/newsfirstlive-kannada/media/media_files/2025/10/22/kavya-and-gilli-2025-10-22-12-36-15.jpg)
ಕಾವ್ಯಳ ಬಿಟ್ಟು ರಿಷಾ ಗೌಡ ಹಿಂದೆ ಬಿದ್ದಿದ್ದ ಗಿಲ್ಲಿಗೆ ನಿನ್ನೆ ಆಘಾತ ಆಗಿದೆ. ಗಿಲ್ಲಿ ನೀಡಿದ್ದ ಹೃದಯವನ್ನು ರಿಷಾ ಪೀಸ್ ಪೀಸ್ ಮಾಡಿದ್ದಾರೆ. ಬೆನ್ನಲ್ಲೇ, ಗಿಲ್ಲಿಗೆ ಕಾವ್ಯಾ ಮೇಲೆ ಮತ್ತೆ ಚುಟುಚುಟು ಅನ್ನೋಕೆ ಶುರುವಾಗಿದೆ. ಆದರೆ ಕಾವ್ಯ, ಗಿಲ್ಲಿ ಜೊತೆ ಸರಿಯಾಗಿ ಮಾತಾಡ್ತಿಲ್ಲ. ಇಬ್ಬರ ಮಧ್ಯೆ ರಿಷಾ ಆಗಾಗ ಎದೆಬಡಿತವನ್ನು ಹೆಚ್ಚಿಸ್ತಿದ್ದಾರೆ!
ಇದನ್ನೂ ಓದಿ: ಬಕೆಟ್ ರಾಜ, ಹೆಮ್ಮಾರಿ ಎಂದು ಮಂಜು ಭಾಷಿಣಿ ಹೇಳಿದ್ದು ಯಾರಿಗೆ? ಶಾಕಿಂಗ್ ಅನ್ಸರ್!
ಈ ಮೂವರ ನಡುವಿನ ಕ್ಯೂಟ್ ಲವ್ವಾಟ ವೀಕ್ಷಕರ ಎದೆಗೂ ಕಚಗುಳಿಯನ್ನ ಇಡ್ತಿದೆ. ತರ್ಲೆ ಮಾತುಗಳ ಮೂಲಕ ವೀಕ್ಷಕರ ಹೃದಯ ಗೆಲ್ತಿರುವ ಈ ತ್ರಿಕೋನ ಪ್ರೇಮ ಕತೆಗೆ ಮತ್ತೊಂದು ಟ್ವಿಸ್ಟ್​ ಸಿಗುವ ಸಾಧ್ಯತೆ ಇದೆ. ತನ್ನನ್ನು ಕ್ಷಮಿಸಿ, ಮಾತನಾಡು ಅಂತಾ ಕಾವ್ಯಾಗೆ ಗಿಲ್ಲಿ ಅಂಗಲಾಚುತ್ತಿದ್ದಾರೆ. ನಿನ್ನ ಜೊತೆ ಮಾತಾಡಬೇಕು ಅಂದ್ರೆ.. ನಾನೊಂದು ಹೇಳ್ತೀನಿ. ಅದನ್ನು ಮಾಡಿದ್ರೆ ಮಾತ್ರ ಮಾತಾಡ್ತೀನಿ ಎಂದು ಕಾವ್ಯ ಷರತ್ತು ಇಟ್ಟಿದ್ದಾಳೆ!
ಇದನ್ನೂ ಓದಿ: ಗಿಲ್ಲಿ ಹಾರ್ಟ್ ಪೀಸ್ ಪೀಸ್ ಮಾಡಿದ ರಿಷಾ ಗೌಡ..!
ಕಾವ್ಯಳ ಡಿಮ್ಯಾಂಡ್ ಏನು..?
ಕಿಚನ್ ಏರಿಯಾದಲ್ಲಿ ರಿಷಾ ಮತ್ತು ಗಿಲ್ಲಿ ಇರುತ್ತಾರೆ. ಅಲ್ಲಿಗೆ ಕಾವ್ಯಾ ಬರುತ್ತಾರೆ. ಅದನ್ನು ನೋಡಿದ ರಿಷಾ ‘ಬಾ ಕಾವು’ ಎನ್ನುತ್ತಾರೆ. ನನಗೆ ಇಲ್ಲಿರೋಕೆ ಇಷ್ಟವಿಲ್ಲ ಎಂದು ಕಿಚನ್​ ಪಕ್ಕದಲ್ಲಿರುವ ಬೆಂಚ್​ ಮೇಲೆ ಕೂರುತ್ತಾರೆ. ಅಲ್ಲಿಗೆ ರಿಷಾ ಹೋಗುತ್ತಾರೆ. ಆಗ ಈ ಮೂವರ ನಡುವೆ ಹುಸಿ ಮುನಿಸಿನ ಮಾತುಕತೆ ಆರಂಭವಾಗುತ್ತದೆ..
ರಿಷಾ ಬಳಿ ಮಾತಿಗೆ ಇಳಿಯುವ ಕಾವ್ಯ, ಆ ಥರಾ ಪಾಪದ ಲುಕ್ ಅಲ್ಲ ಕೊಡೋದು ಬೇಡ ಅಂತೇಳು ಎನ್ನುತ್ತಾ ಗಿಲ್ಲಿಗೆ ಟಾಂಟ್ ಕೊಡ್ತಾಳೆ. ಅದಕ್ಕೆ ಕೌಂಟರ್ ಕೊಡುವ ಗಿಲ್ಲಿ, ನಾನು ಇರೋದೇ ಪಾಪದ ರೀತಿಯಲ್ಲಿ ಎನ್ನುತ್ತಾರೆ. ಆಗ ರಿಷಾ ಗೌಡ, ನೀನು ಬಿಡಪ್ಪ.. ಮೂರು ಕೊಟ್ರೆ ಸೊಸೆ ಕಡೆ, ಆರು ಕೊಟ್ರೆ ಅತ್ತ ಕಡೆ ಎಂದು ಗೇಲಿ ಮಾಡಿದ್ದಾರೆ.
ಇಲ್ಲ, ಇಲ್ಲ ನಾನು ಯಾರ ಕಡೆಗೂ ಅಲ್ಲ. 9 ಕೊಟ್ರೆ ಮಾತ್ರ ನಾನು ಅವರ ಕಡೆ ಎನ್ನುತ್ತಾರೆ. ಆಗ ಕಾವ್ಯ, ರಿಷಾ ಬಳಿ.. ನಾನು ಅವನ ಜೊತೆ ಮಾತಾಡಬೇಕು ಅಂದ್ರೆ, ನಾನೊಂದು ಹೇಳ್ತೀನಿ ಅದನ್ನು ಮಾಡಬೇಕು ಎನ್ನುತ್ತಾರೆ. ಅದಕ್ಕೆ ಗಿಲ್ಲಿ ಕಡೆಯಿಂದ ಸರಿಯಾದ ಆನ್ಸರ್ ಸಿಗಲ್ಲ. ಆಗ ಮಲ್ಲಮ್ಮ ಬಳಿ ‘ಮಾಡ್ತಾನಾ?, ಇಲ್ವಾ’ ಅಂತಾ ಕೇಳು ಎಂದಿದ್ದಾರೆ.
ಆಗ ಗಿಲ್ಲಿ ಏನದು ಎಂದು ಕೇಳ್ತಾನೆ. ಅದಕ್ಕೆ ಕಾವ್ಯ ಕ್ಲೀನ್ ಶೇವ್ ಎನ್ನುತ್ತಾರೆ. ಕ್ಲೀನ್ ಶೇವ್ ನನಗೆ ಚೆನ್ನಾಗಿ ಕಾಣಲ್ಲ. ಎರಡು ಇಂಚು ಬಿಟ್ಟು ಮಾಡ್ತೀನಿ ಎನ್ನುತ್ತಾರೆ. ಸರಿ ಈಗಲೇ ಮಾಡು ಎಂದು ಕಾವ್ಯ ಹೇಳ್ತಾರೆ. ಅದಕ್ಕೆ ತಿಂಡಿ ಮಾಡ್ತೀನಿ ಎಂದು ಕಾವ್ಯಾಗೆ ಗಿಲ್ಲಿ ಹೇಳಿದ್ದಾರೆ. ಇದರ ಮಧ್ಯೆ ಗಿಲ್ಲಿ ಶೇವ್ ಮಾಡಿಲ್ಲ. ಅದಕ್ಕೆ ಕಾವ್ಯ ಕೂಡ ಮಾತನ್ನಾಡಿಲ್ಲ. ಆದರೆ ಕಾವು, ಕಾವು ಅಂತಾ ಸುತ್ತೋದನ್ನೂ ಗಿಲ್ಲಿ ನಿಲ್ಲಿಸಿಲ್ಲ. ಇತ್ತ ರಿಷಾ ಗೌಡ, ಶೇವ್ ತಾನೇ, ನಾನು ಮಾಡಿಸ್ತೀನಿ ಅಂತಾ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಗೌಡಗೆ ಬಿಗ್​ ಶಾಕ್.. ಗಳಗಳನೇ ಸುರಿದ ಕಣ್ಣೀರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ