/newsfirstlive-kannada/media/media_files/2025/10/30/lung-2025-10-30-16-21-17.jpg)
ಬೆಂಗಳೂರು: ಕೇವಲ ಕೆಲವೇ ದಿನಗಳ ಹಿಂದೆ 12 ತಾಸಿನಲ್ಲಿ ಮೂರು ಹೃದಯ ಕಸಿ ಮಾಡಿ ದಾಖಲೆ ನಿರ್ಮಿಸಿದ್ದ ನಗರದ ಪ್ರತಿಷ್ಠಿತ ನಾರಾಯಣ ಹೆಲ್ತ್ ಆಸ್ಪತ್ರೆಯು, ಮತ್ತೊಂದು ವಿಶೇಷ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಗುರುವಾರ ಬೆಳಿಗ್ಗೆ, ನಾರಾಯಣ ಹೆಲ್ತ್ ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನ ಜಂಟಿ ಸಹಯೋಗದಲ್ಲಿ, ದಾನಿಯೊಬ್ಬರ ಶ್ವಾಸಕೋಶವು ನಗರದ ಯಶವಂತಪುರದಿಂದ ನಾರಾಯಣ ಹೆಲ್ತ್‌ಸಿಟಿಗೆ (ಸುಮಾರು 30-33 ಕಿ.ಮೀ.) ಕೇವಲ 61 ನಿಮಿಷಗಳಲ್ಲಿ ತಲುಪಿದೆ.
ಯಶವಂತಪುರದ ಆಸ್ಪತ್ರೆಯೊಂದರಲ್ಲಿ ದಾನಿಯಿಂದ ಪಡೆದ ಶ್ವಾಸಕೋಶವನ್ನು ಗೊರಗುಂಟೆಪಾಳ್ಯದ ಮೆಟ್ರೋ ನಿಲ್ದಾಣಕ್ಕೆ ರವಾನಿಸಲಾಯಿತು. ಸಾಮಾನ್ಯವಾಗಿ ಯಶವಂತಪುರ ನಿಲ್ದಾಣವು ಜನನಿಬಿಡವಾಗಿರುವ ಕಾರಣ, ವೈದ್ಯಕೀಯ ತಂಡವು ಅಂಗವನ್ನು ಅಲ್ಲಿಂದ ತೆಗೆದುಕೊಂಡು ಹೊರಟಿತು.
ಶ್ವಾಸಕೋಶದೊಂದಿಗೆ ತೆರಳಿದ ವೈದ್ಯಕೀಯ ತಂಡವು ಅಲ್ಲಿಂದ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣ ತಲುಪಿತು. ತದನಂತರ ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರದತ್ತ ಪ್ರಯಾಣಿಸಿ, ಅಂತಿಮವಾಗಿ ನಾರಾಯಣ ಹೆಲ್ತ್‌ಸಿಟಿಯನ್ನು ಯಶಸ್ವಿಯಾಗಿ ತಲುಪಿತು.
ಸಂಚಾರ ದಟ್ಟಣೆಯ ಸಮಯದಲ್ಲಿಯೂ ದಾನಿಯ ಪ್ರಮುಖ ಅಂಗವನ್ನು ಆಸ್ಪತ್ರೆಗೆ ತ್ವರಿತವಾಗಿ ತಲುಪಿಸಲು ಸಹಕರಿಸಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL)ನ ಸಹಾಯ ಮತ್ತು ಸಹಕಾರವನ್ನು ನಾರಾಯಣ ಹೆಲ್ತ್ ಆಸ್ಪತ್ರೆಯು ಸ್ಮರಿಸಿದೆ ಹಾಗೂ ಅವರಿಗೆ ತನ್ನ ಆಳವಾದ ಧನ್ಯವಾದಗಳನ್ನು ಸಲ್ಲಿಸಿದೆ.
ಇದನ್ನೂ ಓದಿ: ಪತಿಯನ್ನೇ ಮುಗಿಸಲು ಪತ್ನಿ ಸ್ಕೆಚ್.. ಪಕ್ಕಾ ಸಿನಿಮೀಯ ಶೈಲಿಯಲ್ಲಿ ಪ್ಲಾನ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us