ದೇಶಿ ಟೂರ್ನಿಗೆ ‘ರಾಜ ಕಳೆ’! ವಿಜಯ್​ ಹಜಾರೆ ಟೂರ್ನಿಯಲ್ಲಿ ಸ್ಟಾರ್​ ವಾರ್​..!

ಬಿಸಿಸಿಐ ಬಾಸ್​ಗಳ ಖಡಕ್​ ಆದೇಶಕ್ಕೆ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್ಸ್​ ಶರಣಾಗಿದ್ದಾರೆ. ಕೊಹ್ಲಿ, ರೋಹಿತ್ ಶರ್ಮಾ, ಪಂತ್​, ಕೆ.ಎಲ್​ ರಾಹುಲ್. ​ಇಂದಿನಿಂದ ಆರಂಭವಾಗೋ ವಿಜಯ್​ ಹಜಾರೆ ಟೂರ್ನಿಯಲ್ಲಿ ಸ್ಟಾರ್​ಗಳ ದಂಡೇ ಕಣಕ್ಕಿಳಿಯಲಿದೆ. ಸ್ಟಾರ್​ಗಳ ಕಮ್​ಬ್ಯಾಕ್​ನಿಂದ ದೇಶಿ ಟೂರ್ನಿ ವಿಶ್ವದ ಗಮನ ಸೆಳೆದಿದೆ.

author-image
Ganesh Kerekuli
Vijay hazare
Advertisment
  • ಕೊಹ್ಲಿ, ರೋಹಿತ್, ಪಂತ್ ಯಾರೆಲ್ಲ ಆಡ್ತಿದ್ದಾರೆ..?
  • ದೆಹಲಿ ತಂಡಕ್ಕೆ ಕೊಹ್ಲಿ, ಪಂತ್​, ಹರ್ಷಿತ್​ ಬಲ
  • ಮುಂಬೈ ತಂಡದಲ್ಲಿ ಸೂಪರ್​ ಸ್ಟಾರ್​​ಗಳ ದಂಡು

ಬಿಸಿಸಿಐ ಬಾಸ್​ಗಳ ಖಡಕ್​ ಆದೇಶಕ್ಕೆ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್ಸ್​ ಶರಣಾಗಿದ್ದಾರೆ.  ಸುದೀರ್ಘ ಅಂತರದ ಬಳಿಕ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್ಸ್​​ ಡೊಮೆಸ್ಟಿಕ್​ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್​ ಪಂತ್​, ಕೆ.ಎಲ್​ ರಾಹುಲ್. ​ಇಂದಿನಿಂದ ಆರಂಭವಾಗೋ ವಿಜಯ್​ ಹಜಾರೆ ಟೂರ್ನಿಯಲ್ಲಿ ಸ್ಟಾರ್​ಗಳ ದಂಡೇ ಕಣಕ್ಕಿಳಿಯಲಿದೆ. ಸ್ಟಾರ್​ಗಳ ಕಮ್​ಬ್ಯಾಕ್​ನಿಂದ ದೇಶಿ ಟೂರ್ನಿ ವಿಶ್ವದ ಗಮನ ಸೆಳೆದಿದೆ.

ಸ್ಟಾರ್​ಗಳ ಕಮ್​ಬ್ಯಾಕ್​..!

ಭಾರತದ ಡೊಮೆಸ್ಟಿಕ್​ ಒನ್​ ಡೇ ಟೂರ್ನಮೆಂಟ್​ ವಿಜಯ್​ ಹಜಾರೆ ಟೂರ್ನಿ ಆರಂಭಕ್ಕೆ ಕೌಂಟ್​ ಡೌನ್​ ಆರಂಭವಾಗಿದೆ. ಇಂದಿನಿಂದ ವಿಜಯ್​​ ಹಜಾರೆ ಟೂರ್ನಿ ಆರಂಭವಾಗಲಿದ್ದು, ದೇಶಿ ಟೂರ್ನಿಗೆ ಈ ಬಾರಿ ರಾಜ ಕಳೆಯೇ ಬಂದಿದೆ. ಸೂಪರ್​ ಸ್ಟಾರ್​ ಆಟಗಾರರ ಕಮ್​ಬ್ಯಾಕ್​ನಿಂದ​ ಡೊಮೆಸ್ಟಿಕ್​ ಟೂರ್ನಮೆಂಟ್​,​ ಇಂಟರ್​ನ್ಯಾಷನಲ್​ ಲೆವೆಲ್​ನಲ್ಲಿ ಸದ್ದು ಮಾಡ್ತಿದೆ. ಡೊಮೆಸ್ಟಿಕ್​ ಲೀಗ್​ಗೆ ಈಗ ಫುಲ್​ ಕಳೆ ಬಂದಿದ್ದು, ಸ್ಟಾರ್​ಗಳ ಜೋರು ವಾರ್​ ನಡೆಯಲಿದೆ. 

ದೆಹಲಿ ತಂಡಕ್ಕೆ ತ್ರಿಮೂರ್ತಿಗಳ ಬಲ..! 

ಬರೋಬ್ಬರಿ 15 ವರ್ಷಗಳ ಬಳಿಕ ವಿಜಯ್​ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿಯೋಕೆ ವಿರಾಟ್​ ಕೊಹ್ಲಿ ರೆಡಿಯಾಗಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಇಂದಿನಿಂದ ಆರಂಭವಾಗೋ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲೇ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಕೊಹ್ಲಿ ಜೊತೆಗೆ ಟೀಮ್​ ಇಂಡಿಯಾದ ಇನ್ನೂ ಇಬ್ಬರು ಸ್ಟಾರ್ಸ್​​ ದೆಹಲಿ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್ ರಿಷಭ್​ ಪಂತ್​ ತಂಡವನ್ನ ಮುನ್ನಡೆಸಲಿದ್ದಾರೆ. ವೇಗಿ ಹರ್ಷಿತ್​ ರಾಣಾ ಕೂಡ ಟೂರ್ನಿಯಲ್ಲಿ ಕೆಲ ಪಂದ್ಯಗಳನ್ನ ಆಡೋದಾಗಿ ಡಿಡಿಸಿಎಗೆ ತಿಳಿಸಿದ್ದಾರೆ. 

ಇದನ್ನೂ ಓದಿ: Exclusive: ನಿವೃತ್ತಿ ಘೋಷಿಸಿದ ಕೆ.ಗೌತಮ್ ಸೆಕೆಂಡ್ ಇನ್ನಿಂಗ್ಸ್ ಹೇಗಿರುತ್ತೆ..? ನ್ಯೂಸ್​ಫಸ್ಟ್ ಜೊತೆ ಮಾತು

ಮುಂಬೈ ತಂಡದಲ್ಲಿ ಸ್ಟಾರ್​​ಗಳ ದಂಡು

ಶಾರ್ದೂಲ್​ ಠಾಕೂರ್​ ನೇತೃತ್ವದ ಮುಂಬೈ ತಂಡದಲ್ಲಂತೂ ಸ್ಟಾರ್​ಗಳೇ ತುಂಬಿ ತುಳುಕುತ್ತಿದ್ದಾರೆ. ಸುದೀರ್ಘ 7 ವರ್ಷಗಳ ಬಳಿಕ ಡೊಮೆಸ್ಟಿಕ್​ ಏಕದಿನ ಟೂರ್ನಿಯನ್ನಾಡಲು ರೆಡಿಯಾಗಿರೋ ರೋಹಿತ್​ ಶರ್ಮಾ ಜೈಪುರದಲ್ಲಿ ನಡೆಯೋ ಇಂದಿನ ಪಂದ್ಯದಲ್ಲೇ ಕಣಕ್ಕಿಳಿಯಲಿದ್ದಾರೆ. ರೋಹಿತ್​ ಶರ್ಮಾ ಜೊತೆಗೆ ಸರ್ಫರಾಜ್​ ಖಾನ್​, ಸೂರ್ಯಕುಮಾರ್​ ಯಾದವ್​, ಶಿವಂ ದುಬೆ ಕೂಡ ಮುಂಬೈ ಪರ ಆಡಲಿದ್ದಾರೆ. 

ಪಂಜಾಬ್​ ಪರ ಗಿಲ್​, ಅಭಿಷೇಕ್​ ಕಣಕ್ಕೆ

ಟೀಮ್​ ಇಂಡಿಯಾ ಏಕದಿನ ತಂಡದ ಬ್ಯಾಟ್ಸ್​ಮನ್​ ಶುಭ್​ಮನ್​ ಗಿಲ್​ ಕೂಡ ವಿಜಯ್​ ಹಜಾರೆ ಟೂರ್ನಿಯನ್ನಾಡಲಿದ್ದಾರೆ. ಟಿ20 ವಿಶ್ವಕಪ್​ ತಂಡದಿಂದ ಡ್ರಾಪ್​ ಆದ ಬಳಿಕ ಶುಭ್​ಮನ್​ ಗಿಲ್​, ವಿಜಯ್​ ಹಜಾರೆ ಟೂರ್ನಿಯನ್ನಾಡಲು ನಿರ್ಧರಿಸಿದ್ದಾರೆ. ಶುಭ್​ಮನ್ ಗಿಲ್ ಆಪ್ತಗೆಳೆಯ ಅಭಿಷೇಕ್​ ಶರ್ಮಾ ಕೂಡ ಪಂಜಾಬ್ ಪರ ಬ್ಯಾಟ್​ ಬೀಸಲಿದ್ದಾರೆ. ಅಭಿಷೇಕ್​ ಶರ್ಮಾನೇ ತಂಡವನ್ನ ಮುನ್ನಡೆಸೋ ಸಾಧ್ಯತೆಯಿದೆ. ವೇಗಿ ಆರ್ಷ್​​ದೀಪ್​ ಸಿಂಗ್​ ಕೂಡ ಟೂರ್ನಿಯಲ್ಲಿ ಕೆಲ ಪಂದ್ಯಗಳಿಗೆ ನಾನು ಲಭ್ಯ ಅನ್ನೋ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಇಲ್ಲ ಅನುಮತಿ.. ನಾಳೆ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯ ಶಿಫ್ಟ್..!

6 ವರ್ಷದ ಬಳಿಕ ರಾಹುಲ್​ ಕಮ್​​ಬ್ಯಾಕ್​..!

ಕರ್ನಾಟಕ ತಂಡಕ್ಕೆ ಈ ಬಾರಿ ಸ್ಟಾರ್​ಗಳ ಬಲವಿದೆ. 6 ವರ್ಷಗಳ ಬಳಿಕ ಕೆ.ಎಲ್​ ರಾಹುಲ್ ವಿಜಯ್​ ಹಜಾರೆಯಲ್ಲಿ ಕರ್ನಾಟಕದ ಪರ ಆಡಲಿದ್ದಾರೆ. 2019ರಲ್ಲಿ ಕೊನೆಯದಾಗಿ ಕರ್ನಾಟಕ ಪರ ವಿಜಯ್​ ಹಜಾರೆಯಲ್ಲಿ ರಾಹುಲ್​ ಆಡಿದ್ರು. ಆ ಸೀಸನ್​ನಲ್ಲಿ ಕರ್ನಾಟಕ ತಂಡ ಚಾಂಪಿಯನ್ ಕೂಡ ಆಗಿತ್ತು. ಈ ಬಾರಿ ರಾಹುಲ್​ ಆಗಮನ ಕರ್ನಾಟಕದ ಬಲ ಹೆಚ್ಚಿಸಿದ್ದು, ಮಯಾಂಕ್​, ಪಡಿಕ್ಕಲ್, ಕರುಣ್​ ನಾಯರ್​, ಪ್ರಸಿದ್ಧ್​ ಕೃಷ್ಣ ನೇತೃತ್ವದ ತಂಡ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. 

ಕಮ್​ಬ್ಯಾಕ್​ಗೆ ಮುಂದುವರೆದ ಶಮಿ ಕಸರತ್ತು

2025ರ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ಬಳಿಕ ಟೀಮ್​ ಇಂಡಿಯಾ ಸೈಡ್​ಲೈನ್​ ಆಗಿರೋ ಮೊಹಮ್ಮದ್​ ಶಮಿ ಕಮ್​ಬ್ಯಾಕ್​ಗೆ ಶತಪ್ರಯತ್ನ ನಡೆಸ್ತಿದ್ದಾರೆ. ರಣಜಿ, ಸೈಯದ್​ ಮುಷ್ತಾಕ್ ಅಲಿ ಬಳಿಕ ವಿಜಯ್​ ಹಜಾರೆ ಟೂರ್ನಿಯಲ್ಲೂ ಕಣಕ್ಕಿಳಿಯೋಕೆ ಶಮಿ ಮುಂದಾಗಿದ್ದಾರೆ. ವಿಜಯ್​ ಹಜಾರೆಯಲ್ಲಿ ಪರ್ಫಾಮ್​ ಮಾಡಿ ಸೆಲೆಕ್ಟರ್ಸ್​ & ಟೀಮ್​ ಮ್ಯಾನೇಜ್​ಮೆಂಟ್​ ಕಣ್ತೆರೆಸಲು ಶಮಿ ಪ್ಲಾನ್​ ಹಾಕಿಕೊಂಡಿದ್ದಾರೆ. 

ಇವರಿಷ್ಟೇ ಅಲ್ಲ.. ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​, ಋತುರಾಜ್​ ಗಾಯಕ್ವಾಡ್​, ನಿತೀಶ್​ ರೆಡ್ಡಿ ಹಾಗೂ ರಿಂಕು ಸಿಂಗ್​ ಕೂಡ ಇಂದಿನಿಂದ ಆರಂಭವಾಗೋ ವಿಜಯ್​ ಹಜಾರೆಯಲ್ಲಿ ಬ್ಯಾಟ್​ ಬೀಸಲಿದ್ದಾರೆ. ಈ ಸೂಪರ್​ ಸ್ಟಾರ್​​​ಗಳ ಕಮ್​ಬ್ಯಾಕ್​ ದೇಶಿ ಟೂರ್ನಿಗೆ ಹೊಸ ರಂಗು ತಂದಿರೋದು ಸುಳ್ಳಲ್ಲ. 

ಇದನ್ನೂ ಓದಿ: ಕನ್ನಡಿಗ KL ರಾಹುಲ್​​ಗೆ ಮತ್ತೊಮ್ಮೆ ದೊಡ್ಡ ಜವಾಬ್ದಾರಿ.. ಭಾರೀ ಬದಲಾವಣೆ ನಿರೀಕ್ಷೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Cricket news in Kannada Rishabh Pant Rohit Sharma Vijay Hazare Trophy
Advertisment