/newsfirstlive-kannada/media/media_files/2025/11/05/dk-shivakumar-2-2025-11-05-09-03-27.jpg)
ನವೆಂಬರ್​​ ಕ್ರಾಂತಿ ಆಗುತ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ, ಗದ್ದಲ-ಗಲಾಟೆ ಮಾತ್ರ ಜೋರಾಗಿದೆ.. ಈ ನಡುವೆ ಡಿಸಿಎಂ ಡಿಕೆಶಿ ಮತ್ತೆ ಇವತ್ತು ಮಧ್ಯಾಹ್ನ ದೆಹಲಿಗೆ ಹೊರಟಿದ್ದು, ಕುತೂಹಲ ಡಬಲ್​​​ ಮಾಡಿದೆ.. ನೀರಾವರಿ ಅಧಿಕಾರಿಗಳ ಸಭೆ ನೆಪದಲ್ಲಿ ಡೆಲ್ಲಿಗೆ ತೆರಳ್ತಿರುವ ಡಿಕೆಶಿ, ನಾಳೆ ಪಕ್ಷದ ಪ್ರಮುಖರ ಭೇಟಿಗೆ ಪ್ಲಾನ್​​ ಮಾಡಿದ್ದಾರೆ.. ಅತ್ತ ಬಿಜೆಪಿ ಕುರ್ಚಿ ಕಿತ್ತಾಟವನ್ನೇ ಮ್ಯೂಸಿಕಲ್​ ಚೇರ್​ನ ವಿಡಿಯೋ ರಿಲೀಸ್​​​ ಮಾಡಿದೆ..
ಇದನ್ನೂ ಓದಿ: ಒಂದೇ ಒಂದು ಥ್ರೋನಿಂದ ಬದಲಾಯ್ತು ಅದೃಷ್ಟ.. ವಿಶ್ವಕಪ್ ಗೆದ್ದ ತಾರೆಯರ ಹಾರ್ಟ್​ ಟಚಿಂಗ್ ಸ್ಟೋರಿ..
ರಾಜ್ಯ ಕಾಂಗ್ರೆಸ್​ಲ್ಲಿ ಪವರ್​ ಪಾಲಿಟಿಕ್ಸ್ ಕೋಲಾಹಲವನ್ನೇ ಸೃಷ್ಟಿಸಿದೆ.. ಸಿದ್ದು ಮತ್ತು ಡಿಕೆ ನಡುವಿನ ಜಂಗೀಕುಸ್ತಿಯಲ್ಲಿ ಹತ್ತಾರು ದಾಳಗಳು ಉರುಳಿ ಕಾಲನ ಮಹಿಮೆಗೆ ಕಾಯ್ತಿವೆ.. ಯಾರನ್ನೇ ಕೇಳಿದ್ರೂ ಹೈಕಮಾಂಡ್​ ಕಡೆ ಬೊಟ್ಟು ಮಾಡ್ತಿರುವ ಕಾಂಗ್ರೆಸ್​​​ನಲ್ಲಿ ಯಾವಾಗ ಏನ್​​ ಚೇಂಜೆಸ್​​ ಆಗುತ್ತೆ ಅನ್ನೋದು ಕಲ್ಪನೆಗೂ ನಿಲುಕದ ಊಹೆ ಆಗಿದೆ.. ಈ ಬೆಳವಣಿಗೆಗಳ ನಡುವೆ ಸಿಎಂ ಕುರ್ಚಿ ಏರಲು ಡಿಸಿಎಂ ಡಿಕೆ ಶಿವಕುಮಾರ್​, ವಾರದ ಹಿಂದಷ್ಟೇ ಡೆಲ್ಲಿಗೆ ಹೋಗಿ ರಿಟರ್ನ್​​​ ಆಗಿದ್ರು.. ಬರಿಗೈಯಲ್ಲಿ ಬಂದಿದ್ದ ಡಿಕೆಶಿ, ಮತ್ತೆ ಇವತ್ತು ಡೆಲ್ಲಿ ಫ್ಲೈಟ್​​​ ಹತ್ತಲು ಸಜ್ಜಾಗಿದ್ದಾರೆ..
ಡಿಕೆಶಿ ಪ್ರವಾಸ ಕಥನ.. ಬದಲಾಗುತ್ತಾ ಚಿತ್ರಣ?
ಪವರ್ ಶೇರಿಂಗ್ ಸ್ಪಷ್ಟತೆಗಾಗಿ ಡಿಸಿಎಂ ಡಿಕೆ ಶಿವಕುಮಾರ್​​​, ಇವತ್ತು ಡೆಲ್ಲಿಗೆ ಹೋಗ್ತಿದ್ದಾರೆ.. ಬೆಳಗಾವಿ ಸಾಹುಕಾರ್​​ ಡೆಲ್ಲಿ ಟ್ರಿಪ್​​​ ಕ್ಯಾನ್ಸಲ್​ ಆಗಿದ್ದು, ಈಗ ಪ್ರವಾಸ ಕುತೂಹಲಕ್ಕೆ ಕಾರಣ ಆಗಿದೆ..
ಇದನ್ನೂ ಓದಿ: ಕಬ್ಬು ಬೆಳೆಗಾರರ ರಣಕಹಳೆ.. ರೈತರ ಕಿಚ್ಚಿಗೆ ಮಣಿದು ಸಂಧಾನಕ್ಕೆ ಕಳುಹಿಸಿದ ಸರ್ಕಾರ
ಡೆಲ್ಲಿ ಪ್ರವಾಸ.. ಪಾಲಿಟಿಕ್ಸ್​ ಕಥನ!
- ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೆ ದೆಹಲಿಗೆ ಡಿಕೆಶಿ ಭೇಟಿ
- ನವೆಂಬರ್ ಮೊದಲ ವಾರದಲ್ಲೇ ದೆಹಲಿಯತ್ತ ತೆರಳ್ತಿರುವ ಡಿಸಿಎಂ
- ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ದೆಹಲಿಯತ್ತ ಡಿಕೆಶಿ ಪ್ರವಾಸ
- ಸಂಜೆ ನೀರಾವರಿ ಯೋಜನೆ ವಿಚಾರವಾಗಿ ವಕೀಲರ ಜತೆ ಡಿಕೆ ಸಭೆ
- ಇವತ್ತು ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೋಡುವ ಡಿಕೆ
- ನಾಳೆ ಬಹುತೇಕ ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ
- ಈವರೆಗೆ ಹೈಕಮಾಂಡ್ ಭೇಟಿ ವಿಚಾರ ಅಧಿಕೃತ ಮಾಹಿತಿ ಸಿಕ್ಕಿಲ್ಲ
ಅವಶ್ಯಕತೆ ಬಿದ್ದರೆ ದೆಹಲಿಗೆ ಭೇಟಿ ಮಾಡ್ತೇನೆ!
ಇದರ ನಡುವೆಯೇ ಪರಂ ಹೊಸ ಬಾಂಬ್ ಸಿಡಿಸಿದ್ದಾರೆ.. ಕುರ್ಚಿ ಕ್ಲೈಮ್ಯಾಕ್ಸ್​ಗೆ ಹೋಮ್ ಮಿನಿಸ್ಟರ್ ಸಹ ಡೆಲ್ಲಿ ವಿಸಿಟ್​​​ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.. ದೆಹಲಿಗೆ ನೀವೂ ಹೋಗ್ತೀರಾ ಎಂಬ ಪ್ರಶ್ನೆಗೆ ಯಾಱರು ದೆಹಲಿಗೆ ಹೋಗ್ತಿದ್ದಾರೋ ಗೊತ್ತಿಲ್ಲ.. ನಾನು ಸದ್ಯಕ್ಕೆ ಹೋಗ್ತಿಲ್ಲ.. ಅವಶ್ಯಕತೆ ಬಿದ್ದರೆ ಹೋಗ್ತೇನೆ ಅಂದ್ರು.. ಆದ್ರೆ, ಹಿರಿಯ ಸಚಿವರನ್ನು ಕೈಬಿಡೋದು ಹೈಕಮಾಂಡ್ ತೀರ್ಮಾನಿಸಲಿದೆ ಅಂತ ಸ್ಪಷ್ಟನೆ ಕೊಟ್ರು.. ಇತ್ತ ಸಿಎಂ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್​​, ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಅಂದ್ರು..
ನವೆಂಬರ್ ಕ್ರಾಂತಿಗೆ ಮ್ಯೂಸಿಕಲ್​​​ ಚೇರ್​​​ ಆಟ!
ಈ ಮಧ್ಯೆ ಕಾಂಗ್ರೆಸ್​ನಲ್ಲಿ ಕುರ್ಚಿ ಕಿತ್ತಾಟಕ್ಕೆ ಬಿಜೆಪಿ ವ್ಯಂಗ್ಯ ಮಾಡಿದೆ.. ‘X’ನಲ್ಲಿ ಮ್ಯೂಸಿಕಲ್ ಚೇರ್ ಹಾಕಿ, ಅದಕ್ಕೊಂದು ಹಾಡಿನ ಮೂಲಕ ಸರ್ಕಾರದ ಕಾಲೆಳೆದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಗೃಹ ಸಚಿವ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿಗೆ ನವೆಂಬರ್ ಕ್ರಾಂತಿಗೆ ಕ್ಷಣಗಣನೆ ಅಂತ ಎಂದು ಬರೆದು ಬಿಜೆಪಿ ವ್ಯಂಗ್ಯ ಮಾಡಿದೆ..
ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸ ಈಗಾಗಲೇ ನಿಗದಿಯಾಗಿದೆ. ನವೆಂಬರ್ 14 ರಂದು ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.. ಅಷ್ಟೇ ಅಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ನವೆಂಬರ್​​​ 11ಕ್ಕೆ ಡೆಲ್ಲಿಯಲ್ಲೇ ಠಿಕಾಣಿ ಹೂಡ್ತಿದ್ದಾರೆ.. ಆದ್ರೆ, ಸತೀಶ್ ಜಾರಕಿಹೊಳಿ ಪ್ರವಾಸ ದಿಢೀರ್​​ ಕ್ಯಾನ್ಸಲ್​​​ ಆಗಿರೋದು ಅಚ್ಚರಿಗೆ ಕಾರಣವಾಗಿದೆ.. ಒಟ್ಟಾರೆ, ಸಾಲು ಸಾಲು ನಾಯಕರ ದೆಹಲಿ ಪ್ರವಾಸ ಮಾತ್ರ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ..
ಇದನ್ನೂ ಓದಿ: ಸೇನೆಯಲ್ಲೂ ಮೇಲ್ಜಾತಿಗಳ ಹಿಡಿತ -ರಾಹುಲ್ ಗಾಂಧಿ ಹೊಸ ವಿವಾದ
ನವೆಂಬರ್ ಕ್ರಾಂತಿಗೆ ಕ್ಷಣಗಣನೆ! pic.twitter.com/Be3hAbZiMJ
— BJP Karnataka (@BJP4Karnataka) November 4, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us