/newsfirstlive-kannada/media/media_files/2025/11/05/bidar-acchident-2025-11-05-11-42-54.jpg)
ಬೀದರ್: ಕಾರು ಹಾಗೂ ಡಿಟಿಡಿಸಿ ಕೋರಿಯರ್ ವಾಹನದ ನಡುವೆ ಅಪಘಾತ (Road accident) ಸಂಭವಿಸಿ ಮೂವರು ಪ್ರಾಣ ಕಳೆದುಕೊಂಡ ಘಟನೆ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ನಡೆದಿದೆ.
ತೆಲಂಗಾಣ ಮೂಲದ ಇಬ್ಬರು ಸ್ನೇಹಿತರು ಕಾರಿನಲ್ಲಿ ದೇವರ ದರ್ಶನಕ್ಕೆ ಹೊರಟಿದ್ದರು. ಅಂತೆಯೇ ಕಲಬುರಗಿಯ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಮಾಡಿ ವಾಪಸ್ ಬರುವಾಗ ದುರಂತ ಸಂಭವಿಸಿದೆ.
ಇದನ್ನೂ ಓದಿ: ವಿರಾಟ್​ ಕೊಹ್ಲಿ ಅಂದ್ರೆ ಎಲ್ಲರಿಗೂ ಯಾಕಿಷ್ಟ..? Birthday special!
ಕಾರಿನಲ್ಲಿದ್ದ ಇಬ್ಬರು ಹಾಗೂ ಕೊರಿಯರ್ ವಾಹನ ಚಾಲಕ ಕೂಡ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ನಾಗರಾಜ್ ಅನ್ನೋರು ತೆಲಂಗಾಣದ ನಾರಾಯಣಖೇಡ್ ಪಟ್ಟಣದಲ್ಲಿ ಪಿಯು ಕಾಲೇಜ್ ಉಪನ್ಯಾಸಕರಾಗಿದ್ದರು. ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಅಪಘಾತದ ಹೊಡೆತಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಜಖಂಗೊಂಡ ವಾಹನವನ್ನು ಜೆಸಿಬಿ ಸಹಾಯದಿಂದ ರಸ್ತೆ ಕ್ಲೀಯರ್ ಮಾಡಲಾಗಿದೆ. ಘಟನೆ ನಂತರ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು.
ಇದನ್ನೂ ಓದಿ:ಕ್ಲೈಮ್ಯಾಕ್ಸ್​ಗೆ ಬಂದೇ ಬಿಡ್ತಾ ಕುರ್ಚಿ ಕದನ..? ಡಿಕೆಶಿ ದೆಹಲಿ ಪ್ರವಾಸ ಕಥನ ಕುತೂಹಲ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us