/newsfirstlive-kannada/media/media_files/2026/01/13/train-journey-robbers-2-2026-01-13-09-52-40.jpg)
ಬೆಂಗಳೂರು: ಪ್ರಯಾಣದ ಅವಧಿಯಲ್ಲಿ ಸಾವಿರಾರು ಮಂದಿ ಸಿಗ್ತಾರೆ. ನೂರಾರು ಜನ ಬಸ್​, ಟ್ರೈನ್ ಹತ್ತುತ್ತಾರೆ, ಇಳಿಯುತ್ತಾರೆ. ಯಾರು, ಎಲ್ಲಿಗೆ ಹೋಗ್ತಾರೋ ಕಾಣೆ. ಅದೇ ಗ್ಯಾಪ್​​ನಲ್ಲೇ ಪರಿಚಯದವರಂತೆ ಸ್ಮೈಲ್ ಕೊಟ್ಟು ನಿಮ್ಮ ಪಕ್ಕದ ಸೀಟಿನಲ್ಲಿ ಒಂದಷ್ಟು ಮಂದಿ ಕೂರುತ್ತಾರೆ, ಎದ್ದು ಹೋಗ್ತಾರೆ. ಅವರಲ್ಲಿರುವ ಎಲ್ಲ ನಗಮುಖ, ಗೋಮುಖ ಆಗಿರೋದಿಲ್ಲ ಹುಷಾರು!
ಇಷ್ಟೆಲ್ಲ ಪಿಠಿಕೆ ಹಾಕೋದಕ್ಕೂ ಕಾರಣವಿದೆ. ಬಿಹಾರ ಮೂಲದ ಕೃಷ್ಣಕುಮಾರ್ ಅನ್ನೋರು ಜನವರಿ 2 ರಂದು ದಾನಾಪುರಕ್ಕೆ ಟ್ರೈನ್ ಮೂಲಕ ಹೊರಟಿದ್ದರು. ಟ್ರೈನ್ ಜರ್ನಿ ವೇಳೆ ಇಬ್ಬರು ಅಸಾಮಿಗಳು ಪರಿಚಯವಾಗಿದ್ದಾರೆ. ತಾವೂ ಕೂಡ ಬಿಹಾರದವ್ರೆ ಎಂದು ಪರಿಚಯ ಮಾಡಿಕೊಂಡು ತುಂಬಾನೇ ಕ್ಲೋಸ್ ಆಗಿದ್ದಾರೆ.
/filters:format(webp)/newsfirstlive-kannada/media/media_files/2026/01/13/train-journey-robbers-2026-01-13-09-52-54.jpg)
ಈ ನಡುವೆ ಮಾರ್ಗಮಧ್ಯೆ ರೈಲ್ವೇ ನಿಲ್ದಾಣದಲ್ಲಿ ಇಳಿದು ಟೀ ತಂದು ಕೊಟ್ಟಿದ್ದಾರೆ. ಜೊತೆಗೆ ಅವರಿಬ್ಬರು ಟೀ ಕುಡಿಯುತ್ತಿದ್ದನ್ನ ನೋಡಿ ಕೃಷ್ಣಕುಮಾರ್ ಕುಡಿದಿದ್ದಾರೆ. ಸ್ವಲ್ಪ ಹೊತ್ತಲ್ಲೇ ಕೃಷ್ಣಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಚಿನ್ನದ ಸರ, ನಾಲ್ಕು ಸಾವಿರ ಹಣ ಸೇರಿದಂತೆ ಬ್ಯಾಗ್ ಸಮೇತ ಪರಾರಿಯಾಗಿದ್ದಾರೆ. ಟೀಗೆ ಮತ್ತು ಬರುವ ಔಷಧಿ ಹಾಕಿದ್ದರು ಎನ್ನಲಾಗಿದೆ.
ದರೋಡೆ ಸಂಬಂಧ ಕೃಷ್ಣಪ್ಪ ಅವರು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದರು. ಪೊಲೀಸರು ಕೊನೆಗೂ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷ್ಣ ಕುಮಾರ್​ಗೆ ಮಾಡಿದ ರೀತಿಯಲ್ಲೇ ಮೋಸ ಮಾಡಲು ಪ್ರಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಿಹಾರ ಮೂಲದ ಸಫರ್ ಮತ್ತು ಸತರ್ಮ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಇದನ್ನೂ ಓದಿ:Gold rate: ಚಿನ್ನದ ಜೊತೆಗೆ ಸ್ಪರ್ಧೆಗೆ ಇಳಿದ ಬೆಳ್ಳಿ.. ಬೆಂಗಳೂರಲ್ಲಿ ಒಂದೇ ದಿನ 18,200 ರೂ ಏರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us