Advertisment

ಜೈಲು ಸಿಬ್ಬಂದಿ ಮೇಲೆ ದರ್ಶನ್ ಸಾಲು ಸಾಲು ಆರೋಪ, ಇವತ್ತು ಮಹತ್ವದ ಬೆಳವಣಿಗೆ

ಹಾಸಿಗೆ ದಿಂಬು ವಿಚಾರಕ್ಕೆ ಮತ್ತೆ ಮತ್ತೆ ಕೋರ್ಟ್ ಮೊರೆ ಹೋಗ್ತಿರುವ ದರ್ಶನ್​, ಸಲ್ಲಿಸಿರುವ ಅರ್ಜಿಯ ವಿಚಾರಣೆ ಇವತ್ತು ನಡೆಯಲಿದೆ. ಜೈಲಾಧಿಕಾರಿಗಳ ವಿರುದ್ಧ ಆರೋಪಿಸಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ.

author-image
Ganesh Kerekuli
Darshan (6)

ಆರೋಪಿ ದರ್ಶನ್

Advertisment

ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ (Renukaswamy case) ಮತ್ತೆ ದರ್ಶನ್ ಜೈಲು ಸೇರಿದ್ದಾರೆ. ಕಳೆದ ಬಾರಿ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದ ಆರೋಪಿ, ಈ ಬಾರಿ ಪರಪ್ಪನ ಅಗ್ರಹಾರದಲ್ಲೇ ಮುದ್ದೆ ಮುರಿಯುತ್ತಿದ್ದಾರೆ. ಈ ನಡುವೆ ದರ್ಶನ್ ಜೈಲು ಸಿಬ್ಬಂದಿ ಮೇಲೆ ಸಾಲು ಸಾಲು ಆರೋಪ ಮಾಡಿದ್ದಾರೆ. 

Advertisment

ಹಾಸಿಗೆ ದಿಂಬು ವಿಚಾರಕ್ಕೆ ಮತ್ತೆ ಮತ್ತೆ ಕೋರ್ಟ್ ಮೊರೆ ಹೋಗ್ತಿರುವ ದರ್ಶನ್​, ಸಲ್ಲಿಸಿರುವ ಅರ್ಜಿಯ ವಿಚಾರಣೆ ಇವತ್ತು ನಡೆಯಲಿದೆ. ಜೈಲಾಧಿಕಾರಿಗಳ ವಿರುದ್ಧ ಆರೋಪಿಸಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್​ಗೆ ನೇರವಾಗಿ ಹಾಜರಾಗಲು ಜೈಲು ಸೂಪರಿಂಟೆಂಡೆಂಟ್​ಗೆ ಸೂಚಿಸಲಾಗಿತ್ತು. 

ಇದನ್ನೂ ಓದಿ:ಮತ್ತೆ ಭರ್ಜರಿ ಗಿಫ್ಟ್ ಕೊಟ್ಟ ಬಿಸಿಸಿಐ.. ಹ್ಯಾಟ್ರಿಕ್ ಟ್ರೋಫಿ ಹೊಡೆದ ತಂಡಕ್ಕೆ ಸಿಕ್ಕಿದ್ದು ಒಟ್ಟು 204 ಕೋಟಿ..!

ನನಗೆ ನಡೆದಾಡೋಕು ಸರಿಯಾದ ವ್ಯವಸ್ಥೆ ಇಲ್ಲ. ಒಂದು ತಿಂಗಳಿನಿಂದ ಅದೇ ಬ್ಯಾರೆಕ್​ನಲ್ಲಿ ಇಟ್ಟಿದ್ದಾರೆ. ನಿಯಮ ಮೀರಿ ಕ್ವಾರಂಟೈನ್ ಬ್ಯಾರೆಕ್​ನಲ್ಲಿ ಇಡಲಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್​ ಮೂಲ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಇಂದು ಕೊರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ಆದೇಶ ಹೊರ ಬೀಳುವ ಸಾಧ್ಯತೆ ಇದೆ. ದರ್ಶನ್ ಬೇರೆ ಬ್ಯಾರೆಕ್​ಗೆ ಶಿಫ್ಟ್ ಬಗ್ಗೆ ಆದೇಶ ಸಾಧ್ಯತೆ ಇದೆ. ಸದ್ಯ ಕ್ವಾರಂಟೈನ್ ಬ್ಯಾರೆಕ್​ನಲ್ಲಿ ದರ್ಶನ್ ಮತ್ತು ಅವರ ತಂಡ ಇದೆ.

Advertisment

ಇದನ್ನೂ ಓದಿ: ಎಕ್ಸೈಟಿಂಗ್ ನ್ಯೂಸ್​ ಕೊಟ್ಟ ಬಿಗ್​ಬಾಸ್​.. 2 ಫಿನಾಲೆ! ವಿನ್ನರ್​​ ಬಗ್ಗೆ ತಿಳಿಯಲು 100 ದಿನ ಕಾಯೋದು ಬೇಡ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan darshan devil film Cash stolen at darshan wife vijaylakshmi flat Darshan in jail
Advertisment
Advertisment
Advertisment