/newsfirstlive-kannada/media/media_files/2025/11/28/bengaluru-horor-story-2025-11-28-15-48-05.jpg)
ಮದ್ವೆ ಆಗೋದು ಒಬ್ಬರನ್ನ. ಆಮೇಲೆ ಇನ್ನೊಬ್ಬರ ಜೊತೆ ಸಂಬಂಧ ಇಟ್ಕೊಳ್ಳೋದು. ಇಲ್ಲಿ ಗಂಡನಿಗೆ ಹೆಂಡತಿ ಬೇಕು, ಹೆಂಡತಿಗೆ ಗಂಡ ಬೇಕು. ಜೊತೆಗೆ ಗುಟ್ಟಾಗಿ ಇನ್ನೊಂದು ಸಂಬಂಧವೂ ಬೇಕು ಅನ್ನೋದು ಇತ್ತೀಚೆಗಿನ ಕ್ರೈಂ ಟ್ರೆಂಡ್​ ಆಗಿದೆ. ಅದಕ್ಕೆ ವಿರೋಧ ಬಂದಾಗ ಹೆಂಡತಿ ಗಂಡನ ಮುಗಿಸೋದು, ಗಂಡ ಹೆಂಡತಿಯನ್ನ ಸಾ*ಸೋದು ತುಂಬಾನೇ ಕಾಮನ್ ಆಗಿದೆ. ಪರಿಣಾಮ ರಾತ್ರಿ ಗಂಡ, ಹೆಂಡತಿಯನ್ನ ನಂಬಿ ಹಾಯಾಗಿ ಮಲ್ಗಂಗಿಲ್ಲ. ಹೆಂಡತಿ ಗಂಡನ ನಂಬಿ ನಿದ್ದೆ ಮಾಡಂಗಿಲ್ಲ. ಯಾವ ಕಲ್ಲು ಯಾರ ಎದೆ ಮೇಲೆ ಬೀಳುತ್ತೆ ಎಂದು ಹೇಳೋದೇ ಕಷ್ಟ!
ಇದಕ್ಕೆ ತಾಜಾ ಉದಹಾರಣೆ ಎಂಬಂತೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಂತಹುದೇ ಒಂದು ಪ್ರಕರಣ ನಡೆದಿದೆ. ಅಷ್ಟಕ್ಕೂ ಅಲ್ಲಿ ಏನಾಗಿತ್ತು ಎಂದು ನೋಡೋದಾದ್ರೆ ಠಾಣೆ ಪೊಲೀಸರಿಗೆ ಗಂಗೊಂಡಗಳ್ಳಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಶವ ಬಿದ್ದಿರೋ ವಿಚಾರ ತಿಳಿಯುತ್ತೆ. ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲಿಸಿದಾಗ ಅರ್ಧಂಬರ್ಧ ಸುಟ್ಟ ಮೃತದೇಹ ಅದಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕೇಸ್​ನ ರಹಸ್ಯವನ್ನು ಭೇದಿಸಿದ್ದಾರೆ.
ಏನಿದು ಪ್ರಕರಣ..?
ಬಸವರಾಜ್ (29) ಕೊ*ಯಾದ ವ್ಯಕ್ತಿ. ಯಾದಗಿರಿ ಮೂಲದ ಈ ಬಸವರಾಜುಗೆ ನಾಲ್ಕು ವರ್ಷಗಳ ಹಿಂದೆ ಶರಣಮ್ಮ (25) ಎಂಬ ಮಹಿಳೆ ಜೊತೆ ಮದುವೆ ಆಗಿತ್ತು. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಈ ಜೋಡಿ, ತಿಗಳರಪಾಳ್ಯದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿತ್ತು.
ಇದನ್ನೂ ಓದಿ: ಅದೊಂದು ಸ್ಥಾನಕ್ಕಾಗಿ 8 ಮಂದಿಗೆ ಅದೃಷ್ಟ ಪರೀಕ್ಷೆ ನಡೆಸಲಾಗಿತ್ತು.. ಒಬ್ಬರೂ ಪಾಸ್ ಆಗಲಿಲ್ಲ..!
ಅಂತೆಯೇ ಶರಣಮ್ಮ ಹಾಗೂ ಬಸವರಾಜು ಗಾರೆ ಕೆಲಸ ಮಾಡಿಕೊಂಡಿದ್ದರು. ಈ ಜೋಡಿ ಓರ್ವ ಮೇಸ್ತ್ರಿ ಜೊತೆ ಕೆಲಸ ಮಾಡುತ್ತಿತ್ತು. ಈ ಮೇಸ್ತ್ರಿಗೆ ವೀರಭದ್ರ ಎಂಬ ಮಗನಿದ್ದ. ಈ ವೀರಭದ್ರ ತಂದೆಯ ಕೆಲಸಕ್ಕೆ ಅನುಕೂಲ ಆಗಲಿ ಎಂದು ಕೆಲಸಗಾರರನ್ನ ಬಿಲ್ಡಿಂಗ್ ಬಳಿ ಕರೆದುಕೊಂಡು ಹೋಗೋದು, ಕೆಲಸ ಮುಗಿದ ಬಳಿಕ ಮನೆಗೆ ಕರೆದುಕೊಂಡು ಹೋಗಿ ಬಿಡೋದು ಮಾಡುತ್ತಿದ್ದ. ಈ ಮಧ್ಯೆ ಶರಣಮ್ಮ ಹಾಗೂ ವೀರಭದ್ರ ನಡುವೆ ಸಲುಗೆ ಬೆಳೆದು, ಸಂಬಂಧಕ್ಕೆ ತಿರುಗಿದೆ. ಸಂಬಂಧ ಒಬ್ಬರನ್ನೊಬ್ಬರು ಬಿಟ್ಟಿರಲಾರಷ್ಟು ಗಟ್ಟಿಯಾಗಿದೆ.
ಅಡ್ಡಿಯಾಗಿದ್ದ ಗಂಡನ ಕೊಲೆಗೆ ಪ್ಲಾನ್!
ಅಕ್ರಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದ್ದಂತೆಯೇ, ಶರಣಮ್ಮ ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಳೆ. ಕಳೆದ ಒಂದು ತಿಂಗಳ ಹಿಂದೆ ಇಬ್ಬರು ಕೂತು ಹೇಗೆ ಮುಗಿಸೋದು ಎಂದು ಯೋಜನೆ ರೂಪಿಸಿದ್ದಾರೆ. ಅದರಂತೆ ಕಳೆದ ಶುಕ್ರವಾರ ಮನೆಯಲ್ಲಿ ಮದ್ಯಪಾನ ಮಾಡಿ ಬಸವರಾಜು ಮಲಗಿದ್ದ. ಈ ವೇಳೆ ಶರಣಮ್ಮ ವೀರಭದ್ರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ.
ಇದನ್ನೂ ಓದಿ:ಅಮೆರಿಕಾಕ್ಕೆ ಮೂರನೇ ಜಗತ್ತಿನ ರಾಷ್ಟ್ರಗಳ ನಾಗರಿಕರಿಗೆ ಎಂಟ್ರಿ ಬಂದ್ : ಶ್ವೇತ ಭವನದ ಬಳಿ ಶೂಟೌಟ್ ಎಫೆಕ್ಟ್
/filters:format(webp)/newsfirstlive-kannada/media/media_files/2025/11/28/bengaluru-hororr-2025-11-28-15-49-50.jpg)
ತಲೆ ಮೇಲೆ ಕಲ್ಲು ಎತ್ತಿಹಾಕಿ ಹಾಕಿದ್ದಾರೆ. ಜೀವ ಹೋಗಿರಲಿಲ್ಲ. ಅದಕ್ಕೆ ನೇಣು ಬಿಗಿದು ಜೀವ ತೆಗೆದಿದ್ದಾರೆ. ಕೊನೆಗೆ ಮೃತದೇಹ ಶಿಫ್ಟ್ ಮಾಡಲು ಅನಿಲ್ (19) ಎಂಬಾತನ ಸಹಾಯ ಪಡೆದಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿರುವುದನ್ನ ಗಮನಿಸಿ ಮೃತದೇಹ ಶಿಫ್ಟ್ ಮಾಡಿದ್ದಾರೆ. ಮನೆಯಲ್ಲಿದ್ದ ಹಳೆ ಬಟ್ಟೆಗಳಲ್ಲಿ ಸುತ್ತಿ ಮೃತದೇಹವನ್ನು ಚೀಲದಲ್ಲಿ ಹಾಕಿಕೊಂಡು ಹೊರಟಿದ್ದಾರೆ.
ಒಂದು ಲೀಟರ್ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿದ್ದರು. ಅನುಮಾನಗೊಂಡು ತನಿಖೆಗೆ ಇಳಿದಿದ್ದ ಪೊಲೀಸರು, ಅಪರಿಚಿತ ಮೃತದೇಹದ ಸತ್ಯವನ್ನು ಬಯಲು ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ. ಶರಣಮ್ಮ, ವೀರಭದ್ರ ಹಾಗೂ ಸಹಾಯ ಮಾಡಿದ ಅನಿಲ್​ನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us