/newsfirstlive-kannada/media/media_files/2025/10/22/kl-rahul-7-2025-10-22-11-32-02.jpg)
ಪರ್ತ್ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯವು ತಂಡದ ಹೀನಾಯ ಸೋಲಿಗೆ ಕಾರಣವಾಯ್ತು. ತಂಡದ ಟಾಪ್ ಆರ್ಡರ್​ ಬ್ಯಾಟರ್ಸ್​, ಆಪ್ಟಸ್ ಸ್ಟೇಡಿಯಮ್​​ನಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿದ್ರು. ರೋಹಿತ್, ಕೊಹ್ಲಿ, ಗಿಲ್, ಶ್ರೇಯಸ್, ರಾಹುಲ್​ರಂತಹ ಸೂಪರ್​ಸ್ಟಾರ್ಸ್​ ಪ್ಲೇಯರ್ಸ್​​ ಇದ್ದರೂ ತಂಡಕ್ಕೆ ಸೋಲು ತಪ್ಪಲಿಲ್ಲ. ಹಾಗಾಗಿ ಮೊದಲ ಏಕದಿನ ಪಂದ್ಯದ ಸೋಲಿಗೆ ಬಳಿಕ, ಟೀಮ್ ಮ್ಯಾನೇಜ್ಮೆಂಟ್​​ಗೆ ಹಲವು ಪ್ರಶ್ನೆಗಳು ಕಾಡಲಾರಂಭಿಸಿವೆ.
ಇದನ್ನೂ ಓದಿ: ಅಡಿಲೇಡ್​​ನಿಂದ ಶಾಕಿಂಗ್ ನ್ಯೂಸ್.. 2ನೇ ODI ನಿಂದ ಇಬ್ಬರು ಸ್ಟಾರ್ ನಾಪತ್ತೆ..?
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್, ಕೊಲ್ಯಾಪ್ಸ್ ಆಯ್ತು. ಕೇವಲ 50 ರನ್​ಗಳಿಸುವಷ್ಟರಲ್ಲಿ ತಂಡದ ಟಾಪ್ ಆರ್ಡರ್ ಬ್ಯಾಟರ್ಸ್​, ಪೆವಿಲಿಯನ್ ಸೇರಿಕೊಂಡಿದ್ರು. ರೋಹಿತ್, ಕೊಹ್ಲಿ, ಗಿಲ್ ಮತ್ತು ಶ್ರೇಯಸ್ ಅಯ್ಯರ್​​, ಅಸಹಾಯಕರಂತೆ ಪೆವಿಲಿಯನ್ ಸೇರಿಕೊಂಡರು. ಅಂದು ಟೀಮ್ ಇಂಡಿಯಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನೋಡಿದವರಿಗೆಲ್ಲಾ ಅನಿಸಿದ್ದು ಒಂದೇ. ಇವರಿಗೆ ಏನ್ ಆಗಿದೆ ಅಂತ.
ರೋಹಿತ್​ ಶರ್ಮಾಗೆ ಏಕಾಗ್ರತೆ ಕೊರತೆ?
ಮಾಜಿ ನಾಯಕ ರೋಹಿತ್ ಶರ್ಮಾ, ಹಿಂದಿನಂತಿಲ್ಲ. ಏಕದಿನ ತಂಡದ ನಾಯಕತ್ವ ಕಳೆದುಕೊಂಡ ಮೇಲೆ, ರೋಹಿತ್ ಸಂಪೂರ್ಣ ಬದಲಾಗಿದ್ದಾರೆ. ಡಿಫರೆಂಟ್ ಪರ್ಸನ್ ಆಗಿ ಕಾಣ್ತಿದ್ದಾರೆ. ಟೀಮ್ ಇಂಡಿಯಾದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ರೋಹಿತ್, ನಾಯಕತ್ವ ಕೈತಪ್ಪಿದಕ್ಕೆ ತೀವ್ರ ನೊಂದಿದ್ದಾರೆ. ಇದ್ರಿಂದ ರೋಹಿತ್, ಏಕಾಗ್ರತೆ ಕಳೆದುಕೊಂಡವರಂತೆ ಕಾಣ್ತಾರೆ.
ಕೊಹ್ಲಿ ಬಿಡದ ಆಫ್ ಸ್ಟಂಪ್ ಭೂತ
ವಿರಾಟ್ ಕೊಹ್ಲಿ ವೈಟ್​​ಬಾಲ್ ಕ್ರಿಕೆಟ್​​​​ನ ಗ್ರೇಟ್ ಪ್ಲೇಯರ್. ಆದ್ರೆ ವಿರಾಟ್, ಪದೇ ಪದೇ ಮಾಡಿದ ತಪ್ಪನ್ನೇ ಮಾಡ್ತಿದ್ದಾರೆ. ಆಫ್ ಸ್ಟಂಪ್ ಆಚೆ ಹೋಗೋ ಡೆಲಿವರಿಯನ್ನ ಕೊಹ್ಲಿ ಕೆಣಕಿ, ಲೆಕ್ಕವಿಲ್ಲದಷ್ಟು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್, ತನ್ನ ತಪ್ಪನ್ನ ತಿದ್ದುಕೊಂಡೇ ಇಲ್ಲ. ಆಫ್​ ಸ್ಟಂಪ್ ಭೂತ ಕೊಹ್ಲಿಯನ್ನ ಕಾಡ್ತಿದ್ರೂ, ಇನ್ನೂ ಎಚ್ಚೆತ್ತುಕೊಳ್ಳಲಿಲ್ಲ.
ಇದನ್ನೂ ಓದಿ: ‘ಬಂದಿದ್ದೇ ಲೇಟು..’ ಕೊಹ್ಲಿ-ರೋಹಿತ್ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಕೈಫ್..!
ಶ್ರೇಯಸ್​​​ಗೆ ಶಾರ್ಟ್​​ ಪಿಚ್ ಬಾಲ್ ಚಿಂತೆ
ಸ್ಟೈಲಿಶ್ ಬ್ಯಾಟ್ಸ್​ಮನ್​ ಅಯ್ಯರ್​​​​​ ಕಮ್​ಬ್ಯಾಕ್, ಫ್ಲಾಪ್ ಆಯ್ತು. ಡೊಮೆಸ್ಟಿಕ್ ಕ್ರಿಕೆಟ್​​​​ ಮತ್ತು ಐಪಿಎಲ್​​ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಶ್ರೇಯಸ್, ಶಾರ್ಟ್ ಪಿಚ್ ಬಾಲ್​ಗಳು ಎದುರಾದ್ರೆ ಸೈಲೆಂಟ್ ಆಗಿಬಿಡ್ತಾರೆ. ಶ್ರೇಯಸ್​​ ಅಯ್ಯರ್​ರ ಆ ವೀಕ್ನೆಸ್,​​​​​​ ಎದುರಾಳಿಗಳಿ ಬೌಲರ್​ಗಳಿಗೆ ಅಸ್ತ್ರವಾಗಿಬಿಟ್ಟಿದೆ. ಮುಂಬೈಕರ್ ಶ್ರೇಯಸ್, ಶಾರ್ಟ್​​​ ​​​​ಪಿಚ್ ಬಾಲ್ ಚಿಂತೆ ಬಿಟ್ಟು, ಆತ್ಮವಿಶ್ವಾಸದಿಂದ ಹೋರಾಡಬೇಕಿದೆ.
ಗಿಲ್​​ ಮೇಲೆ ನಾಯಕತ್ವದ ಒತ್ತಡ
ಏಕದಿನ ತಂಡದ ನೂತನ ನಾಯಕ ಶುಭ್ಮನ್ ಗಿಲ್, ಮೋಸ್ಟ್ ಟ್ಯಾಲೆಂಟೆಡ್ ಯಂಗ್​ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಆಟಗಾರನಾಗಿ ಗಿಲ್, ಅತ್ಯುತಮ ಪ್ರದರ್ಶನವನ್ನ ನೀಡಿದ್ದಾರೆ. ನಾಯಕನಾಗಿ ಗಿಲ್​​ ಮೇಲೆ, ಹೆಚ್ಚು ಜವಾಬ್ದಾರಿ ಇದೆ. ಈ ಜವಾಬ್ದಾರಿಯೇ ಗಿಲ್ ಮೇಲೆ ಒತ್ತಡ ಹೇರುವಂತೆ ಮಾಡಿದೆ. ಅನಾನುಭವಿ ನಾಯಕ ಗಿಲ್, ಆದಷ್ಟು ಬೇಗ ಒತ್ತಡದಿಂದ ಹೊರಬರಬೇಕಾಗಿದೆ. ಇಲ್ದಿದ್ರೆ ಗಿಲ್ ಪರ್ಫಾಮೆನ್ಸ್ ಮೇಲೆ, ಪರಿಣಾಮ ಬೀರೋ ಸಾಧ್ಯತೆ ಹೆಚ್ಚಿದೆ.
ಗೊಂದಲದಲ್ಲಿ ರಾಹುಲ್​​ ಪರದಾಟ
ಕನ್ನಡಿಗ ಕೆ.ಎಲ್.ರಾಹುಲ್ ಓರ್ವ ಕ್ಲಾಸ್ ಪ್ಲೇಯರ್. ಯಾವುದೇ ದೇಶ ಇರಲಿ ಅಥವಾ ಯಾವುದೇ ತಂಡ ಇರಲಿ. ರಾಹುಲ್, ತನ್ನ ಕ್ಲಾಸ್ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆದ್ರೆ ಕೆಲವೊಮ್ಮೆ ರಾಹುಲ್​​​, ಗೊಂದಲದಿಂದ ಪರದಾಡುತ್ತಾರೆ. ಕಾರಣ, ರಾಹುಲ್​​ರ ಬ್ಯಾಟಿಂಗ್ ಸ್ಲಾಟ್. ಎಲ್ಲಾ ಸ್ಲಾಟ್​​ಗಳಲ್ಲಿ ಬ್ಯಾಟಿಂಗ್ ಮಾಡೋ ಸಾಮರ್ಥ್ಯ ಹೊಂದಿರೋ ರಾಹುಲ್​​ಗೆ, ಅವರ ಸ್ಲಾಟ್​ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಹಾಗಾಗಿ ರಾಹುಲ್, ಆದಷ್ಟು ಬೇಗ ಟೀಮ್ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿ, ಗೊಂದಲಗಳಿಗೆ ಫುಲ್​ಸ್ಟಾಪ್ ಇಡಬೇಕಾಗುತ್ತದೆ.
ಕನ್ಫೂಶನ್, ಕ್ಲ್ಯಾರಿಟಿ ಌಂಡ್ ಕಮ್ಯೂನಿಕೇಶನ್. ಈ C3 ಇಲ್ಲದಿದ್ರೆ, ಯಾವ ಕೆಲಸವೂ ಆಗೋದಿಲ್ಲ. ಇದನ್ನ ಟೀಮ್ ಇಂಡಿಯಾ ಆಟಗಾರರೂ ಅರ್ಥಮಾಡಿಕೊಳ್ಳಬೇಕು. ಟೀಮ್ ಮ್ಯಾನೇಜ್ಮೆಂಟ್​​ ಕೂಡ ಅರ್ಥಮಾಡಿಕೊಳ್ಳಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ