/newsfirstlive-kannada/media/media_files/2025/11/21/7-crore-robbery-3-2025-11-21-12-39-39.jpg)
ಬೆಂಗಳೂರಲ್ಲಿ ನಡೆದ 7 ಕೋಟಿ ರಾಬರಿ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಆಗ್ತಿದೆ. ಪ್ರಸ್ತುತ ಪೊಲೀಸರು ಕೇಸ್​ನ ರಹಸ್ಯವನ್ನು ಬಯಲು ಮಾಡಿದ್ದು, ತನಿಖೆ ಪ್ರಗತಿಯಲ್ಲಿದೆ. ಅಚ್ಚರಿ ಸಂಗತಿ ಏನೆಂದರೆ.. ರಾಬರಿಗೆ ಮಾಸ್ಟರ್ ಪ್ಲಾನ್ ಮಾಡಿರೋದು ಓರ್ವ ಪೊಲೀಸ್ ಅಧಿಕಾರಿ! ಗೋವಿಂದಪುರ ಠಾಣೆ ಕಾನ್ಸ್​ಟೇಬಲ್​​ ಅಣ್ಣಪ್ಪ ನಾಯ್ಕ್, ಮಾಸ್ಟರ್ ಮೈಂಡ್ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹೇಗೆ ಸಿಕ್ಕಿಬಿದ್ದ ಅಣ್ಣಪ್ಪ..?
ಪ್ರಕರಣದ ಬೆನ್ನತ್ತಿ ಹೋಗಿದ್ದ ಅಧಿಕಾರಿಗಳಿಗೆ ಈ ಅಣ್ಣಪ್ಪ ನಾಯ್ಕ್ ಹೇಗೆ ಸಿಕ್ಕಿಬಿದ್ದ ಅನ್ನೋದೇ ಇಂಟ್ರೆಸ್ಟಿಂಗ್ ವಿಚಾರ. ಇಲ್ಲಿ ಕಾನ್ಸ್​​ಟೇಬಲ್​​ ಅಣ್ಣಪ್ಪನ ಅತಿಯಾದ ಬುದ್ಧಿವಂತಿಕೆ, ಅತಿಯಾದ ವಿನಯತೆಯೇ ಮುಳ್ಳಾಗಿದೆ.
ಇದನ್ನೂ ಓದಿ:ಅಶ್ವಿನಿ ಗೌಡ, ರಘು, ಗಿಲ್ಲಿ, ಅಭಿಷೇಕ್! ಕಿಚ್ಚನ ಕ್ಲಾಸ್ ಯಾರಿಗೆ..?
/filters:format(webp)/newsfirstlive-kannada/media/media_files/2025/11/21/7-crore-robbery-2-2025-11-21-12-36-16.jpg)
ಘಟನೆ ನಡೆದ ದಿನ ಬಹುತೇಕ ದಕ್ಷಿಣ ಹಾಗೂ ಪೂರ್ವ ವಿಭಾಗದಲ್ಲಿ ನಾಕಾ ಬಂಧಿ ಹಾಕಲಾಗಿತ್ತು. ಪ್ರತಿಯೊಂದು ವಾಹನವೂ ಪರಿಶೀಲನೆ ನಡೆಸಲಾಗ್ತಿತ್ತು. ಈ ವೇಳೆ ಅಣ್ಣಪ್ಪ ಎಂಟ್ರಿ ಕೊಟ್ಟಿದ್ದ. ಈತ ಹಿಂದೆ ಬಾಣಸವಾಡಿಯಲ್ಲಿ ಕ್ರೈಂ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅದೇ ಸಲುಗೆ ಮೇರೆಗೆ ನಾಕಾಬಂಧಿ ಹಾಕಿದ್ದ ಸ್ಥಳಕ್ಕೆ ಭೇಟಿ ಕೊಟ್ಟಿದ್ದ.
ಅಲ್ಲಿದ್ದ ಹೆಡ್ ಕಾನ್ಸ್​ಟೇಬಲ್​​ ಬಳಿ ರಾಬರಿ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದ್ದ. ಅಣ್ಣ ಗಾಡಿ ಸಿಕ್ತಾ? ಎಂದಿದ್ದ. ಫೊಟೋ ತೋರಿಸಿ ಈ ಗಾಡಿ ಫೊಟೋ ವೈರಲ್ ಆಗ್ತಿದೆ ನಿಜನಾ ಎಂದು ಕೇಳಿದ್ದ. ವೈರ್​ಲೆಸ್ ಮೆಸೇಜ್​ಗಳನ್ನೂ ಅಬ್ಸರ್ವ್ ಮಾಡಿದ್ದ. ಆಗ ಹೆಡ್​ ಕಾನ್ಸ್​ಟೇಬಲ್, ನೀನು ಪಕ್ಕದ ಸ್ಟೇಷನ್, ಇಲ್ಲಿಗ್ಯಾಕೆ ಬಂದಿದ್ಯಾ ಎಂದು ಪ್ರಶ್ನೆ ಮಾಡಿದ್ದರು.
/filters:format(webp)/newsfirstlive-kannada/media/media_files/2025/11/20/bengaluru-robbery-2025-11-20-11-21-58.jpg)
ಈತನ ಹಿನ್ನೆಲೆ ಬಾಣಸ್ವಾಡಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮೊದಲೇ ತಿಳಿದಿತ್ತು. ಈ ಹಿಂದೆ ಅದೇ ಠಾಣೆಯ ಸಿಬ್ಬಂದಿಯ ಅನೇಕ ಅನುಮಾನಗಳಿಗೆ ಕಾರಣನಾಗಿದ್ದ. ಹೀಗಾಗಿ ಹಣದಾಸೆಗೆ ಅಣ್ಣಪ್ಪನೇ ಮಾಡಿರಲೂಬಹುದು ಎಂಬ ಅನುಮಾನ ಬಂದಿದೆ. ತಕ್ಷಣ ಗೋವಿಂದರಾಜನಗರ ಪೊಲೀಸ್ ಠಾಣೆಯ ಶಿಫ್ಟ್ ಆಫೀಸರ್​ಗೆ ವಿಚಾರ ಮುಟ್ಟಿಸಿದ್ದರು. ಈ ವೇಳೆ ಆತ ಬೀಟ್ ಇರಲಿ, ಡ್ಯೂಟಿಯಲ್ಲೇ ಇಲ್ಲ ಎಂಬ ಮಾಹಿತಿ ಸಿಗುತ್ತದೆ. ಇದರಿಂದ ಅಣ್ಣಪ್ಪನ ಮೇಲೆ ಮತ್ತಷ್ಟು ಅನುಮಾನ ಮೂಡುತ್ತದೆ.
ಕೊನೆಗೆ ಈತನ ಚಲನವಲನಗಳನ್ನ ಸ್ಥಳೀಯ ಪೊಲೀಸರು ಅಬ್ಸರ್ವ್ ಮಾಡುತ್ತಾರೆ. ಈತನ ಅಸ್ವಾಭಾವಿಕ ನಡವಳಿಕೆಯಿಂದಾಗಿ ಅನುಮಾನಗೊಂಡ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸತತ ವಿಚಾರಣೆ ಬಳಿಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಸುಳಿವೇ ಸಿಗದೆ ಪರದಾಡುತ್ತಿದ್ದ ಪೊಲೀಸರಿಗೆ ಸುಳಿವೇ ಕಾಲು ಬುಡಕ್ಕೆ ಸಿಕ್ಕಿತ್ತು. ಸದ್ಯ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us