/newsfirstlive-kannada/media/media_files/2025/08/26/bbmp-auto-2025-08-26-20-59-41.jpg)
ಸಾವಿಲ್ಲದ ಮನೆಯಿಂದ ಸಾಸಿವೆ ತರೋದಕ್ಕೆ ಹೇಗೆ ಅಸಾಧ್ಯವೋ ಹಾಗೇ ಸಿಲಿಕಾನ್​ ಸಿಟಿಯಲ್ಲಿ ಕಸ ಇಲ್ಲದ ಏರಿಯಾಗಳನ್ನ ಹುಡುಕೋದು ಕೂಡ ಅಸಾಧ್ಯ. ಉದ್ಯಾನನಗರಿಯನ್ನ ಚೆಂದವಾಗಿಸಲು ಜಿಬಿಎ ಟೊಂಕ ಕಟ್ಟಿ ನಿಂತಿದ್ದು, ಇದೀಗ ನಿಮ್ಮ ಮನೆ ಮುಂದೆ ಕಸ ಅಭಿಯಾನದ ಬಳಿಕ 1 ಸಾವಿರ ಸೆಗ್ರಿಗೇಶನ್ ಡಸ್ಟ್​ ಬಿನ್ ಗಳನ್ನು ಅಳವಡಿಸುವತ್ತ ದಾಪುಗಾಲಿಟ್ಟಿದೆ.
ಇದನ್ನೂ ಓದಿ: ತನ್ನ ಅನೈತಿಕ ಚೆಲ್ಲಾಟಕ್ಕಾಗಿ ಮಲಗಿದ್ದಲ್ಲೇ ಗಂಡನ ಮುಗಿಸಿದ ಕಿಲಾಡಿ ಲೇಡಿ!
ಸಿಲಿಕಾನ್​ ಸಿಟಿಯ ಅಂದ ಹಾಳು ಮಾಡುವ ಜನರಿಗೆ ದಂಡಾಸ್ತ್ರ ಪ್ರಯೋಗಿಸಿದ್ದು ಆಯ್ತು. ಮನೆ ಮುಂದೆ ಕಸ ತಂದು ಸುರಿಯೋ ಅಭಿಯಾನವೂ ಬಂತು. ಇದಕ್ಕೆ ಜನಸಾಮಾನ್ಯರು ಕಸದ ಗಾಡಿ ಬರೋದಿಲ್ಲಾ ರೀ ಅಂತ ಗೂಭೆ ಕುರಿಸಿದ್ದು ಆಯ್ತು. ಆದ್ರೀಗ, ನಗರದ ಅಂದ ನಾವು ಕಾಪಾಡೇ ಕಾಪಾಡ್ತೀವಿ ಅಂತ ಶಪತಗೈದ ಜಿಬಿಎ, ಸ್ಟೀಲ್ ಡಸ್ಟ್​ ಬಿನ್​ಗಳ ಮೊರೆ ಹೋಗಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ದಿತ್ವಾ ಸೈಕ್ಲೋನ್ ಅಬ್ಬರ, 56 ಮಂದಿ ಸಾವು : ದಕ್ಷಿಣ ಭಾರತದ ಮೇಲೂ ಸೈಕ್ಲೋನ್ ನಿಂದ ಭಾರಿ ಮಳೆ ಮುನ್ಸೂಚನೆ
/filters:format(webp)/newsfirstlive-kannada/media/media_files/2025/11/28/steel-dustbin-2025-11-28-16-19-41.jpg)
ಏನಿದು ಸ್ಟೀಲ್ ಡಸ್ಟ್​ ಬಿನ್ ಪ್ರಯೋಗ?​
1000 ಸೆಗ್ರಿಗೇಶನ್ ಡಸ್ಟ್​​ ಬಿನ್​ಗಳನ್ನು ಅಳವಡಿಸಲು ಜಿಬಿಎ ಪ್ಲಾನ್​ ಮಾಡಿಕೊಂಡಿದೆ. ಈ ಮೂಲಕ ನಗರದಾದ್ಯಂತ ತ್ಯಾಜ್ಯ ವಿಂಗಡಣೆಯ ಸ್ಟೀಲ್ ಡಸ್ಟ್​ ಬಿನ್​ಗಳು ಇನ್ನು ಮುಂದೆ ಚಾಲ್ತಿಗೆ ಬರಲಿವೆ. ನಗರದ ಜನನಿಬಿಡ ಪ್ರದೇಶಗಳಲ್ಲಿ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಪ್ರಾರಂಭದ ಹಂತದಲ್ಲಿ ಈ ಪ್ರಯೋಗಕ್ಕೆ ಜಿಬಿಎ ಪ್ಲಾನ್​ ಮಾಡಿದೆ. SP ರಸ್ತೆ, ಕಾಟನ್‌ಪೇಟ್, MG ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಹೆಚ್ಚಿನ ಜನಸಂದಣಿ ಪ್ರದೇಶಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ. CSR ಫಂಡ್ ನಡಿ 1 ಸಾವಿರ ಸ್ಟೀಲ್​ ಡಸ್ಟ್​ ಬಿನ್​ಗಳ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೆಲದ ಮೇಲಿನ ತ್ಯಾಜ್ಯ ವಿಂಗಡಣೆಯನ್ನು ಸುಧಾರಿಸುವ ಉದ್ದೇಶ ಇದರದ್ದಾಗಿದ್ದು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಈ ಕಾರ್ಯ ನಡೆಯಲಿದೆ. ಹಸಿ ಕಸ ಮತ್ತು ಒಣ ಕಸಕ್ಕೆ ಪ್ರತ್ಯೇಕ ಸ್ಟೀಲ್​ ಡಸ್ಟ್​ ಬಿನ್​ಗಳ ಅಳವಡಿಕೆ ಮಾಡಲಾಗುತ್ತದೆ.
ಒಟ್ನಲ್ಲಿ ನಗರಕ್ಕೆ ಕಂಟಕವಾಗಿರುವ ಕಸದಿಂದ ರಸ ತೆಗೆಯೋದಕ್ಕೆ BSWML ಮುಂದಾಗಿದ್ದು, ವಾಣಿಜ್ಯ ಸಂಸ್ಥೆಗಳಿಂದ ಇಷ್ಟು ದಿನಗಳಿಂದ ಆಗ್ತಾಯಿದ್ದ ಕಳಪೆ ವಿಂಗಡಣೆ ಇನ್ನಾದ್ರೂ ನಿಲ್ಲುತ್ತಾ.. ನಗರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸುಧಾರಿಸುತ್ತಾ ಕಾದು ನೋಡಬೇಕಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us