ಜಿಬಿಎನಲ್ಲಿ ಮಹತ್ವದ ಬೆಳವಣಿಗೆ.. ವಾರ್ಡ್‌ಗಳಗೆ ಮೀಸಲಾತಿಗಾಗಿ 12 ಗೈಡ್​ಲೈನ್ಸ್..!

ಗ್ರೇಟರ್​ ಬೆಂಗಳೂರು ಪಾಲಿಕೆಗೆ ಚುನಾವಣೆ ಆಗುತ್ತಾ? ಆಗುತ್ತೋ ಆಗೊಲ್ವೋ ಗೊತ್ತಿಲ್ಲ. ಅದಕ್ಕೆ ಬೇಕಾದ ತಯಾರಿಗಳಂತೂ ನಡೀತಿದೆ. ಯಾವಾಗ ಚುನಾವಣೆ ನಡೆಯುತ್ತೆ ಅನ್ನೋದೂ ಗೊತ್ತಿಲ್ಲ. ವಿವಿಧ ವಾರ್ಡ್​​ ಮೀಸಲಾತಿಗೆ ಬೇಕಾದ ಮಾರ್ಗಸೂಚಿಯಂತೂ ಬಿಡುಗಡೆಯಾಗಿದೆ.

author-image
Ganesh Kerekuli
GBA
Advertisment

ಗ್ರೇಟರ್​ ಬೆಂಗಳೂರು ಪಾಲಿಕೆಗೆ ಚುನಾವಣೆ ಆಗುತ್ತಾ? ಆಗುತ್ತೋ ಆಗೊಲ್ವೋ ಗೊತ್ತಿಲ್ಲ. ಅದಕ್ಕೆ ಬೇಕಾದ ತಯಾರಿಗಳಂತೂ ನಡೀತಿದೆ. ಯಾವಾಗ ಚುನಾವಣೆ ನಡೆಯುತ್ತೆ ಅನ್ನೋದೂ ಗೊತ್ತಿಲ್ಲ. ವಿವಿಧ ವಾರ್ಡ್​​ ಮೀಸಲಾತಿಗೆ ಬೇಕಾದ ಮಾರ್ಗಸೂಚಿಯಂತೂ ಬಿಡುಗಡೆಯಾಗಿದೆ. 

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯೋ ಸಾಧ್ಯತೆ ದಟ್ಟವಾಗಿ ಕಾಣ್ತಿದೆ.‌ ಈಗಾಗಲೇ ಬಿಬಿಎಂಪಿ ಹೆಸರು ಬದಲಿಸಿ, ಐದು ನಗರ ಪಾಲಿಕೆ ರಚಿಸಿ, ಪ್ರತಿ ಪಾಲಿಕೆಗೂ ವಾರ್ಡ್ ಗಳ ವಿಂಗಡಣೆಯೂ ಮಾಡಾಗಿದೆ. ಮುಂದುವರೆದ ಭಾಗವಾಗಿ ಈಗ ವಾರ್ಡ್ ಗಳ ಮೀಸಲಾತಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. 

ಇದನ್ನೂ ಓದಿ: ವಿಶ್ವಕಪ್​​ಗೆ ತಂಡ ಪ್ರಕಟ.. ಯಾರಿಗೆ ಏನು ಜವಾಬ್ದಾರಿ..?

GBA (1)

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ– 2024 ರಂತೆ ರಚನೆಯಾಗಿರುವ ಐದು ನಗರ ಪಾಲಿಕೆಗಳ ವಾರ್ಡ್‌ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಇದರ ಬೆನ್ನಲ್ಲೇ ಈಗ ಐದು ನಗರ ಪಾಲಿಕೆಗಳ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲು 12 ಮಾರ್ಗಸೂಚಿಗಳನ್ನು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಆ ಮಾರ್ಗಸೂಚಿಯಲ್ಲಿರೋದೇನಂದ್ರೆ..

ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಕೇಕ್ ಕೊಂಡೊಯ್ತಿದ್ದ ಅಪ್ಪ ಹಠಾತ್ ನಿಧನ.. ಕಣ್ಣೀರಿಟ್ಟ ಶಾಸಕ ಟೆಂಗಿನಕಾಯಿ

bengaluru city (3)

ಮೀಸಲಾತಿಗೆ ಮಾರ್ಗಸೂಚಿ!

  • 2011ರ ಜನ ಸಂಖ್ಯೆಯನ್ನು ಆಧರಿಸಿ ಮೀಸಲಾತಿ ನಿಗದಿ ಮಾಡಬೇಕು
  • 369 ವಾರ್ಡ್ ಗಳ ಪೈಕಿ  1/3 ಭಾಗ OBC ಸಮುದಾಯಕ್ಕೆ ಮೀಸಲು
  • ಅನುಸೂಚಿತ ಜಾತಿ, ಪಂಗಡ, OBC ಮೀಸಲಾತಿ 50% ಮೀರುವಂತಿಲ್ಲ
  • 50% ಮೀರಿದರೆ ಆಯಾ ಜಾತಿಗೆ ಅನುಗುಣವಾಗಿ ಮೀಸಲು ಸ್ಥಾನ ಇಳಿಕೆ 
  • ಮೀಸಲಾತಿ ಪೈಕಿ ಶೇಕಡಾ 50ರಷ್ಟು ಸೀಟು ಮಹಿಳೆಯರಿಗೆ ಮೀಸಲಿಡಬೇಕು
  • ಮೀಸಲಾತಿ ಇಲ್ಲದ ಸ್ಥಾನಗಳಲ್ಲೂ 50% ಸ್ಥಾನ ಮಹಿಳೆಯರಿಗೇ ಮಿಸಲು
  • 50ರಷ್ಟು ವಾರ್ಡ್​​ಗಳೂ ಮಹಿಳೆಯರಿಗೆ ಮೀಸಲು ಮಾಡುವಂತೆ ಸೂಚನೆ

ಮೀಸಲಾತಿ ಮಾರ್ಗಸೂಚಿಯೇನೋ ಬಿಡುಗಡೆಯಾಗಿದೆ. ಆದ್ರೆ ಚುನಾವಣೆ ಡೇಟ್​ ಇನ್ನೂ ಫೈನಲ್​ ಆಗಿಲ್ಲ. ಆದಷ್ಟು ಬೇಗ ಚುನಾವಣೆ ಆಗಲಿ, ಸ್ಥಳೀಯರ ಸಮಸ್ಯೆ ಕೇಳೋಕೆ ಕಾರ್ಪೋರೇಟರ್​ಗಳು ಬರಲಿ ಅಂತ ಬೆಂಗಳೂರು ಮಂದಿ ಆಶಿಸ್ತಿದ್ದಾರೆ. 

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ರಿಲೀಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

GBA GBA Election
Advertisment