/newsfirstlive-kannada/media/media_files/2025/12/24/bengaluru-5-2025-12-24-11-09-36.jpg)
ಸೋಶಿಯಲ್ ಮೀಡಿಯಾ ಮೂಲಕ ಯುವಕರನ್ನ ಪರಿಚಯ ಮಾಡಿಕೊಳ್ಳುವ ಯುವತಿಯರೇ ಎಚ್ಚರ! ಕೆಲವರು ಆರಂಭದಲ್ಲಿ ಸ್ನೇಹ ಅಂತಾರೆ. ಆಮೇಲೆ ‘ಐ ಲವ್​ ಯೂ’ ಎಂದು ನಡುರಸ್ತೆಯಲ್ಲೇ ಕಿರುಕುಳ ಕೊಡ್ತಾರೆ! ಹೌದು, ಬೆಂಗಳೂರಲ್ಲಿ ಅಮಾನವೀಯ ಮತ್ತು ಭಯಾನಕ ಕೃತ್ಯವೊಂದು ನಡೆದಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. 2024 ಸೆಪ್ಟೆಂಬರ್​ 30 ರಂದು ಇನ್​ಸ್ಟಾಗ್ರಾಮ್​​ನಲ್ಲಿ ಸಂತ್ರಸ್ತ ಯುವತಿಗೆ ನವೀನ್ ಕುಮಾರ್ ಎಂಬಾತ ಪರಿಚಯ ಆಗಿದ್ದ. ಚಾಟ್ ಮೂಲಕ ಆರಂಭವಾದ ಪರಿಚಯ, ಸ್ನೇಹಕ್ಕೆ ತಿರುಗಿತ್ತು. ಬಳಿಕ ಇಬ್ಬರು ಆಗಾಗ ನಾಗರಭಾವಿ ಬಳಿ ಭೇಟಿ ಆಗುತ್ತಿದ್ದರು. ಈ ಸ್ನೇಹ ಆತ್ಮೀಯತೆಗೆ ತಿರುಗುತ್ತಿದ್ದಂತೆಯೇ, ಕಳೆದ ತಿಂಗಳಿನಿಂದ ಯುವತಿಗೆ ಪ್ರೀತಿ ಮಾಡು ಎಂದು ನವೀನ್ ಪೀಡಿಸಲು ಶುರುಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ನಡು ರಸ್ತೆಯಲ್ಲಿ ಹೆಂಡತಿಗೆ ಗುಂಡಿಟ್ಟು ಜೀವ ತೆಗೆದ ಗಂಡ -ಬೆಚ್ಚಿಬಿದ್ದ ಬೆಂಗಳೂರು..
ಆದರೆ ಯುವತಿ, ನವೀನ್ ಕುಮಾರ್​ನ ಪ್ರೀತಿಸಲು ನಿರಾಕರಿಸಿದ್ದಾಳೆ. ಇದರಿಂದ ಸಿಡಿಮಿಡಿಗೊಂಡಿದ್ದ ನವೀನ್ ಕುಮಾರ್​, ಯುವತಿಗೆ ಕಾಟ ಕೊಡಲು ಶುರುಮಾಡಿದ್ದ. ಈತನ ಕಾಟಕ್ಕೆ ಯುವತಿ ಬೇಸತ್ತು ಹೋಗಿದ್ದಳು. ಅಷ್ಟಾದರೂ ಸುಮ್ಮನಾಗದ ನವೀನ್ ಕುಮಾರ್, ಆಕೆಯ ಪಿಜಿ ಬಳಿ ಬರುತ್ತಿದ್ದ ಎಂಬ ಆರೋಪ ಇದೆ.
ಅಂತೆಯೇ, ಡಿಸೆಂಬರ್ 22 ರಂದು ಉಲ್ಲಾಳ ಮುಖ್ಯರಸ್ತೆಯ ಜ್ಞಾನಜ್ಯೋತಿನಗರ ಬಳಿಯಲ್ಲಿರುವ ಪಿಜಿ ಹೊಂಚು ಹಾಕಿ ನಿಂತಿದ್ದ. ಮಧ್ಯಾಹ್ನ 3.20ರ ಸುಮಾರಿಗೆ ಯುವತಿ ಪಿಜಿಯಿಂದ ಆಚೆ ಬರುತ್ತಿದ್ದಂತೆ, ಕಾರನ್ನು ಆಕೆಯ ಬಳಿ ನಿಲ್ಲಿಸಿ ಹಾರ್ನ್ ಮಾಡಿದ್ದಾನೆ. ಯುವತಿ, ಆತನ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ. ನಂತರ ಕಾರನ್ನ ಮಧ್ಯೆರಸ್ತೆಯಲ್ಲೇ ನಿಲ್ಲಿಸಿ, ಆಕೆ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಲೈಂಗಿಕವಾಗಿ ಕಿರುಕುಳ ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೂ ಬಿಡದ ಆತ, ಟಾರ್ಚರ್ ನೀಡಿದ್ದಾನೆ. ಯುವತಿ ಕಾಪಾಡುವಂತೆ ಜೋರಾಗಿ ಕಿರುಚಿಕೊಂಡ ಬೆನ್ನಲ್ಲೇ, ಅಲ್ಲಿದ್ದ ಕೆಲವರು ಘಟನಾ ಸ್ಥಳಕ್ಕೆ ದೌಡಾಯಿಸುತ್ತಿದ್ದರು. ಆಗ ಆತ ಕಾರಿನಲ್ಲಿ ಪರಾರಿ ಆಗಿದ್ದಾನೆ. ಪ್ರಕರಣ ಸಂಬಂಧ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಲ್ಲದೇ, ಘಟನೆ ಬಳಿಕ ಪಿಜಿ ಖಾಲಿ ಮಾಡಿದ್ದಾಳೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us