Advertisment

RSS ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ ಸಿಬ್ಬಂದಿಗೆ ಗೇಟ್ ಪಾಸ್..!

RSS ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ ಸಿಬ್ಬಂದಿಗೆ ಗೇಟ್ ಪಾಸ್ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಅಡುಗೆ ಸಿಬ್ಬಂದಿ ಪ್ರಮೋದ್​​ನನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಿದೆ.

author-image
Ganesh Kerekuli
RSS Pathasanchalana
Advertisment

ಬೀದರ್: RSS ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ ಸಿಬ್ಬಂದಿಗೆ ಗೇಟ್ ಪಾಸ್ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಅಡುಗೆ ಸಿಬ್ಬಂದಿ ಪ್ರಮೋದ್​​ನನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಿದೆ.

Advertisment

ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಹೊರ ಗುತ್ತಿಗೆ ಆಧಾರದ ಮೇಲೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಇದೀಗ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ತಾಲೂಕಾ ಅಧಿಕಾರಿ ಆದೇಶ ನೀಡಿದ್ದಾರೆ.

ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ ಸಂಸ್ಥೆಯಲ್ಲಿ ಭಾಗಿಯಾಗಬಾರದೆಂದು ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನಷ್ಟು ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಶಿಕ್ಷಕರು RSS  ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ. ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳಿಗೆ ಇದೀಗ ಢವಢವ ಶುರುವಾಗಿದೆ. 

ಇದನ್ನೂ ಓದಿ:ಟೀಂ ಇಂಡಿಯಾ ಸೋಲಿಗೆ ಕಾರಣ 5; KL ರಾಹುಲ್ ಸಮಸ್ಯೆ ಏನು ಗೊತ್ತಾ?

ಅಡುಗೆ ಸಹಾಯಕ ಅಮಾನತಾದ ಬೆನ್ನಲ್ಲೆ ಪಥ ಸಂಚಲನದಲ್ಲಿ ಭಾಗಿಯಾದ ಶಿಕ್ಷಕರಿಗೆ ಆತಂಕ ಶುರುವಾಗಿದೆ. ಅಲಗೂಡ ಮುಖ್ಯ ಶಿಕ್ಷಕ ರಮೇಶ ರಾಜೋಳೆ, ಕಿಟ್ಟಾ ಶಾಲೆಯೆ ಮುಖ್ಯ ಶಿಕ್ಷಕ ಸೋಮಾನಾಥ ಬೇಲೂರೆ, ನೀಲಾಂಬಿಕಾ ಕಾಲೇಜ್ ಪ್ರಿನ್ಸಿಪಲ್ ಅಶೋಕ ರೆಡ್ಡಿ ಭಾಗಿಯಾಗಿರೋ ಫೋಟೋ ವೈರಲ್ ಆಗಿದೆ. 

Advertisment

ಶಿಕ್ಷಕರು ಸೇರಿದಂತೆ ಸರ್ಕಾರಿ ಸೇವೆಯಲ್ಲಿರೋರಿಗೆ ಅಮಾನತಿನ ಢವಢವ ಶುರುವಾಗಿದೆ. ಬಸವಕಲ್ಯಾಣದಲ್ಲಿ ನಡೆದ RSS ಪಥ ಸಂಚಲನದಲ್ಲಿ ಸುಮಾರು 20ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರು ಎಂಬ ಮಾಹಿತಿ ಇದೆ. 

ಇದನ್ನೂ ಓದಿ: ‘ನಾನು ಹೇಳಿದ್ದು ಮಾಡಿದ್ರೆ ಮಾತ್ರ ಮಾತಾಡ್ತೀನಿ..’ ತ್ರಿಕೋನ ಪ್ರೇಮದಲ್ಲಿ ಗಿಲ್ಲಿಗೆ ಫಜೀತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bidar News RSS ban RSS
Advertisment
Advertisment
Advertisment