/newsfirstlive-kannada/media/media_files/2025/11/23/robbery-2025-11-23-11-14-49.jpg)
ಬೆಂಗಳೂರು: ನಗರದಲ್ಲಿ ನಡೆದ 7 ಕೋಟಿ 11 ಲಕ್ಷ ಗ್ರೇಟ್ ರಾಬರಿ ಪ್ರಕರಣವು ಭಾರೀ ಸಂಚಲನ ಮೂಡಿಸಿತ್ತು. ಪ್ರಕರಣ ಭೇದಿಸಿದ ಬೆನ್ನಲ್ಲೇ ಒಂದೊಂದು ವಿಚಾರಗಳು ಹೊರಗೆ ಬರುತ್ತಿವೆ. ಅಸಲಿಗೆ ಆರೋಪಿಗಳ ಪ್ಲಾನ್ 7 ಕೋಟಿ ಆಗಿರಲಿಲ್ಲ. ಇನ್ನೂ ದೊಡ್ಡ ಪ್ರಮಾಣದಲ್ಲೇ ರಾಬರಿ ಮಾಡುವ ಯೋಜನೆಯಲ್ಲಿದ್ದರಂತೆ!
ಇನ್ನೂ ದೊಡ್ಡ ಮಟ್ಟದ ದುಡ್ಡು ರಾಬರಿ ಮಾಡೋದು ಆರೋಪಿಗಳ ಪ್ಲಾನ್ ಆಗಿತ್ತು. CMS ಏಜೆನ್ಸಿ ಇಡೀ ಭಾರತದಲ್ಲೇ ದೊಡ್ಡ ಏಜೆನ್ಸಿ. ದೇಶದಲ್ಲಿ 80 ರಷ್ಟು ಹಣ ಸಾಗಾಟ ಮಾಡುವ ಏಕೈಕ ಕಂಪನಿ ಇದು. ಜೆಪಿ ನಗರದಿಂದ ಆಗಾಗ CMS ವಾಹನ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು. 50 ಕೋಟಿ ಹಣವನ್ನ ಹಲವು ಬಾರಿ ಸಾಗಾಟ ಮಾಡಿದ್ದೂ ಇದೆ.
ಇದನ್ನೂ ಓದಿ: ‘ಆದಷ್ಟು ಬೇಗ..’ ಖರ್ಗೆಗೆ ಸಿದ್ದರಾಮಯ್ಯ ಮಾಡಿದ ಮನವಿ ಏನು?
ಜೆಪಿ ನಗರದಿಂದ ಲಿಂಗರಾಜಪುರದ ಕಚೇರಿಗೆ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು. ಲಿಂಗರಾಜಪುರದ ಕಚೇರಿಯಲ್ಲಿ ಪ್ರತಿ ನಿತ್ಯ ಹಣ ಹಂಚಿಕೆ ಆಗುತ್ತಿತ್ತು. ಯಾವ ATMಗೆ ಎಷ್ಟು ಹಣ ಹಾಕಬೇಕು ಅನ್ನೋದು ಅಲ್ಲಿಂದಲೇ ನಿರ್ಧಾರ ಆಗುತ್ತಿತ್ತು. ಆರೋಪಿಗಳು ರಾಬರಿಯಾದ ದಿನ 25 ಕೋಟಿಗೂ ಅಧಿಕ ಹಣ ಇರಬಹುದು ಎಂದು ನಿರೀಕ್ಷೆ ಮಾಡಿದ್ದರು.
ಆದ್ರೆ ವಾಹನದಲ್ಲಿ 7 ಕೋಟಿ 11 ಲಕ್ಷ ಮಾತ್ರ ಸಾಗಾಟ ಆಗುತ್ತಿತ್ತು. ಹೀಗಾಗಿ ದಿ ಗ್ರೇಟ್ ರಾಬರಿ ಮಾಡಿದರು ಆರೋಪಿಗಳಿಗೆ ನಿರಾಸೆ ಉಂಟಾಗಿತ್ತು. ಒಂದು ವೇಳೆ ಆರೋಪಿಗಳ ನಿರೀಕ್ಷೆಯಂತೆ ಹಣ ಇದ್ದಿದ್ರೆ ಭಾರತದಲ್ಲೇ ದೊಡ್ಡ ರಾಬರಿ ಕೇಸ್ ಆಗುತ್ತಿತ್ತು.
ಇದನ್ನೂ ಓದಿ: ಗ್ರೀನ್ ಹಾರ್ಟ್‌ಫುಲ್‌ನೆಸ್ ರನ್: ಬೆಂಗಳೂರಲ್ಲಿ ಒಂದು ವಿಶೇಷ ಜಾಗೃತಿ ಕಾರ್ಯಕ್ರಮ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us