/newsfirstlive-kannada/media/media_files/2025/08/14/darshan-4-2025-08-14-12-30-51.jpg)
ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೆ ಜೈಲಿನ ಪಂಜರ ಸೇರಿರುವ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ಅನ್ನೋ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕಿಲ್ಲ. ದರ್ಶನ್ರನ್ನು ಬಳ್ಳಾರಿಗೆ ಶಿಪ್ಟ್ ಮಾಡದಂತೆ ವಕೀಲರು ಪ್ರಬಲ ವಾದ ಮಂಡಿಸಿದ್ದು.. ಸೆಪ್ಟೆಂಬರ್ 9 ರಂದು ದರ್ಶನ್ ಬಳ್ಳಾರಿ ಜೈಲ್ ಭವಿಷ್ಯ ನಿರ್ಧಾರವಾಗಲಿದೆ.
ಬಳ್ಳಾರಿಗೆ ಶಿಫ್ಟ್ ಆಗುತ್ತಾರಾ?
ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಸದ್ಯ ಪರಪ್ಪನ ಆಗ್ರಹಾರದಲ್ಲಿರುವ ಸ್ಯಾಂಡಲ್ವುಡ್ ದಾಸನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ದರ್ಶನ್ ಪರಪ್ಪನ ಅಗ್ರಗಾರದಲ್ಲೇ ಇರ್ತಾರಾ.. ಅಥವಾ ಬಳ್ಳಾರಿ ಜೈಲಿಗೆ ಶಿಪ್ಟ್ ಆಗ್ತಾರಾ ಅನ್ನೋದು ಸದ್ಯ ಯಕ್ಷ ಪ್ರಶ್ನೆ ಆಗಿದ್ದು, ದರ್ಶನ್ ಬಳ್ಳಾರಿ ಜೈಲ್ ಭವಿಷ್ಯ.. ಮುಂದಿನ ಮಂಗಳವಾರ ನಿರ್ಧಾರವಾಗಲಿದೆ.
ಇದನ್ನೂ ಓದಿ:ಮತ್ತೆ SIT ಕಸ್ಟಡಿಗೆ ಚೆನ್ನಯ್ಯ.. ಇವತ್ತು ಕೋರ್ಟ್ನಲ್ಲಿ ಏನಾಯ್ತು..?
ನಟ ದರ್ಶನ್ನನ್ನು ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡುವಂತೆ ನಿನ್ನೆ ಇಡೀ ದಿನ ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ರೆ.. ದರ್ಶನ್ ಪರ ವಕೀಲರಾದ ಚೌಟಾ ಶಿಫ್ಟ್ ಮಾಡದಂತೆ ಮನವಿ ಮಾಡಿದ್ರು.. ಇವತ್ತು ಕೂಡ ಈ ಅರ್ಜಿ ವಿಚಾರಣೆ ನಡೀತು.. ಇವತ್ತು ದರ್ಶನ್ ಪರ ವಕೀಲರಾದ ಸುನಿಲ್.. ತಮ್ಮ ವಾದ ಮಂಡಿಸಿದ್ರು.
ಸುನಿಲ್, ದರ್ಶನ್ ಪರ ವಕೀಲ
ಮೈ ಲಾರ್ಡ್ ದರ್ಶನ್ ಸೆಲೆಬ್ರೆಟಿಯಾಗಿರೋದ್ರಿಂದ ಮಿಸ್ಯೂಸ್ ಹಾಗೂ ಕೋರ್ಟ್ನ ಮಿಸ್ಲೀಡ್ ಮಾಡ್ತಿದ್ದಾರೆ. ಭದ್ರತೆ ಮತ್ತು ಆಡಳಿತ ದೃಷ್ಟಿಯಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಉಲ್ಲೇಖಿಸಿದ್ದಾರೆ. ಅದೂ ಜೈಲು ಸೇರಿ ಎರಡೇ ದಿನಗಳಲ್ಲಿ.. ಶಿಸ್ತು ಕ್ರಮ ಮತ್ತು ಆಡಳಿತ ಭದ್ರತೆ ನೆಪದಲ್ಲಿ ಜೈಲಾಧಿಕಾರಿಗಳು ಆಶ್ರಯ ಪಡೆಯುತ್ತಿದ್ದಾರೆ. ಜೈಲೊಳಗೆ ಸಿಗರೇಟ್ ಹೇಗೆ ಬಂತು? ಚೇರ್ ಹೇಗೆ ಬಂತು? ಇವರೇ ಎಲ್ಲಾ ಒಳಗೆ ಬಿಡ್ತಾರೆ. ಈಗ ಶಿಫ್ಟ್ ನಾಟಕವಾಡ್ತಿದ್ದಾರೆ. ಜೈಲಾಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಈ ರೀತಿ ಮಾಡ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಬಹುದು, ಹಾಜರುಪಡಿಸಬಹುದು ಎಂದು ಎಸ್ಪಿಪಿ ಹೇಳ್ತಾರೆ. ಆದ್ರೆ ಕೇಸ್ನ ಟ್ರಯಲ್ ಬೆಂಗಳೂರಿನಲ್ಲಿ ನಡೆಯುತ್ತೆ.. ಬಳ್ಳಾರಿಯಲ್ಲಿ ಅಲ್ಲ. ಟ್ರಯಲ್ ವೇಳೆ ಎಲ್ಲಾ ಆರೋಪಿಗಳನ್ನ ಹಾಜರುಪಡಿಸಬೇಕು. ಆ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಕ್ರಾಸ್ ಎಕ್ಸಾಮಿನೇಷನ್ ಆಗುತ್ತೆ. ನಾವು ಸಾಕಷ್ಟು ವಿಚಾರಗಳನ್ನ ಕ್ರಾಸ್ ಮಾಡ್ತೇವೆ. ಆಗ ಎರಡು ನಿಮಿಷವಿರಿ ಸ್ವಾಮಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಳ್ತೀವಿ ಅನ್ನೋಕೆ ಆಗುತ್ತಾ? ಇದು ಪ್ರಾಕ್ಟಿಕಲಿ ಆಗೋ ಕೆಲಸ ಅಲ್ಲ. ಟ್ರಯಲ್ನಲ್ಲಿ ನಾವು ನೇರವಾಗಿ ಹಾಜರುಪಡಿಸಿದ್ರೆ ಅದು ಸರಿಯಾಗುತ್ತೆ. ಆದ್ರೆ ಇಲ್ಲಿ ಉದ್ದೇಶ ಪೂರ್ವಕವಾಗಿ ನಡೀತಿವೆ. ಹೀಗಾಗಿ ದರ್ಶನ್ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬಾರದು ಮೈ ಲಾರ್ಡ್.
ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ದರ್ಶನ್ ಪರ ವಕೀಲರ ವಾದವನ್ನು ಆಲಿಸಿದ 64ನೇ ಸಿಸಿಹೆಚ್ ನ್ಯಾಯಾಲಯ, ಸೆಪ್ಟಂಬರ್ 9ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲೇ ಇರ್ತಾರಾ.. ಅಥವಾ ಬಳ್ಳಾರಿಗೆ ಜೈಲಿಗೆ ಶಿಫ್ಟ್ ಆಗ್ತಾರಾ ಅನ್ನೋದು ಸೆಪ್ಟೆಂಬರ್ 9 ರಂದು ಗೊತ್ತಾಗಲಿದೆ, ಅಲ್ಲಿವರೆಗೂ ದರ್ಶನ್ ಪರಪ್ಪನ ಪಂಜರದಲ್ಲೇ ಇರಲಿದ್ದಾರೆ.
ಇದನ್ನೂ ಓದಿ:ರಾಜ್ಯ ಸರ್ಕಾರದಲ್ಲಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್, ಖಾಯಂ ನೇಮಕಾತಿಗೆ ಕ್ರಮ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ