/newsfirstlive-kannada/media/media_files/2025/10/04/darshan-and-vijayalaxmi-8-2025-10-04-13-43-12.jpg)
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಇತ್ತೀಚೆಗೆ ಜೈಲಿನಲ್ಲೇ ಸಹಚರರ ಜೊತ್ತೆ ಗಲಾಟೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದ್ರೆ ಅಂತೆ ಕಂತೆಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತೆರೆ ಎಳೆದಿದ್ದಾರೆ.
ದರ್ಶನ್ ಮೇಲಿನ ಆರೋಪಗಳು ನಕಲಿ, ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿದೆ. ನಾನೇ ಖುದ್ದಾಗಿ ಜೈಲಿಗೆ ತೆರಳಿ ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಅಂತ ವಿಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಹಾಕಿರುವ ವಿಜಯಲಕ್ಷ್ಮಿ, ಸತ್ಯವು ಸ್ವಲ್ಪ ಸಮಯದವರೆಗೆ ಮೌನವಾಗಿರಬಹುದು, ಆದರೆ ಅದು ಎಂದಿಗೂ ತಲೆಬಾಗುವುದಿಲ್ಲ. ಸುಳ್ಳುಗಳು ಜೋರಾಗಿ ಇರುತ್ತವೆ. ಆದರೆ ಅದು ಕೆಲವು ಸಮಯ ಅಂತ ವಿರೋಧಿಗಳಿಗೆ ವಿಜಯಲಕ್ಷ್ಮಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಗಿಲ್​​, ಸೂರ್ಯ​ ಫೇಲ್, ಭಾರೀ ಆಕ್ರೋಶ.. ಜನ ಮೆಚ್ಚಿದ ಪಾಂಡ್ಯ ಆಟ..!
ಇಂದು ನಾನು ಜೈಲಿಗೆ ಭೇಟಿ ನೀಡಿದಾಗ, ನಾನು ಅಧಿಕಾರಿಗಳೊಂದಿಗೆ, ನನ್ನ ಪತಿಯೊಂದಿಗೆ ಮತ್ತು ಅವರಿಂದ ಹಲ್ಲೆಗೊಳಗಾದ ವ್ಯಕ್ತಿಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿದೆ. ವದಂತಿಗಳಿಂದಲ್ಲ, ಊಹಾಪೋಹಗಳಿಂದಲ್ಲ, ವಿಕೃತ ನಿರೂಪಣೆಗಳಿಂದಲ್ಲ, ಎಲ್ಲವನ್ನೂ ನೇರವಾಗಿ ಅರ್ಥಮಾಡಿಕೊಳ್ಳಲು ನಾನು ಬಯಸಿದ್ದೆ.
ಎಲ್ಲರನ್ನೂ ಮಾತನಾಡಿಸಿ ಅವರ ಮಾತುಗಳನ್ನು ಕೇಳಿದ ನಂತರ, ಒಂದು ವಿಷಯ ನನಗೆ ಸಂಪೂರ್ಣವಾಗಿ ಸ್ಪಷ್ಟವಾಯಿತು, ಈ ಆರೋಪಗಳು ನಕಲಿ, ಆಧಾರರಹಿತ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಸೃಷ್ಟಿಸಲ್ಪಟ್ಟಿವೆ ಎಂದು.
ಸತ್ಯವು ಸ್ವಲ್ಪ ಸಮಯದವರೆಗೆ ಮೌನವಾಗಿರಬಹುದು. ಆದರೆ ಅದು ಎಂದಿಗೂ ತಲೆಬಾಗುವುದಿಲ್ಲ. ಸುಳ್ಳುಗಳು ಜೋರಾಗಿ ಕೂಗುತ್ತವೆ. ತಮ್ಮದೇ ಆದ ಭಾರಕ್ಕೆ ಕುಸಿಯುವ ಮೊದಲು.
ವಿಜಯಲಕ್ಷ್ಮೀ ದರ್ಶನ್
ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿಗಳಾಗಿರುವ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಅವರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಗಿಲ್ಲಿಗೆ ಚಪಾತಿ ಕೊಡದ ರಘು.. ಅದಕ್ಕೆ ಅಭಿಷೇಕ್ ಕೊಟ್ಟ ರೀಷನ್ ಬೇರೆ..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us