Advertisment

ಅಕ್ಕ-ತಮ್ಮನ ಜಗಳ.. ರಂಜಿತ್ ವಿರುದ್ಧ ಬಾಮೈದ ನೀಡಿದ ದೂರಿನಲ್ಲಿ ಏನಿದೆ?

ಅಕ್ಕ-ತಮ್ಮನ ಜಗಳದಿಂದಾಗಿ ಬಿಗ್​ಬಾಸ್ ಖ್ಯಾತೀಯ ರಂಜಿತ್ ಕುಮಾರ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರಣ ಇಷ್ಟೇ, ತಂದೆಯವರ ಫ್ಲಾಟ್​ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
bigg boss ranjith kumar (1)
Advertisment

ಅಕ್ಕ-ತಮ್ಮನ ಜಗಳದಿಂದಾಗಿ ಬಿಗ್​ಬಾಸ್ ಖ್ಯಾತಿಯ ರಂಜಿತ್ ಕುಮಾರ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರಣ ಇಷ್ಟೇ, ತಂದೆಯವರ ಫ್ಲಾಟ್​ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ನೀಡಿದ್ದಾರೆ. 

ಇದನ್ನೂ ಓದಿ:ಚಂದನಾ ಅನಂತಕೃಷ್ಣ ಮತ್ತೊಂದು ಪ್ರಯತ್ನ.. ಅಭಿಮಾನಿಗಳು ಫಿದಾ..!

Advertisment

ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ನಂತರ ಪೊಲೀಸರು ಎನ್​ಸಿಆರ್ ದಾಖಲು ಮಾಡಿ ಕಳುಹಿಸಿದ್ದಾರೆ. ಇದು ಫ್ಲಾಟ್ ವಿಚಾರ (ಸಿವಿಲ್ ವ್ಯಾಜ್ಯ). ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿಂದೆ ಇಡೀ ಕುಟುಂಬ ಅದೇ ಫ್ಲಾಟ್​ನಲ್ಲಿ ವಾಸವಿತ್ತು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರಿಗೂ ಬುದ್ಧಿ ಹೇಳಿ ಕೋರ್ಟ್​ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಂಜಿತ್ ಬಾವ ನೀಡಿದ ದೂರಿನಲ್ಲಿ ಏನಿದೆ..?

ರಂಜಿತ್ ಬಾಮೈದ ಜಗದೀಶ್ ನೀಡಿದ ದೂರಿನ ಪ್ರಕಾರ.. 2018 ರಿಂದಲೂ ನಾನು ನನ್ನ ಹೆಂಡತಿ ಮತ್ತು ಮಗಳೊಂದಿಗೆ ಆ ಫ್ಲಾಟ್​​ನಲ್ಲಿ ವಾಸಿಸುತ್ತಿರುತ್ತೇನೆ. ನಂತರ 2025 ರ ಜುಲೈ ತಿಂಗಳಿಂದ ನನ್ನ ಬಾಮೈದನಾದ ರಂಜಿತ್​ನು ನಮ್ಮ ಜೊತೆ ವಾಸಿಸುತ್ತಿದ್ದು, ಈಗ ಆತ ಮನೆ ನನಗೆ ಸೇರಿದೆ. ಈ ಮನೆಯನ್ನ ನೀವು ಬಿಡಬೇಕು ಎಂದು ನನಗೆ ಹಾಗೂ ನನ್ನ ಕುಟುಂಬದವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ. ಅಲ್ಲದೇ ಮನೆ ಬಿಡಲಿಲ್ಲ ಅಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಸದರಿ ರಂಜಿತ್​​ನ ವಿರುದ್ಧ NO-166/2025 50-352,351 (2) BNS 0:3 ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಅಕ್ಕ-ತಮ್ಮನ ಜಗಳ! ಠಾಣೆ ಮೆಟ್ಟಿಲೇರಿದ ಬಿಗ್​​ಬಾಸ್ ಖ್ಯಾತಿಯ​ ರಂಜಿತ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg boss Ranjith Kumar
Advertisment
Advertisment
Advertisment