/newsfirstlive-kannada/media/media_files/2025/11/12/bengaluru-vishnu-2025-11-12-11-13-25.jpg)
ಬೆಂಗಳೂರು: ಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕನೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡು ಪ್ರಾಣಬಿಟ್ಟಿದ್ದಾಮೆ. ವಿಷ್ಣು ಸಿಪಿ (39) ಸಾ*ಗೆ ಶರಣಾದ ಯುವಕ.
ಹುಳಿಮಾವು ಠಾಣೆ ವ್ಯಾಪ್ತಿಯ ಯಲ್ಲೇನಹಳ್ಳಿಯಲ್ಲಿ ನವೆಂಬರ್ 07 ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯಲ್ಲೇನಹಳ್ಳಿಯ ರೆಡಿಯೆಂಟ್ ಶೈನ್ ಅಪಾರ್ಟ್ಮೆಂಟ್​ನಲ್ಲಿ ವಿಷ್ಣು ವಾಸವಿದ್ದ. ಈತ ಸೂರ್ಯಕುಮಾರಿ ಹಾಗೂ ಜ್ಯೋತಿ ಎಂಬ ಯುವತಿಯರ ಜೊತೆ ವಾಸವಿದ್ದ.
ಇದನ್ನೂ ಓದಿ: RCB ತಂಡದಿಂದ 5 ಆಟಗಾರರು ರಿಲೀಸ್ ಪಕ್ಕಾ.. ಪರ್ಸ್​ನಲ್ಲಿ ಹಣ ಎಷ್ಟಿದೆ?
ಇತ್ತೀಚೆಗೆ ಜ್ಯೋತಿ ಜೊತೆ ರಿಲೇಷನ್​ಶಿಪ್​ನಲ್ಲಿ ವಿಷ್ಣು ಇದ್ದನಂತೆ. ಜ್ಯೋತಿಗೂ ಮುಂಚೆ ಸೂರ್ಯಕುಮಾರಿ ಜೊತೆ ರಿಲೇಷನ್​ಶಿಪ್​ನಲ್ಲಿದ್ದ. ಈ ವಿಚಾರಕ್ಕೆ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಇದರಿಂದ ಬೇಸತ್ತು ಫ್ಲಾಟ್​ನ ಬಾತ್​ರೂಮ್​ನಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಇನ್ನು ಮೃತ ವಿಷ್ಣು ಹೊಸೂರು ರಸ್ತೆಯ ಎಕೆಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷ್ಣು ಸೋದರ ಜಿಷ್ಣು ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಫ್​ಐಆರ್​ನಲ್ಲಿ ಏನಿದೆ?
ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ.. ಜಿಷ್ಣು ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ನನ್ನ ಅಣ್ಣನಾದ ವಿಷ್ಣು ಸಿ ಪಿ (ವಯಸು 39) ಕಳೆದ 4 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಹೊಸೂರು ರಸ್ತೆಯಲ್ಲಿರುವ ಐಕೆಎಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಶ್ರೀಮತಿ ಸುರ್ಯಕುಮಾರಿ ಮತ್ತು ಜ್ಯೋತಿ ಜೊತೆ ಬೆಂಗಳೂರು ನಗರದ ಎಲ್ಲೇನಹಳ್ಳಿಯ ನಂ:203, 2ನೇ ಮಹಡಿ, ರೆಡಿಯಂಟ್ ಲೈನ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು.
ನವೆಂಬರ್ 7, ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಸುರ್ಯಕುಮಾರಿ ನನಗೆ ಕರೆ ಮಾಡಿದ್ದಾರೆ. ನಿಮ್ಮ ಅಣ್ಣ ಬಾತ್​ರೂಮ್​ನಲ್ಲಿ ನೇಣು ಬಿಗಿದುಕೊಂಡಿದ್ದು ಆತನ ಸೇಂಟ್ ಜಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ವೈದ್ಯರು ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ನಾನು ಸೇಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ಗುರುತಿಸಿದೆ.
ನವೆಂಬರ್ 8 ರಂದು ನಾನು ಸುರ್ಯಕುಮಾರಿ ಜೊತೆ ಮಾತನಾಡಿದಾಗ, ವಿಷ್ಣು ಮತ್ತು ಜ್ಯೋತಿ ಎಂಬುವವರ ಜೊತೆ ಸಂಬಂಧದಲ್ಲಿರುವುದಾಗಿ ತಿಳಿಸಿರುತ್ತಾರೆ. ಈ ಮೊದಲು ವಿಷ್ಣು ಸುರ್ಯಕುಮಾರಿ ಜೊತೆ ಸಂಬಂಧ ಹೊಂದಿದ್ದರಂತೆ. ಇದರಿಂದ ಜ್ಯೋತಿ ಹಾಗು ವಿಷ್ಣು ಮತ್ತು ಸುರ್ಯಕುಮಾರಿ ನಡುವೆ ಗಲಾಟೆ ಉಂಟಾಗಿರುತ್ತದೆ. ಆದ್ದರಿಂದ ಸುರ್ಯಕುಮಾರಿ ಮತ್ತು ಜ್ಯೋತಿ ರವರು ವಿಷ್ಣುರವರ ಜೊತೆ ಗಲಾಟೆ ಮಾಡಿ ಆತ್ಮ*ತ್ಯೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ರಕ್ಷಿತಾಳನ್ನ ವಿಷಕಾರಿ ಎಂದ ರಾಶಿಕಾ.. ನಾಮಿನೇಟ್ ವಿಚಾರದಲ್ಲಿ ದೊಡ್ಡ ಗಲಾಟೆ..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us