/newsfirstlive-kannada/media/media_files/2025/12/24/benagaluru-man-2025-12-24-12-16-13.jpg)
ಬೆಂಗಳೂರು: ಮಗಳನ್ನ ಮದುವೆ ಮಾಡಿಕೊಡಲಿಲ್ಲ ಅನ್ನೋ ಕೋಪಕ್ಕೆ ತಾಯಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿರುವ ಪ್ರಕರಣ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆಗಿದ್ದೇನು..?
ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ಗೀತಾ ಎಂಬ ಮಹಿಳೆ ತನ್ನ ಮಗಳ ಜೊತೆ ವಾಸವಿದ್ದಾಳೆ. ಗೀತಾ, ಹೊಟ್ಟೆ ತುಂಬಿಸಿಕೊಳ್ಳೋಕೆ ಅಂತಾ ಪ್ರಾವಿಸನ್ ಸ್ಟೋರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾಳೆ. ಈ ಮಹಿಳೆಗೆ ಅಲ್ಲೇ ಪಕ್ಕದಲ್ಲಿರುವ ಟಿ-ಸ್ಟಾಲ್​​ನ ಮುತ್ತು ಎಂಬುವವನ ಪರಿಚಯ ಇರುತ್ತೆ. ಅಲ್ಲದೇ ಇವರಿಬ್ಬರು ಒಂದೇ ಬಿಲ್ಡಿಂಗ್​​ನಲ್ಲಿ ವಾಸವಿದ್ದರು ಎಂಬ ಮಾಹಿತಿ ಇದೆ.
ಇದನ್ನೂ ಓದಿ: ನಡು ರಸ್ತೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ, ಹಲ್ಲೆ.. ಬೆಂಗಳೂರಲ್ಲಿ ನಾಚಿಕೆಗೇಡಿನ ಕೃತ್ಯ
ಈ ಮುತ್ತು ಗೀತಾ ಅವರ ಮಗಳ ಜೊತೆ ಸಲುಗೆಯಿಂದ ಇದ್ದ. ಗೀತಾ ಅವರ ಮಗಳಿಗೆ ಇನ್ನೂ 19 ವರ್ಷ. ಅದಾಗಲೇ ಆಕೆಯನ್ನು ತನಗೆ ಮದುವೆ ಮಾಡಿಕೊಡುವಂತೆ ಗೀತಾಳ ಬಳಿ ಮತ್ತು ಒತ್ತಾಯಿಸಿದ್ದ. ಅದಕ್ಕೆ ಗೀತಾ, ಮಗಳನ್ನ ಮುತ್ತುಗೆ ಕೊಡಲು ಒಪ್ಪಿರಲಿಲ್ಲ.
ಇದೇ ಸಿಟ್ಟಿನಿಂದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಗೀತಾಳ ಮನೆಗೆ ನುಗ್ಗಿದ್ದಾನೆ. ನಂತರ ಪೆಟ್ರೋಲ್ ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲಿಗೆಗೆ ಗೀತಾ, ಶೇಕಡಾ 50 ರಷ್ಟು ಸುಟ್ಟು ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ ಪೊಲೀಸರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us