ನಾಳೆ ಬೆಂಗಳೂರಲ್ಲಿ ಪ್ರಧಾನಿ ಮೋದಿ.. ಮೆಟ್ರೋ, 3 ವಂದೇ ಭಾರತ್ ರೈಲು ಸೇರಿ ಏನೆಲ್ಲ ಉದ್ಘಾಟಿಸ್ತಾರೆ..?

ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್​ ಡೌನ್ ಆರಂಭವಾಗಿದೆ. ನಾಳೆ ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.

author-image
Ganesh
Narendra modi
Advertisment

ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್​ ಡೌನ್ ಆರಂಭವಾಗಿದೆ. ನಾಳೆ ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.

ಮೋದಿಯಿಂದ ಉದ್ಘಾಟನೆ..

ರಾಜ್ಯರಾಜಧಾನಿಯಲ್ಲಿ ಸಂಚಾರಕ್ಕೆ ಸಿದ್ದಗೊಂಡಿರೋ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲು ಪ್ರಧಾನಿ ಮೋದಿ ಆಗಸ್ಟ್​ 10ರಂದು (ನಾಳೆ) ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲದೇ ಮೂರು ವಂದೇ ಭಾರತ್ ರೈಲುಗಳಿಗೂ ಮೋದಿ ಅಂದು ಚಾಲನೆ ನೀಡಲಿದ್ದಾರೆ. ಬೆಂಗಳೂರು-ಬೆಳಗಾವಿ, ಅಮೃತಸರ-ಮಾತಾ ವೈಷ್ಣೋದೇವಿ, ನಾಗಪುರ-ಪುಣೆ ಮಾರ್ಗದ ವಂದೇ ಭಾರತ್ ರೈಲುಗಳನ್ನ ಮೋದಿ ಉದ್ಘಾಟಿಲಿದ್ದಾರೆ.. ಇದೇ ವೇಳೆ ನಮ್ಮ ಮೆಟ್ರೋದ 3ನೇ ಹಂತದ 2 ಕಾರಿಡಾರ್‌ಗಳಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಮೊಟ್ಟ ಮೊದಲ ಬಾರಿಗೆ ಅಂಗಾಂಗ ಸಾಗಣೆ.. ಶಸ್ತ್ರ ಚಿಕಿತ್ಸೆ ಯಶಸ್ವಿ


ರಾಜಧಾನಿಗೆ ನಮೋ!

  • ನಾಳೆ ಬೆಳಗ್ಗೆ 7.50ಕ್ಕೆ ದೆಹಲಿಯಿಂದ ಹೊರಡಲಿರುವ ಮೋದಿ
  •  ಬೆ.10.30ಕ್ಕೆ ಬೆಂಗಳೂರು HAL ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ
  •  ಬೆ.10.50ಕ್ಕೆ ಹೆಲಿಕಾಪ್ಟರ್‌ನಲ್ಲಿ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮನ
  •  ಬೆ.11ಕ್ಕೆ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ
  •  ಬೆ.11.15ಕ್ಕೆ ರೈಲ್ವೆ ನಿಲ್ದಾಣದಲ್ಲಿ 3 ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ
  •  ಬೆ.11.45ಕ್ಕೆ ರಸ್ತೆ ಮಾರ್ಗವಾಗಿ ರಾಗಿಗುಡ್ಡದ ಮೆಟ್ರೋ ನಿಲ್ದಾಣಕ್ಕೆ ಆಗಮನ
  •  ಬೆ.11.50 ರಿಂದ ಮ.12.50ವರೆಗೂ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
  •  ಮೆಟ್ರೋ ರೈಲಿನಲ್ಲಿಯೇ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ
  •  ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಮ್ಮ ಮೆಟ್ರೋದ 3ನೇ ಹಂತಕ್ಕೆ ಶಂಕುಸ್ಥಾಪನೆ
  •  ಮ.1 ರಿಂದ 2 ಗಂಟೆವರೆಗೂ IIIT ಆಡಿಟೋರಿಯಂನಲ್ಲಿ ಕಾರ್ಯಕ್ರಮ
  •  ಮ.2.05ಕ್ಕೆ ಹೆಲಿಕಾಪ್ಟರ್‌ನಲ್ಲಿ HAL ವಿಮಾನ ನಿಲ್ದಾಣಕ್ಕೆ ನಮೋ ವಾಪಸ್
  •  ಮ.2.40ಕ್ಕೆ HAL ವಿಮಾನ ನಿಲ್ದಾಣದಿಂದ ದೆಹಲಿಗೆ ಮೋದಿಯ ಪ್ರಯಾಣ

ಇದನ್ನೂ ಓದಿ: 25 ನಿಮಿಷಕ್ಕೆ 1 ಮೆಟ್ರೋ ಟ್ರೈನ್​​.. ಹಳದಿ ಮಾರ್ಗ ಪರಿಶೀಲಿಸಿದ DCM ಡಿ.ಕೆ ಶಿವಕುಮಾರ್​, ಏನ್ ಹೇಳಿದರು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Pm Narendra Modi Namma metro
Advertisment