/newsfirstlive-kannada/media/media_files/2025/12/30/vaikunta-ekadashi-2025-12-30-06-54-25.jpg)
ವೈಕುಂಠ ಏಕಾದಶಿ.. ಏಕಾದಶಿಯಲ್ಲೇ ವಿಶಿಷ್ಟವಾದದ್ದು ಈ ವೈಕುಂಠ ಏಕಾದಶಿ.. ಹಿಂದೂಗಳ ಪಾಲಿನ ಪವಿತ್ರವಾದ ದಿನ ಇವತ್ತು.. ಈ ದಿನ ಶ್ರೀನಿವಾಸನ ದರ್ಶನ ಪಡೆದ್ರೆ ಸ್ವರ್ಗ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ.. ಅದ್ರಲ್ಲೂ ಈ ಬಾರಿ ಧನುರ್ಮಾಸದಲ್ಲಿ ಏಕಾದಶಿ ಆಚರಣೆ ಮಾಡ್ತಿರೋದು ಇನ್ನು ವಿಶೇಷವೇ ಸರಿ.. ಬೆಂಗಳೂರು ಸೇರಿದಂತೆ ಹಲವೆಡೆ ಶ್ರೀವಾರಿಯ ದರ್ಶನ ಜೋರಾಗಿದೆ.
ಇದನ್ನೂ ಓದಿ: ʼನೀನಾದೆ ನಾʼ ಖ್ಯಾತಿಯ ಕನ್ನಡದ ಸೀರಿಯಲ್ ನಟಿ ಹಠಾತ್ ನಿಧನ
ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್ ಟಿಟಿಡಿ ದೇವಸ್ಥಾನಕ್ಕೆ ಜನಸಾಗರ ಹರಿದುಬಂದಿದೆ. ವೈಕುಂಠ ಏಕಾದಶಿಯ ಸಂಭ್ರಮ.. ಈ ದಿನ ಶ್ರೀನಿವಾಸ ವೈಕುಂಠದ ಬಾಗಿಲು ತೆಗೆಯುತ್ತಾನೆ ಅನ್ನೋ ನಂಬಿಕೆ.. ಹೀಗಾಗಿ ವೈಯಾಲಿಕಾವಲ್ನ ಟಿಟಿಡಿ ದೇವಸ್ಥಾನಕ್ಕೆ 70 ಸಾವಿರಕ್ಕೂ ಆಗಮಿಸೋ ನಿರೀಕ್ಷೆ ಇದ್ದು, ಪ್ರಿಪರೇಷನ್ ಮಾಡಿಕೊಳ್ಳಲಾಗಿದೆ.
ವೈಯಾಲಿಕಾವಲ್ ನ ಟಿಟಿಡಿ ದೇವಸ್ಥಾನದಲ್ಲಿ ಮುಂಜಾನೆ 2:35 ರಿಂದ ಮಧ್ಯರಾತ್ರಿ 11:45 ರವರಗೂ ನಿರಂತರ ದರ್ಶನಕ್ಕೆ ಅವಕಾಶ ಇದೆ. ಕಳೆದ ಬಾರಿ 68 ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದು, ಈ ಬಾರಿ 70 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸೋ ನಿರೀಕ್ಷೆ ಇದೆ. ಬರೋ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ, ಕ್ಯೂ ವ್ಯವಸ್ಥೆ ಕೂಡ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2.00 ಗಂಟೆಯಿಂದ ಶ್ರೀವಾರಿ ಲಡ್ಡು ಪ್ರಸಾದ ಮಾರಾಟವನ್ನು ಆಯೋಜಿಸಲಾಗಿದ್ದು, ದಾಸ್ತಾನು ಇರುವವರೆಗೂ ಇದು ಲಭ್ಯವಿರುತ್ತದೆ.
ಇದನ್ನೂ ಓದಿ:ʼಅಮ್ಮಾ ಕ್ಷಮಿಸಿ ಬಿಡು..ʼ ನಟಿ ನಂದಿನಿ ಕೇಸ್‌ಗೆ ಮಹತ್ವದ ಸುಳಿವು ಪತ್ತೆ
ಭಕ್ತರಿಗಾಗಿ ಸರತಿ ಸಾಲುಗಳು ಚೌಡಯ್ಯ ಸಾರಕ ಸಭಾಂಗಣದಿಂದ ಮತ್ತು 2 ನೇ ಮುಖ್ಯ ರಸ್ತೆಯಿಂದ ಪ್ರಾರಂಭವಾಗುತ್ತವೆ. ಸ್ವಯಂಸೇವಕರ ಸಹಾಯದಿಂದ ವೃದ್ಧರು ಮತ್ತು ಅಂಗವಿಕಲರಿಗೆ ಆರಾಮದಾಯಕ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಅವರಿಗೆ ವಿಶೇಷ ಸ್ಥಳದಲ್ಲಿ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. 200ರೂ ಪಾವತಿಸಿದವರಿಗೆ ತ್ವರಿತ ದರ್ಶನ ಪಡೆಯವ ವ್ಯವಸ್ಥೆ ಮಾಡಲಾಗಿದೆ.
ವೈಕುಂಠ ಏಕಾದಶಿ ಪ್ರಯುಕ್ತ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 1 ಲಕ್ಷ ಲಡ್ಡುಗಳ ವಿತರಣೆ ಕೂಡ ಮಾಡಲಾಗ್ತಿದೆ.. ನಗರದ ಎಲ್ಲ ವೆಂಕಟೇಶ್ವರನ ದೇವಸ್ಥಾನಗಳ ಮೂಲಕ ಭಕ್ತಿರುಗೆ ಹಂಚೋ ಪ್ಲಾನ್ ಮಾಡಿಕೊಳ್ಳಲಾಗಿದೆ.. ಇಂದು ಬಸವನಗುಡಿಯ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಲಡ್ಡು ವಿತರಣೆ ಕಾರ್ಯಕ್ಕೆ ಎಂ ಎಲ್ ಸಿ ಶರವಣ ಚಾಲನೆ ನೀಡಿದ್ರು.. ಈ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಅನುಷಾ ರೈ ಕೂಡ ಉಪಸ್ಥಿತರಿದ್ರು..
ಇದನ್ನೂ ಓದಿ: ವರ್ಷದ ಆರಂಭದಲ್ಲೇ ಕಹಿ ಅನುಭವ.. ಹೇಗಿತ್ತು ಕೊಹ್ಲಿ ಜರ್ನಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us