/newsfirstlive-kannada/media/media_files/2026/01/13/husband-and-wife-1-2026-01-13-08-54-12.jpg)
ಬೆಂಗಳೂರು: ಪ್ರೇಯಸಿಯೊಂದಿಗೆ ಮಂಚದಲ್ಲಿದ್ದಾಗಲೇ ಪತಿರಾಯನನ್ನು ಪತ್ನಿ ರೆಡ್​ಹ್ಯಾಂಡ್​ ಆಗಿ ಲಾಕ್ ಮಾಡಿದ್ದಾಳೆ. ಜೆಡ್ರೆಲಾ ಜಾಕೂಬ್ ಆರೂಪ್ ಸಿಕ್ಕಿಬಿದ್ದ ಪತಿ.
ಏನಿದು ಕತೆ..?
ಜೆಡ್ರೆಲಾ ಜಾಕೂಬ್ ಆರೂಪ್​​, ಬೆಂಗಳೂರಿನ ಟೆಕ್ಕಿ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಜೊತೆ ವಾಸವಿದ್ದ. ಈತನ ಪತ್ನಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಆರೋಪಿಗೆ ಕೆಲಸ ಇರಲಿಲ್ಲ. ಹೀಗಾಗಿ ಪತ್ನಿ, ತನ್ನ ಕೆಲಸವನ್ನೇ ಪತಿಗೆ ಕೊಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ತನ್ನ ಕೆಲಸವನ್ನ ಪತಿಗೆ ಕೊಡಿಸಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಮುಂದಿನ ತಿಂಗಳು ಮತ್ತೆ ನಮ್ಮ ಮೆಟ್ರೋ ದರ ಏರಿಕೆ ಸಾಧ್ಯತೆ! ಶೇ.5 ರಷ್ಟು ದರ ಏರಿಕೆ ಸಾಧ್ಯತೆ
/filters:format(webp)/newsfirstlive-kannada/media/media_files/2026/01/13/husband-and-wife-3-2026-01-13-08-54-26.jpg)
ಆರೋಪ ಏನು?
ಇಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಮಗು ಇದೆ. ಮಗು ಬಳಿಕ ಆರೋಪಿ ತನ್ನ ಅಸಲಿ ಮುಖವಾಡವನ್ನ ಪತ್ನಿಗೆ ತೋರಿಸಿದ್ದಾನಂತೆ. ಮತ್ತೊಮ್ಮೆ ಆಕೆ ಗರ್ಭ ಧರಿಸಿದ್ದಳು. ಈ ವೇಳೆ ಆಕೆಯ ಜಾತಿಯನ್ನ ನಿಂದಿಸಿ, ಹಲ್ಲೆ ಮಾಡಿ ಗರ್ಭಪಾತ ಆಗುವಂತೆ ಮಾಡಿದ್ದ ಎಂಬ ಆರೋಪ ಇದೆ.
/filters:format(webp)/newsfirstlive-kannada/media/media_files/2026/01/13/husband-and-wife-2026-01-13-08-54-39.jpg)
ಈ ನಡುವೆ ಪತ್ನಿಗೆ ಮೋಸ ಮಾಡಿ ಪರಸ್ತ್ರಿ ಜೊತೆ ಸಂಘ ಬೆಳೆಸಿದ್ದ. ಈ ಎಲ್ಲ ಬೆಳವಣಿಗೆಯಿಂದ ನೊಂದಿದ್ದ ಸಂತ್ರಸ್ತೆ ಆಂಧ್ರಕ್ಕೆ ಹೋಗಿದ್ದಳು. ನಿನ್ನೆ ಬೆಂಗಳೂರಿಗೆ ದಿಢೀರ್ ಬಂದು, ಗಂಡ ಪರಸ್ತ್ರಿ ಜೊತೆ ಚಕ್ಕಂದ ಆಡ್ತಿದ್ದಾಗ ಆತನನ್ನು ಲಾಕ್ ಮಾಡಿದ್ದಾರೆ.
ಸಂತ್ರಸ್ತೆ ಹೇಳಿದ್ದೇನು..?
ನನ್ನ ಹೆಸರು.. ನಾನು ಆಂಧ್ರ ಮೂಲದವಳು. ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದೇನೆ. ನನ್ನ ಪತಿ ಬೇರೊಂದು ಹುಡುಗಿ ಜೊತೆ ಅಕ್ರಮ ಸಂಬಂಧ ಹೊಂದಿರೋ ವಿಚಾರ ತಿಳಿದು ಇಲ್ಲಿಗೆ ಬಂದಿದ್ದೇನೆ. ಅವರಿಬ್ಬರು ಒಂದೇ ಪಿಜಿಯಲ್ಲಿರೋದು ತಿಳಿಯಿತು. ವಿಚಾರ ಗೊತ್ತಾಗಿ ಪೊಲೀಸರ ಸಹಾಯ ಪಡೆದೆ. ಮೊದಲು ಅಧಿಕಾರಿಗಳಿಗೆ ಬೇಕಾಗಿದ್ದ ಸಾಕ್ಷ್ಯಗಳನ್ನ ನೀಡಿದೆ. ನಂತರ ಪೊಲೀಸರೊಂದಿಗೆ ಪಿಜಿಗೆ ಎಂಟ್ರಿ ನೀಡಿದೇವು. ಅಲ್ಲಿ ಅವರಿಬ್ಬರೂ ಒಂದೇ ರೂಮಿನಲ್ಲಿ ಒಟ್ಟಿಗೆ ಇದ್ದರು ಎಂದು ಕಣ್ಣೀರು ಇಟ್ಟಿದ್ದಾಳೆ.
ಪ್ರಸ್ತುತ ಸಿಕ್ಕಿಬಿದ್ದ ಪತಿರಾಯನನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ವಿರುದ್ಧ ಪತ್ನಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದು, ವಿಚಾರಣೆ ನಡೆಸ್ತಿದ್ದಾರೆ. ಬೆಂಗಳೂರು ಡಿಸಿಆರ್ ಇ ಪಶ್ಚಿಮ ವಿಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us