BREAKING: ಸಾರಿಗೆ ನೌಕರರ ಜೊತೆಗಿನ ಸಿಎಂ ಸಂಧಾನ ಸಭೆ ವಿಫಲ.. ನಾಳೆ BMTC, KSRTC ಬಸ್​ ಓಡಲ್ಲ!

ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ. ನಾಳೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಬಸ್​​ಗಳು ರಸ್ತೆಗೆ ಇಳಿಯುವುದಿಲ್ಲ

author-image
Veenashree Gangani
cm meeting with transport employee

ಸಾರಿಗೆ ನೌಕರರ ಜೊತೆ ಸಿಎಂ ಸಭೆ

Advertisment
  • ಸುಮಾರು ಎರಡೂವರೆ ಗಂಟೆ ಕಾಲ ನಡೆದ ಸಭೆ
  • ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಭೆ
  • ಜಂಟಿ ಕ್ರಿಯಾ ಸಮಿತಿ ಜೊತೆ ಸಭೆ ನಡೆಸಿದ ಸಿಎಂ

ಬೆಂಗಳೂರು: ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ. ನಾಳೆ ಮುಷ್ಕರ ನಡೆಯುವುದು ಖಚಿತವಾಗಿದೆ. ಹೀಗಾಗಿ ನಾಳೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಬಸ್​​ಗಳು ರಸ್ತೆಗೆ ಇಳಿಯುವುದಿಲ್ಲ.

ಇದನ್ನೂ ಓದಿ: ಒಳ ಮೀಸಲು ಸಮೀಕ್ಷೆಯ ಬಿಗ್​ ಅಪ್​ಡೇಟ್ಸ್​.. ನ್ಯಾ.ನಾಗಮೋಹನದಾಸ್‌ ಆಯೋಗದಿಂದ

ಈ ಬಗ್ಗೆ ಮಾತಾಡಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು, ಸರ್ಕಾರಕ್ಕೂ ನಮಗೂ ತುಂಬಾ ಹೊತ್ತು ಚರ್ಚೆ ನಡೆಯಿತು. ಪ್ರಮುಖವಾಗಿ 38 ತಿಂಗಳ ವೇತನ ಬಾಕಿ ಹಾಗೂ ಹೆಚ್ಚಳದ ಬಗ್ಗೆ ಚರ್ಚೆ ನಡೀತು. ಎರಡು ವರ್ಷ ಕೊಡ್ತೀವಿ, ಇನ್ನೆರಡು ವರ್ಷ ಕೊಡೋದಕ್ಕೆ ಆಗೋದಿಲ್ಲ ಎಂದಿದ್ದಾರೆ. ವೇತನ ಹೆಚ್ಚಳದ ಬಗ್ಗೆ ಯಾವ ನಿರ್ಣಯ ಹೇಳಿಲ್ಲ. ಹಾಗಾಗಿ ನಮ್ಮ ಯಾವುದೇ ಬೇಡಿಕೆ ಈಡೇರಿಲ್ಲ. ನಾಳೆ ಬೆಳಗ್ಗೆಯಿಂದಲೇ ಮುಷ್ಕರ ನಡೆಸುತ್ತೇವೆ ಎಂದರು.

ಇದನ್ನೂ ಓದಿ: ನಾಳೆ BMTC, KSRTC ರಸ್ತೆಗೆ ಇಳಿಯೋದು ಡೌಟು.. ಕುತೂಹಲ ಮೂಡಿಸಿದ ಸಿಎಂ ಸಭೆ

ಸಾರಿಗೆ ನೌಕರರ ಬೇಡಿಕೆಗಳು?

  • 38 ತಿಂಗಳ ವೇತನದ ಅರಿಯರ್ಸ್ ಬಾಕಿ ಹಣ ನೀಡಬೇಕು
  • ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು
  • ಖಾಸಗೀಕರಣ ಭ್ರಷ್ಟಾಚಾರ ಕಾರ್ಮಿಕರ ಕಿರುಕುಳ ನಿಲ್ಲಬೇಕು
  • ನಗದು ರಹಿತ ವೈದ್ಯಕೀಯ ಸೌಲಭ್ಯ
  • ನಮ್ಮ ಹಕ್ಕಿನ ರಜೆ
  • 1-1-2024 ರಿಂದ ವೇತನ ಜಾರಿಗೊಳಿಸುವುದು
  • ಉತ್ತಮ ಕ್ಯಾಂಟೀನ್ ವ್ಯವಸ್ಥೆ
  • ಈ ಹಿಂದೆ 2020 ಮತ್ತು 2021 ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ
  • ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು
  • ಸಾರಿಗೆ ನಿಗಮದ ವಿದ್ಯುತ್‌ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು
  • ಈ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ದತಿ ಕೈಬಿಡಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Govt ಸಾರಿಗೆ ನೌಕರರ ಪ್ರತಿಭಟನೆ
Advertisment