/newsfirstlive-kannada/media/media_files/2025/12/26/staff-nurse-2025-12-26-15-33-58.jpg)
ಪ್ರೀತಿಸಿದ ತಪ್ಪಿಗೆ ಮದುವೆ ಆಗುವಂತೆ ಕೇಳಿಕೊಂಡಿದ್ದಕ್ಕೆ ಪ್ರಿಯತಮೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆ.ಎಸ್.ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಮತ ಕೊಲೆಯಾದ ನರ್ಸ್​.
ಚಿತ್ರದುರ್ಗದ ಹಿರಿಯೂರು ಮೂಲದ ಮಮತ ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಿದ್ರು. ಇದೇ ಆಸ್ಪತ್ರೆಯಲ್ಲಿ ಆರೋಪಿ ಸುಧಾಕರ್​ ಕೂಡ ಕೆಲಸ ಮಾಡ್ತಾಯಿದ್ದ. ಹೀಗಾಗಿ ಇಬ್ಬರ ನಡುವೆ ಸ್ನೇಹ ಸಲುಗೆ ಹುಟ್ಟಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿ ಕೂಡ ಮಾಡ್ತಾಯಿದ್ರು.
ಇದನ್ನೂ ಓದಿ: 6 ಸೆಟ್ ಒಡವೆ, ಇನ್ನೋವಾ ಕಾರ್ ವರದಕ್ಷಿಣೆಗಾಗಿ ಬೇಡಿಕೆ : ಮದುವೆಯಾದ ಒಂದೇ ತಿಂಗಳಿಗೆ ನವ ವಧು ಆತ್ಮಹ*ತ್ಯೆ
ನೀನೇ ಜೀವ ನೀನೇ ಪ್ರಾಣ ಅಂತಿದ್ದ ಪ್ರಿಯಕರ ಸುಧಾಕರನೇ ಚಾಕುವಿನಿಂದ ಕತ್ತು ಸೀಳಿ ಮಮತಾಳನ್ನ ಭೀಕರವಾಗಿ ಕೊಲೆ ಮಾಡಿದ್ದಾನೆ. ಮಮತ ಹಾಗೂ ಅಕೆಯ ಸ್ನೇಹಿತೆ ಒಟ್ಟಿಗೆ ವಾಸವಾಗಿದ್ರು. ಮಮತ ಸ್ನೇಹಿತೆ ನಿನ್ನೆ ಊರಿಗೆ ಹೋಗಿದ್ದೇ ತಡ ಮನೆಯಲ್ಲಿ ಒಂಟಿಯಾಗಿದ್ದ ಮಮತಾ ಮೇಲೆ ಕ್ರೂರಿ ಎಗರಿ ಕೊಲೆ ಮಾಡಿದ್ದಾನೆ.
ಪ್ರೀತಿ ಕೊಂದ ಕೊಲೆಗಾರ
ಮದುವೆ ಮಾಡಿಕೊಳ್ಳಲು ಆರೋಪಿ ಸುಧಾಕರ್ ಮೊದಲಿನಿಂದಲೂ​ ನಿರಾಕರಿಸುತ್ತಲೇ ಇದ್ದ. ಅದಕ್ಕೆ 2 ಬಲವಾದ ಕಾರಣ ಏನು ಅಂದ್ರೆ, ಇಬ್ಬರ ನಡುವಿನಲ್ಲಿ ಇದ್ದ ವಯಸ್ಸಿನ ಅಂತರ. ಮಮತಾಗೆ 39 ವರ್ಷ ಆಗಿದ್ರೆ ಕೊಲೆ ಆರೋಪಿ ಸುಧಾಕರ್​ಗೆ 26 ವರ್ಷ ಆಗಿತ್ತು. ಇತ್ತೀಚೆಗೆ ಬೇರೆಯೊಂದು ಯುವತಿ ಜೊತೆ ಸುಧಾಕರ್​ಗೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಇದೇ ಕಾರಣಕ್ಕೆ ಮದುವೆ ಮಾಡಿಕೊಳ್ಳುವಂತೆ ಪ್ರೀಯಕರ ಸುಧಾಕರ್​ಗೆ ಮಮತಾ ದುಂಬಾಲು ಬಿದ್ದಿದ್ಲು. ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿ ತನ್ನ ಜೊತೆ ವಿವಾಹ ಆಗುವಂತೆ ಮಮತಾ ಒತ್ತಡ ಹಾಕ್ತಿದ್ಲು. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋದಾಗ ನಿನ್ನೆ ರಾತ್ರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಏನೂ ಆಗದವನಂತೆ ಇದ್ದ. ಅಲ್ಲದೇ, ಸುದ್ದಿ ಕೇಳಿ ಮನೆ ಬಳಿ ಬಂದಿದ್ದ ಜಯದೇವ ಆಸ್ಪತ್ರೆ ಸಿಬ್ಬಂದಿ ಜೊತೆಗೆ ಆತನೂ ಬಂದಿದ್ದ. ಶಾಕಿಂಗ್​ ಅಂದ್ರೆ, ಮೃತದೇಹ ಶಿಫ್ಟ್ ಆಗುವವರೆಗೂ ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ. ಕೊನೆಗೆ ಮಮತಾ ಸಿಡಿಆರ್ ಪರಿಶೀಲಿಸಿದಾಗ ಸುಧಾಕರೇ ಹಂತಕ ಅನ್ನೋದು ಗೊತ್ತಾಗಿದೆ. ಇವತ್ತು ಬೆಳಗ್ಗೆ ಕೆ.ಎಸ್.ಲೇಔಟ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us