Advertisment

ಓಂ ಸಿನಿಮಾ ಮೀರಿಸುವಂತಿದೆ ರಂಗನ ಲವ್​ ಸ್ಟೋರಿ.. ಮದ್ವೆ ನಿರಾಕರಿಸಿದ್ಕೆ ಪ್ರಿಯತಮೆಯ ಕಿಡ್ನ್ಯಾಪ್

ಸಿಲಿಕಾನ್​ ಸಿಟಿಯಲ್ಲಿ ಸಿನಿಮಾ ಸ್ಟೈಲ್​ನಲ್ಲಿ ಯುವತಿಯ ಕಿಡ್ಯಾಪ್​ ಆಗಿದೆ. ಮದುವೆಯಾಗು ಅಂತ ಹಿಂದೆ ಬಿದ್ದಿದ್ದ ಪಾಗಲ್​​ ಪ್ರೇಮಿಯೊಬ್ಬ ಯುವತಿ ಒಪ್ಪದಿದ್ದಕ್ಕೆ ಆಕೆಯನ್ನೇ ಕಿಡ್ನಾಪ್​ ಮಾಡಿದ್ದು, ಯುವತಿಯನ್ನ ಕಿಡ್ನ್ಯಾಪ್​ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ಪೊಲೀಸರು ಯುವತಿಯನ್ನ ರಕ್ಷಿಸಿದ್ದಾರೆ.

author-image
Ganesh Kerekuli
Love story
Advertisment

ಸಿಲಿಕಾನ್​ ಸಿಟಿಯಲ್ಲಿ ಸಿನಿಮಾ ಸ್ಟೈಲ್​ನಲ್ಲಿ ಯುವತಿಯ ಕಿಡ್ಯಾಪ್​ ಆಗಿದೆ. ಮದುವೆಯಾಗು ಅಂತ ಹಿಂದೆ ಬಿದ್ದಿದ್ದ ಪಾಗಲ್​​ ಪ್ರೇಮಿಯೊಬ್ಬ ಯುವತಿ ಒಪ್ಪದಿದ್ದಕ್ಕೆ ಆಕೆಯನ್ನೇ ಕಿಡ್ನಾಪ್​ ಮಾಡಿದ್ದು, ಯುವತಿಯನ್ನ ಕಿಡ್ನ್ಯಾಪ್​ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ಪೊಲೀಸರು ಯುವತಿಯನ್ನ ರಕ್ಷಿಸಿದ್ದಾರೆ.
ಓಂ ಸಿನಿಮಾ ರೇಂಜ್​ಗೆ ಒಂದು ಕಿಡ್ನಾಪ್ ಕೇಸ್ ಬೆಳಕಿಗೆ ಬಂದಿದೆ. ಚಿತ್ರದಲ್ಲಿ ಹಿರೋಯಿನ್​ ಲವ್​​ ಮಾಡಲು ನಿರಾಕರಿಸಿದ್ದಕ್ಕೆ, ಹೀರೋ ಆಕೆಗೆ ಕೊಡಬಾರದ ಕಷ್ಟ ಕೊಡ್ತಿರ್ತಿತ್ತಾನೆ. ಅದೇ ರೀತಿ ಈಗ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. 

Advertisment

ರಂಗನ ಲವ್​ ಸ್ಟೋರಿ..

ಸ್ಟೋರಿಯ ಕಥನಾಯಕನ ಹೆಸರು ಮೆಕ್ಯಾನಿಕ್​ ರಂಗ. ವಯಸ್ಸು ಇನ್ನೂ 23 ಅಷ್ಟೇ, ಇದು ಆತನ ಪಟಲಾಂ​.. ಸದ್ಯ ಈ ಗ್ಯಾಂಗ್​ ಅಂದರ್​ ಆಗಿದೆ. ಇನ್ಸ್​​ಟಾಗ್ರಾಂ ಮೂಲಕ ಮೆಕ್ಯಾನಿಕ್​ ರಂಗ ಮತ್ತು ಯುವತಿಗೆ ಪರಿಚರವಾಗಿತ್ತು, ಬಳಿಕ ಪರಿಚಯ ಪ್ರೀತಿಗೆ ತಿರುಗಿ ಯುವತಿಗೆ ರಂಗ ಪ್ರಪೋಸ್​ ಮಾಡಿದ್ದನು, ಕೆಲ ದಿನಗಳ‌ ಬಳಿಕ ಮೆಕ್ಯಾನಿಕ್​ ರಂಗನ ಲವ್​ಗೆ ಯುವತಿ ಓಕೆ ಅಂದಿದ್ದಳು, ಟೂ ವೇ ಲವ್​ನಲ್ಲಿ ಡ್ಯೂಯೆಟ್ ಹಾಡ್ತಿದ್ದ ಮೆಕ್ಯಾನಿಕ್​ ರಂಗ ಫ್ರೆಂಡ್​ಗಾಗಿ ಮಚ್ಚು ಬೀಸಿದ್ದ, ಸ್ನೇಹಿತ ಚೇತನ್​ಗಾಗಿ ಭದ್ರನ ಕೊಲೆ ಮಾಡಿ ಜೈಲು ಸೇರಿದ್ದನು, ರಂಗ ಜೈಲು ಸೇರ್ತಿದ್ದಂತೆ ಯುವತಿ ರಂಗನ ಮೊಬೈಲ್ ನಂಬರ್​​ ಬ್ಲಾಕ್ ಮಾಡಿದ್ದಳು.

ಇದನ್ನೂ ಓದಿ: ಬಿಗ್​​​ಬಾಸ್​​​ ಶೋಗೆ ಎದುರಾದ ಕಂಟಕದ ಬಗ್ಗೆ ಮಾತು.. ಕಿಚ್ಚ ಏನೆಲ್ಲ ಹೇಳಿದರು..?

ಜೈಲಿನಿಂದ ಬೇಲ್​ ಮೇಲೆ  ಹೊರ ಬಂದ ರಂಗ ಯುವತಿಯನ್ನ ಫಾಲೋ ಮಾಡಿ ಟಾರ್ಚರ್ ಕೊಡಲು ಶುರುಮಾಡಿದ್ದನು, ಅಲ್ಲದೇ ಯುವತಿ ಮನೆಗೂ ತೆರಳಿ ಲವ್ ಸ್ಟೋರಿ ಕೂಡ ಹೇಳಿದ್ದನು, ಯುವತಿ ಮನೆಯವರು ಮೆಕ್ಯಾನಿಕ್​ ರಂಗನ ಪ್ರೀತಿಯನ್ನ ತಿರಸ್ಕರಿಸಿದ್ದರು, ಈ ವೇಳೆ ಯುವತಿ ಹಾಗೂ ಕುಟುಂಬಸ್ಥರಿಗೆ ಅವಾಜ್ ಹಾಕಿ ಬಂದಿದ್ದ ರಂಗ, ಬಳಿಕ ಬಿಟ್ರೆ ಆಗಲ್ಲ ಎಂದು ಯುವತಿಯನ್ನ ಕಿಡ್ನಾಪ್ ಮಾಡಿ ಮದುವೆ ಆಗೋಕೆ ಪ್ಲಾನ್ ಮಾಡಿದ್ದ, ಸಹಚರರಾದ ರಾಜೇಶ್ ಚಂದನ್ ಶ್ರೇಯಸ್ ಮಂಜನ ಜೊತೆ ಸೇರಿ ಕಿಡ್ನಾಪ್​ಗೆ ಪ್ಲಾನ್ ಮಾಡಿ ಕಳೆದ  ಅ.08 ರಂದು ತನ್ನ ಸಹಚರರ ಜೊತೆ ಲವರ್​​ ಮನೆಗೆ ನುಗ್ಗಿ ಬಾ ಮದುವೆ ಆಗೋಣ ಅಂತ ಹೇಳಿದ್ದಾನೆ. ಇದಕ್ಕೆ ಯುವತಿ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಾಯಿಯ ಮೇಲೆ ರಂಗ ಹಲ್ಲೆ ಮಾಡಿದ್ದ, ಮಚ್ಚಿನೇಟಿಗೆ ಪ್ರಿಯತಮೆಯ ತಾಯಿ ಗಂಭೀರವಾಗಿ ಗಾಯಗೊಂಡಿದ್ರೂ, ಯುವತಿಯ ಕುತ್ತಿಗೆಗೆ ಚಾಕು ಇಟ್ಟು, ಕಿಡ್ನ್ಯಾಪ್​ ಮಾಡಿ, ನಡುರಸ್ತೆಯಲ್ಲೆ ಲಾಂಗ್ ತೋರಿಸುತ್ತಾ ಆಟೋ, ಬೈಕ್​ಗಳಲ್ಲಿ ಎಸ್ಕೇಪ್ ಆಗಿದ್ದರು.

Advertisment

ಸಂಜೆ ಐದಕ್ಕೆ ಕಿಡ್ನ್ಯಾಪ್​​, ಬೆಳಗ್ಗೆ ಅರೆಸ್ಟ್

ಘಟನೆ ನಡೆದ ಕೂಡಲೇ ಯುವತಿ ತಾಯಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ರು, ಮೆಕ್ಯಾನಿಕ್​​ ರಂಗ ಮತ್ತು ಟೀಂ ವಿರುದ್ಧ ಕಿಡ್ನಾಪ್ ಮಾಡಿದ್ದಾರೆಂದು ದೂರು ದಾಖಲಿಸಿದ್ರು, ಕೂಡಲೇ ಆಕ್ಟೀವ್ ಆದ ಪೊಲೀಸರು ಮೆಕಾನಿಕಲ್ ರಂಗನ ಬೆನ್ನುಬಿದ್ದಿದ್ರು, ಮೊದಲೇ ಪ್ರೀ ಪ್ಲಾನ್ ಮಾಡಿಬಂದಿದ್ದ ರಂಗನ ಟೀಂ ಮೊಬೈಲ್ ಬಳಸಿರಲಿಲ್ಲ, ಕಿಡ್ನಾಪ್ ನಂತರ ಬೇರೆ ನಂಬರ್​ಗೆ ರಂಗ ತನ್ನ ತಾಯಿಯಿಂದ 5 ಸಾವಿರ ಪೋನ್ ಪೇ ಮಾಡಿಸಿಕೊಂಡಿದ್ದ, ಈ ವೇಳೆ ರಂಗ ತಾಯಿ ಜೊತೆ ಕಾಂಟಾಕ್ಟ್​​ನಲ್ಲಿರೊದು ಪೊಲೀಸರಿಗೆ ಗೊತ್ತಾಗಿತ್ತು, ಇಡೀ ರಾತ್ರಿ 2 ಬಾರಿ ಆಟೋಗೆ ಗ್ಯಾಸ್ ಫಿಲ್ ಮಾಡಿಸಿಕೊಂಡು ಸುತ್ತಾಡಿದ್ದ ರಂಗ, ಆಟೋದಲ್ಲಿ ಪ್ರಿಯತಮೆ ಕುತ್ತಿಗೆಗೆ ಚಾಕು ಇಟ್ಟಿ ಅರಿಶಿಣದ ದಾರ ಕಟ್ಟಿದ್ದ, ರಂಗ ಅರಿಶಿಣದ ದಾರ ಕಟ್ಟೊವೇಳೆ ಯುವತಿ ಪ್ರತಿರೋಧ ತೋರಿದ್ದಳು, ಅಷ್ಟರಲ್ಲೇ ರಂಗನ CDR ಹಾಕಿದ್ದ ಪೊಲೀಸರು ರೌಂಡಪ್ ಮಾಡಿದ್ದರು. 

ಅಕ್ಟೋಬರ್ 9ರ ಬೆಳಗ್ಗೆ 5 ಗಂಟೆಗೆ ಸುಮಾರಿಗೆ ಪೊಲೀಸರು ಹೊಸೂರು ರಸ್ತೆ ಬಳಿ ರಂಗ & ಟೀಂನ ಲಾಕ್​ ಮಾಡಿ ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ, ಸಿನಿಮಾ ರೇಂಜ್​ನಲ್ಲಿ ಯುವತಿಯನ್ನ ಕಿಡ್ನಾಪ್​ ಮಾಡಿ ಟಾರ್ಚರ್​​ ಕೊಟ್ಟಿದ್ದ ಮೆಕ್ಯಾನಿಕ್​ ರಂಗ ಮತ್ತು ಆತನ ಗ್ಯಾಂಗ್​​ನ ಜೈಲು ಸೇರಿದ್ದು, ಪೊಲೀಸರು ಇಂತಹ ವಿಷ ಜಂತುಗಳನ್ನ ಹಡೆಮುರಿ ಕಟ್ಟಿ ಜನ ಸಮಾನ್ಯರ ರಕ್ಷಣೆಗೆ ಮುಂದಾಗಬೇಕಿದೆ.

ಇದನ್ನೂ ಓದಿ: ಫಾಲೋ ಆನ್ ಭೀತಿಯಲ್ಲಿ ವಿಂಡೀಸ್​.. ಗೆಲುವಿನತ್ತ ಟೀಂ ಇಂಡಿಯಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Love Bengaluru News
Advertisment
Advertisment
Advertisment