2025) ಬೆಂಗಳೂರಿನಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದ ಪ್ರಕರಣಗಳು ಮತ್ತು ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2023 ರಿಂದ 2025ರ ಡಿಸೆಂಬರ್ ವರೆಗೆ ಒಟ್ಟು 706 ಕೇಸ್‌ಗಳು ದಾಖಲಾಗಿವೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಹುಟ್ಟುಹಬ್ಬದಂದೇ ವಿಧಿಯ ಅಟ್ಟಹಾಸ.. ಬರ್ತ್‌ಡೇ ಪಾರ್ಟಿ ಮುಗಿಸಿ ಬರುವಾಗ ದುರಂತ ಅಂತ್ಯ
ವೀಲಿಂಗ್ ಪುಂಡಾಟಕ್ಕೆ ಬ್ರೇಕ್ ಇಲ್ಲ
ಸೋಶಿಯಲ್ ಮೀಡಿಯಾದಲ್ಲಿ 'ಲೈಕ್ಸ್' ಗಿಟ್ಟಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಟ್ಟು ವೀಲಿಂಗ್ (Wheeling) ಮಾಡುವವರ ಸಂಖ್ಯೆ ಹೆಚ್ಚಾಗಿದೆ. 2025ರ ವೇಳೆಗೆ ಅಪ್ರಾಪ್ತರ ವೀಲಿಂಗ್ ಕೇಸ್‌ಗಳಲ್ಲಿ ಬರೋಬ್ಬರಿ 70% ರಷ್ಟು ಏರಿಕೆಯಾಗಿದೆ. ಇದು ಪೋಷಕರು ಮತ್ತು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪೋಷಕರ ವಿರುದ್ಧವೂ BNS ಕೇಸ್!
ಇನ್ನು ಮುಂದೆ ಮಕ್ಕಳು ತಪ್ಪು ಮಾಡಿದರೆ ಪೋಷಕರು ಸುಮ್ಮನೆ ಇರುವಂತಿಲ್ಲ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ವಾಹನ ಕೊಟ್ಟ ಮಾಲೀಕರು ಅಥವಾ ಪೋಷಕರ ವಿರುದ್ಧವೂ ಎಫ್‌ಐಆರ್ (FIR) ದಾಖಲಿಸಲಾಗುತ್ತಿದೆ.
ಇದನ್ನೂ ಓದಿ:ಸ್ಮಶಾನದಲ್ಲಿ ಮಂಗಳ ಮುಖಿಯರ ಭಯಾನಕ ಆಚರಣೆ.. ಕಾಳಿ ಅವತಾರದಲ್ಲಿ ಪ್ರಾಣಿ ಕಚ್ವಿ ರಕ್ತ ಕುಡಿದ ಪೂಜಾರಿ
ಬೆಂಗಳೂರು ಸಂಚಾರಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ವರ್ಷದಿಂದ ವರ್ಷಕ್ಕೆ ಅಪ್ರಾಪ್ತರ ಪುಂಡಾಟಿಕೆ ಹೇಗೆ ಹೆಚ್ಚುತ್ತಿದೆ ಎಂಬ ವಿವರ ಇಲ್ಲಿದೆ:
ಅಪ್ರಾಪ್ತರ ವಾಹನ ಚಾಲನೆಗೆ ದಾಖಲಾದ ಕೇಸ್‌ಗಳು
2023: 95 ಪ್ರಕರಣಗಳು
2024: 197 ಪ್ರಕರಣಗಳು
2025: 414 ಪ್ರಕರಣಗಳು
ಅಪಾಯಕಾರಿ ಬೈಕ್ ವೀಲಿಂಗ್
2023: 242 ಪ್ರಕರಣಗಳು
2024: 532 ಪ್ರಕರಣಗಳು
2025: 646 ಪ್ರಕರಣಗಳು
ವೀಲಿಂಗ್ ಮಾಡಿ ಸಿಕ್ಕಿಬಿದ್ದ ಅಪ್ರಾಪ್ತರು
2023: 70 ಪ್ರಕರಣಗಳು
2024: 120 ಪ್ರಕರಣಗಳು
2025: 159 ಪ್ರಕರಣಗಳು
ಪೋಷಕರಿಗೆ ಪೊಲೀಸ್ ಎಚ್ಚರಿಕೆ
ಹೊಸಕೋಟೆ ಅಪಘಾತದ ನಂತರವಾದರೂ ಪೋಷಕರು ಮತ್ತು ಮಕ್ಕಳು ಎಚ್ಚೆತ್ತುಕೊಳ್ಳಬೇಕಿದೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು ಕಾನೂನು ಬಾಹಿರ ಮಾತ್ರವಲ್ಲ, ಅದು ಪ್ರಾಣಕ್ಕೆ ಕುತ್ತು ತರುವ ಕೆಲಸ. ಹೀಗಾಗಿ ಯಾವುದೇ ಕಾರಣಕ್ಕೂ ಲೈಸೆನ್ಸ್ ಇಲ್ಲದ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿನ್ನದ ದರದಲ್ಲಿ ಭಾರೀ ಇಳಿಕೆ! ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಬಂಪರ್ ಸುದ್ದಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us