/newsfirstlive-kannada/media/media_files/2025/09/10/rachita-ram-2025-09-10-09-35-43.jpg)
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವು ಪ್ರಕರಣದ ತನಿಖೆ ಚುರುಕುಗೊಂಡಿದೆ. ಒಳಸಂಚಿನ ಸೂತ್ರಧಾರಿಯ ಆರೋಪ ಹೊತ್ತಿರುವ ಜಗದೀಶ್ ಅಲಿಯಾಸ್ ಜಗ್ಗನನ್ನ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸ್ತಿದೆ. ಮಾಹಿತಿಗಳ ಪ್ರಕಾರ, ಇದೀಗ ನಟಿ ರಚಿತಾ ರಾಮ್ ಜೊತೆಗಿನ ಫೋಟೋಸ್ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
‘ರಚಿತಾಗೂ ನನಗೂ ಸಂಪರ್ಕವಿಲ್ಲ’!
ನಟಿ ರಚಿತಾ ರಾಮ್​ಗೂ ನನಗೂ ಯಾವುದೇ ಸಂಪರ್ಕವಿಲ್ಲ. ‘ರವಿಭೋಪಣ್ಣ’ ಶೂಟಿಂಗ್​ನಲ್ಲಿ ಫೋಟೋ ತೆಗೆಸಿಕೊಂಡಿದ್ದೆ. ಅಭಿಮಾನಿಯಾಗಿ ಗಿಪ್ಟ್ ಕೊಟ್ಟಿದ್ದೆ, ಆದ್ರೆ ಒಡವೆ ಬಗ್ಗೆ ಗೊತ್ತಿಲ್ಲ. ಸಿನಿಮಾ ನಿರ್ಮಾಣವಿದ್ದಿದ್ರಿಂದ ಒಡವೆ, ಸೀರೆ ಗಿಪ್ಟ್ ಕೊಡಲಾಗಿತ್ತು. ನನ್ನ ಸ್ನೇಹಿತರ ಮೂಲಕ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಹೋಗಿದ್ದೆ. ರಚಿತಾಗೂ ನನಗೂ ಸಂಬಂಧವಿಲ್ಲ ಎಂದ ಆರೋಪಿ ಜಗದೀಶ್ ಹೇಳಿದ್ದಾನೆ ಎನ್ನಲಾಗಿದೆ.
ಆದರೆ ಏನು ಗಿಫ್ಟ್​ ಕೊಟ್ಟೆ ಅನ್ನೋದ್ರ ಬಗ್ಗೆ ತನಿಖೆ ವೇಳೆ ಬಾಯಿಬಿಟ್ಟಿಲ್ಲ. ರಚಿತಾ ಸೇರಿ ಹಲವು ಸೆಲಬ್ರೆಟಿ, ರಾಜಕಾರಣಿಗಳ ಸಂಪರ್ಕದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಜುಲೈ 15 ರಂದು ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹ*ತ್ಯೆ ಆಗಿತ್ತು. ಇದೇ ಕೇಸ್​​ನಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಜಗದೀಶ್ ಅಲಿಯಾಸ್​ ಜಗ್ಗ, 14 ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದಾನೆ.
ಇದನ್ನೂ ಓದಿ:ಬಿಕ್ಲು ಶಿವನ ಪ್ರಕರಣದ ದಿನವೇ ನಾಪತ್ತೆ.. A1 ಆರೋಪಿ ಜಗ್ಗ ಯಾವ್ಯಾವ ದೇಶ ಸುತ್ತಾಡಿದ್ದ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us